ಅಯೋಧ್ಯೆಯಲ್ಲಿ ಜೈಶ್, ಲಷ್ಕರ್ ಭಯೋತ್ಪಾದಕರಿಂದ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಎಚ್ಚರಿಕೆ

ಗುಪ್ತಚರ ಸಂಸ್ಥೆಗಳು ರಾಷ್ಟ್ರ ರಾಜಧಾನಿ ದೆಹಲಿ, ಅಯೋಧ್ಯೆ ಮತ್ತು ಕಾಶ್ಮೀರದಲ್ಲಿ ಅಲರ್ಟ್ ಆಗಿರುವಂತೆ ಗುಪ್ತಚರ ಇಲಾಖೆಯು ಸೂಚಿಸಿದೆ.

Last Updated : Jul 28, 2020, 03:45 PM IST
ಅಯೋಧ್ಯೆಯಲ್ಲಿ ಜೈಶ್, ಲಷ್ಕರ್ ಭಯೋತ್ಪಾದಕರಿಂದ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ  ಎಚ್ಚರಿಕೆ title=

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ಮತ್ತು ಆಗಸ್ಟ್ 15 ರಂದು ಭಾರತದಲ್ಲಿ ಭಯೋತ್ಪಾದಕ ದಾಳಿಯ ಸಂಚು ನಡೆಯಲಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಇಂಟೆಲಿಜೆನ್ಸ್ ಏಜೆನ್ಸಿ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ಆರ್ & ಎಡಬ್ಲ್ಯೂ) ಪ್ರಕಾರ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಈ ಬಾರಿ ಅಫ್ಘಾನಿಸ್ತಾನದಲ್ಲಿ ಜೈಶ್ ಮತ್ತು ಲಷ್ಕರ್ ಭಯೋತ್ಪಾದಕರಿಗೆ ಭಾರತದಲ್ಲಿ ತರಬೇತಿ ನೀಡಿದೆ ಮತ್ತು ಅವರನ್ನು ಮೂರರಿಂದ ಐದು ಗುಂಪುಗಳಲ್ಲಿ ಭಾರತಕ್ಕೆ ಕಳುಹಿಸಲು ಸಂಚು ಮಾಡಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಜೈಶ್ ಭಯೋತ್ಪಾದಕರು ಆತ್ಮಹತ್ಯಾ ದಾಳಿಗೆ ಹೆಸರುವಾಸಿಯಾಗಿದೆ.

ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ (Ram Mandir) ಶಿಲಾನ್ಯಾಸ ನೆರವೇರಿಸಲಿದ್ದು, ಕಳೆದ ವರ್ಷ ಅದೇ ದಿನದಂದು (2019 ರ ಆಗಸ್ಟ್ 5) ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ನೇ ವಿಧಿಯನ್ನು ತೆಗೆದುಹಾಕಿತು. 

ಅಯೋಧ್ಯೆಯಲ್ಲಿ ಆಗಸ್ಟ್ 4, 5ರಂದು ತೆರೆಯಲಿವೆ ಎಲ್ಲಾ ದೇವಾಲಯಗಳು

ಬಳಿಕ ಭಯೋತ್ಪಾದಕರು ಮತ್ತು ಐಎಸ್‌ಐ (ISI) ಭಾರತದ ಮೇಲೆ ದೊಡ್ಡ ದಾಳಿ ನಡೆಸಲು ನಿರಂತರವಾಗಿ ಹೊಂಚು ರೂಪಿಸುತ್ತಿದೆ. ಇದಲ್ಲದೆ ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯೂ ಇದೆ ಮತ್ತು ಭಯೋತ್ಪಾದಕ ಗುಂಪುಗಳು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಬೇಕೆಂದು ಪಾಕಿಸ್ತಾನ ಬಯಸಿದೆ, 

ಭಯೋತ್ಪಾದಕರ ವಿವಿಐಪಿಗಳ ಮೇಲೆ ಗುರಿ ಇಟ್ಟಿರುವುದರಿಂದ ದೆಹಲಿ, ಅಯೋಧ್ಯೆ (Ayodhya) ಮತ್ತು ಕಾಶ್ಮೀರದಲ್ಲಿ ಜಾಗರೂಕತೆ ವಹಿಸುವಂತೆ  ಗುಪ್ತಚರ ಸಂಸ್ಥೆಗಳು ಆದೇಶಿಸಿವೆ.
 

Trending News