ಕೆಫೆ ಕಾಫಿ ಡೇ ಶೇರು ಖರೀದಿಗೆ ಮುಂದಾದ ಐಟಿಸಿ ಸಿಗರೇಟ್ ಕಂಪನಿ

ದೇಶದ ಅತಿ ದೊಡ್ಡ ಸಿಗರೆಟ್ ತಯಾರಕ ಕಂಪನಿ ಐಟಿಸಿ ಲಿಮಿಟೆಡ್ ಈಗ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಶೇರು ಖರೀದಿಗೆ ಮುಂದಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

Last Updated : Aug 21, 2019, 06:19 PM IST
ಕೆಫೆ ಕಾಫಿ ಡೇ ಶೇರು ಖರೀದಿಗೆ ಮುಂದಾದ ಐಟಿಸಿ ಸಿಗರೇಟ್ ಕಂಪನಿ   title=

ನವದೆಹಲಿ: ದೇಶದ ಅತಿ ದೊಡ್ಡ ಸಿಗರೆಟ್ ತಯಾರಕ ಕಂಪನಿ ಐಟಿಸಿ ಲಿಮಿಟೆಡ್ ಈಗ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಶೇರು ಖರೀದಿಗೆ ಮುಂದಾಗಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.ಈಗ ಐಟಿಸಿ ತನ್ನ ಉದ್ಯಮದ ವಿಸ್ತರಣೆ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿದ್ದು, ಅದರ ಭಾಗವಾಗಿ ಈಗ ಕಾಫಿ ಡೇ ಯಲ್ಲಿನ ಶೇರುಗಳನ್ನು ಖರೀದಿಸಲು ಮುಂದಾಗಿದೆ ಎಂದು ವರದಿಗಳು ಹೇಳಿವೆ. ಐಟಿಸಿ ಕ್ಲಾಸಿಕ್ ಹಾಗೂ ಗೋಲ್ಡ್ ಫೇಕ್ ಸಿಗರೇಟ್ ತಯಾರಿಕೆಗೆ ಹೆಸರುವಾಸಿಯಾಗಿದೆ.

ಭಾರತವು ತಂಬಾಕಿನ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ನಿಷೇಧ ಮಾಡಿರುವುದರಿಂದ ಈಗ ಐಟಿಸಿ ಸಿಗರೇಟ್ ಮೇಲಿನ ಅವಲಂಬನೆ ಕಡಿತಗೊಳಿಸಿ ತನ್ನ ವ್ಯವಹಾರವನ್ನು ವಿಸ್ತರಿಸಲು ಮುಂದಾಗಿದೆ ಎನ್ನಲಾಗಿದೆ. ಆ ನಿಟ್ಟಿನಲ್ಲಿ ಕಾಫಿ ಡೇ ಸಹಾಯಕವಾಗಲಿದೆ ಎನ್ನಲಾಗಿದೆ. ಈಗ ಮೂಲಗಳು ಹೇಳುವಂತೆ ಈ ವಿಚಾರವಾಗಿ ಚರ್ಚೆಯು ಪ್ರಾಥಮಿಕ ಹಂತದಲ್ಲಿದೆ. ಆದರೆ ಇದುವರೆಗೆ ಕಾಫಿ ಡೇ ಈ ವಿಚಾರವಾಗಿ ಹೇಳಿಕೆ ನೀಡಲು ನಿರಾಕರಿಸಿದೆ.

ಇತ್ತೀಚಿಗೆ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡ ನಂತರ ಕಂಪನಿ ಸಂಕಷ್ಟದಲ್ಲಿ ಸಿಲುಕಿದೆ. ಮುಂಬೈನಲ್ಲಿ ಮಧ್ಯಾಹ್ನ ವಹಿವಾಟಿನಲ್ಲಿ ಐಟಿಸಿಯ ಷೇರುಗಳು 2.2% ನಷ್ಟು ಕುಸಿದಿದ್ದರೆ, ಕಾಫಿ ಡೇ 5% ಏರಿಕೆಯಾಗಿದ್ದು, ಮೂರು ದಿನಗಳಲ್ಲಿ ಷೇರುಗಳು ಸುಮಾರು 16% ಕ್ಕೆ ವಿಸ್ತರಿಸಿದೆ.

ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾದ ಪ್ರಕಾರ, ಕಾಫಿ ಡೇ ಸುಮಾರು 1,700 ಮಳಿಗೆಗಳನ್ನು ಹೊಂದಿದೆ, ಇದು ಸ್ಟಾರ್‌ಬಕ್ಸ್ ಕಾರ್ಪ್ ನಡೆಸುತ್ತಿರುವದಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ. ಕಾಫಿ ಡೇಯಲ್ಲಿ ಈಗ ಖಾಸಗಿ ಸಂಸ್ಥೆ ಕೆಕೆಆರ್ ಮತ್ತು ಕಂಪನಿಯ ಒಂದು ಘಟಕವು 6.07% ನಷ್ಟು ಪಾಲನ್ನು ಹೊಂದಿದೆ. ಸ್ಟ್ಯಾಂಡರ್ಡ್ ಚಾರ್ಟರ್ಡ್ ಪ್ರೈವೇಟ್  5.7% ರಷ್ಟನ್ನು ಹೊಂದಿದ್ದರೆ, ಇನ್ಫೋಸಿಸ್ ಲಿಮಿಟೆಡ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಅವರು 2.69% ಪಾಲನ್ನು ಹೊಂದಿದ್ದಾರೆ. 

Trending News