ಜೆಟ್ ಏರ್ವೇಸ್ ಸಿಎಫ್ಓ ಅಮಿತ್ ಅಗರವಾಲ್ ರಾಜೀನಾಮೆ

ಜೆಟ್ ಏರ್ವೇಸ್ ಉಪ ಮುಖ್ಯ ಕಾರ್ಯನಿರ್ವಾಹಕ ಮತ್ತು ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಅಗರ್ವಾಲ್ ವೈಯಕ್ತಿಕ ಕಾರಣಗಳಿಂದಾಗಿ ರಾಜಿನಾಮೆ ನೀಡಿದ್ದಾರೆ ಎಂದು ಜೆಟ್ ಏರ್ವೇಸ್ ಮಂಗಳವಾರ ತಿಳಿಸಿದೆ.

Last Updated : May 14, 2019, 10:54 AM IST
ಜೆಟ್ ಏರ್ವೇಸ್ ಸಿಎಫ್ಓ ಅಮಿತ್ ಅಗರವಾಲ್ ರಾಜೀನಾಮೆ  title=

ನವದೆಹಲಿ: ಜೆಟ್ ಏರ್ವೇಸ್ ಉಪ ಮುಖ್ಯ ಕಾರ್ಯನಿರ್ವಾಹಕ ಮತ್ತು ಮುಖ್ಯ ಹಣಕಾಸು ಅಧಿಕಾರಿ ಅಮಿತ್ ಅಗರ್ವಾಲ್ ವೈಯಕ್ತಿಕ ಕಾರಣಗಳಿಂದಾಗಿ ರಾಜಿನಾಮೆ ನೀಡಿದ್ದಾರೆ ಎಂದು ಜೆಟ್ ಏರ್ವೇಸ್ ಮಂಗಳವಾರ ತಿಳಿಸಿದೆ.

ಮಂಗಳವಾರದಂದು ಜೆಟ್ ಏರ್ವೇಸ್ ಷೇರುಗಳು ಶೇಕಡಾ 12 ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಕುಸಿದ ಹಿನ್ನಲೆಯಲ್ಲಿ ಅವರ ರಾಜೀನಾಮೆ ಬಂದಿದೆ. ವಿಮಾನಯಾನವು 1.2 ಶತಕೋಟಿ $ ನಷ್ಟು ಸಾಲವನ್ನು ಎದುರಿಸುತ್ತಿದೆ, ಪೂರೈಕೆದಾರರು, ಪೈಲಟ್ಗಳು ಮತ್ತು ತೈಲ ಕಂಪೆನಿಗಳಿಗೆ ಹಣ ನೀಡಬೇಕಿದೆ.ಇದರ ಸಾಲದಾತರು ಏರ್ಲೈನ್ನಲ್ಲಿ ನಿಯಂತ್ರಣದ ಪಾಲನ್ನು ತೆಗೆದುಕೊಂಡಿದ್ದಾರೆ ಮತ್ತು ಪ್ರಸ್ತುತ ತಮ್ಮ ಬಾಕಿಗಳನ್ನು ಮರುಪಡೆದುಕೊಳ್ಳಲು ಪಾಲನ್ನು ಮಾರಾಟ ಮಾಡುವಲ್ಲಿ ನಿರತರಾಗಿದ್ದಾರೆ.

ಅಮಿತ್ ಅಗರ್ವಾಲ್ ಅವರ ರಾಜೀನಾಮೆ ಮೇ 13 ರಂದು ಜಾರಿಗೆ ಬಂದಿದ್ದು, ಆದರೆ ಇದುವರೆಗೆ ಆ ಹುದ್ದೆಗೆ ಯಾರನ್ನು ಹೆಸರಿಸಿಲ್ಲ ಎನ್ನಲಾಗಿದೆ.ಅಮಿತ್ ಅವರು 2015 ರಲ್ಲಿ ಜೆಟ್ ಏರ್ವೇಸ್ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇರಿಕೊಂಡಿದ್ದರು. ಎಸ್ಟಿಐ ಕ್ಯಾಪಿಟಲ್ ಮಾರ್ಕೆಟ್ಸ್ ಎಂಬ ಎಸ್ಬಿಐ ಘಟಕವು ಕಳೆದ ವಾರ ಜೆಟ್ ಏರ್ವೇಸ್ನ ಸಾಲದಾತರ ತಂಡವನ್ನು ಎತಿಹಾದ್ ಏರ್ವೇಸ್ನಿಂದ ಬಿಡ್ ನ್ನು ಸ್ವೀಕರಿಸಿದೆ ಎಂದು ತಿಳಿಸಿದೆ.ಶುಕ್ರವಾರ ಷೇರುದಾರರ ಮಾರಾಟದ ಅಡಿಯಲ್ಲಿ ತಮ್ಮ ಬಿಡ್ಗಳನ್ನು ಸಲ್ಲಿಸಲು ಅಂತಿಮ ಗಡುವನ್ನು ನೀಡಲಾಗಿತ್ತು.

ಈಗ ಜೆಟ್ ಏರ್ವೇಸ್ ಶೇರು ಮಾರುಕಟ್ಟೆಯಲ್ಲಿ 12.44 ರಷ್ಟು ಕುಸಿದಿದೆ ಎಂದು ತಿಳಿದುಬಂದಿದೆ.

Trending News