ಹಿಮಾಚಲ ಪ್ರದೇಶ ಸಿಎಂ ಆಗಿ ಜಯರಾಂ ಠಾಕೂರ್ ಪ್ರಮಾಣ ವಚನ ಸ್ವೀಕಾರ

ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಜೈ ರಾಮ್ ಠಾಕೂರ್ ಹಾಗೂ ಅವರ ಸಂಪುಟದ 10 ಮಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. 

Last Updated : Dec 27, 2017, 04:29 PM IST
  • ಹಿಮಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್ ಪ್ರಮಾಣವಚನ ಸ್ವೀಕಾರ.
  • ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಂದ ಜೈ ರಾಮ್ ಠಾಕೂರ್ ಹಾಗೂ ಅವರ ಸಂಪುಟದ 10 ಮಂದಿಗೆ ಪ್ರತಿಜ್ಞಾ ವಿಧಿ ಬೋಧನೆ.
  • ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಜೈರಾಮ್ ಠಾಕೂರ್.
ಹಿಮಾಚಲ ಪ್ರದೇಶ ಸಿಎಂ ಆಗಿ ಜಯರಾಂ ಠಾಕೂರ್ ಪ್ರಮಾಣ ವಚನ ಸ್ವೀಕಾರ title=

ಹಿಮಾಚಲ ಪ್ರದೇಶ ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್ ಅವರು ಬುಧವಾರದಂದು ಪ್ರಮಾಣ ವಚನ ಸ್ವೀಕರಿಸಿದರು. 

ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಜೈ ರಾಮ್ ಠಾಕೂರ್ ಹಾಗೂ ಅವರ ಸಂಪುಟದ 10 ಮಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. 

ಜೈರಾಮ್ ಠಾಕೂರ್ ಅವರೊಂದಿಗೆ ಮಹೇಂದ್ರ ಸಿಂಗ್, ಸುರೇಶ್ ಭಾರದ್ವಾಜ್, ಅನಿಲ್ ಶರ್ಮ, ಸರ್ವೀನ್ ಚೌಧುರಿ, ರಾಮ್ ಲಾಲ್ ಮರ್ಖಂಡ್, ವಿಪಿನ್ ಸಿಂಗ್ ಪರ್ಮಾರ್, ವೀರೇಂದ್ರ ಕನ್ವರ್, ವಿಕ್ರಮ್ ಸಿಂಗ್, ಗೋವಿಂದ್ ಸಿಂಗ್ ಹಾಗೂ ರಾಜೀವ್ ಸಹ್ಜಲ್ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಹಿಮಾಚಲ ಪ್ರದೇಶ ವಿಧಾನಸಭೆಯ 68 ಸ್ಥಾನಗಳ ಪೈಕಿ ಬಿಜೆಪಿ 44 ಹಾಗೂ ಕಾಂಗ್ರೆಸ್ 21 ಸ್ಥಾನಗಳನ್ನು ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ಜೈರಾಮ್ ಠಾಕೂರ್ ಅವರು ಮಂಡಿ ಜಿಲ್ಲೆಯ ಸೆರಾಜ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 52 ವರ್ಷ ವಯಸ್ಸಿನ ಠಾಕೂರ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

Trending News