ಇಸ್ರೋ ಮತ್ತೊಂದು ಮೈಲಿಗಲ್ಲು; ಪಿಎಸ್‍ಎಲ್‍ವಿ-ಸಿ43 ಉಡಾವಣೆ ಯಶಸ್ವಿ

'ಹೈಸಿಸ್‌' ಹಾಗೂ ಇತರ 30 ಪುಟ್ಟ ಉಪಗ್ರಹಗಳನ್ನು ಹೊತ್ತ 'ಪಿಎಸ್‌ಎಲ್‌ವಿ-ಸಿ43' ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

Last Updated : Nov 29, 2018, 08:19 PM IST
ಇಸ್ರೋ ಮತ್ತೊಂದು ಮೈಲಿಗಲ್ಲು; ಪಿಎಸ್‍ಎಲ್‍ವಿ-ಸಿ43 ಉಡಾವಣೆ ಯಶಸ್ವಿ  title=

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಇಸ್ರೋ ಗುರುವಾರ ಇನ್ನೊಂದು ಮಹ್ವತದ ಸಾಧನೆ ಮಾಡಿದ್ದು, ಮತ್ತೊಂದು ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಭೂ ಪರಿವೀಕ್ಷಣೆಗೆ ಬಳಸಲಾಗುವ 'ಹೈಸಿಸ್‌' ಹಾಗೂ ಇತರ 30 ಪುಟ್ಟ ಉಪಗ್ರಹಗಳನ್ನು ಹೊತ್ತ 'ಪಿಎಸ್‌ಎಲ್‌ವಿ-ಸಿ43' ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಬೆಳಗ್ಗೆ 9.58ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಈ ಮೂಲಕ 380 ಕೆ.ಜಿ. ತೂಕದ ರಾಕೆಟ್, ಉಪಗ್ರಹವನ್ನು ಭೂಮಿಯಿಂದ 636 ಕಿ.ಮೀ. ಎತ್ತರದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. ಹೈಸಿಸ್ ಅಲ್ಲದೆ ವಿದೇಶದ ಇತರ 30 ಉಪಗ್ರಹಗಳು ಪಿಎಸ್‍ಎಲ್‍ವಿ-ಸಿ43 ಜತೆ ಜ್ಯೋತಿರ್ಮಂಡಲ ಕಕ್ಷೆಯನ್ನು ಯಶಸ್ವಿಯಾಗಿ ಸೇರಿವೆ. ಅಮೆರಿಕದ 23, ಆಸ್ಟ್ರೇಲಿಯಾ, ಕೆನಡಾ, ಕೊಲಂಬಿಯಾ, ಫಿನ್‍ಲ್ಯಾಂಡ್, ಮಲೇಷಿಯಾ, ನೆದರ್‍ಲ್ಯಾಂಡ್ಸ್ ಮತ್ತು ಸ್ಪೇನ್ ದೇಶದ ತಲಾ ಒಂದೊಂದು ಉಪಗ್ರಹಗಳು ಸಹ ಇದರೊಂದಿಗೆ ಬಾಹ್ಯಾಕಾಶಕ್ಕೆ ಸೇರ್ಪಡೆಯಾಗಿವೆ. 

ಭೂ ಮೇಲ್ಮೈ ಅನ್ನು ಇನ್‌ಫ್ರಾರೆಡ್‌ ಮತ್ತು ಶಾರ್ಟ್‌ವೇರ್‌ ಇನ್‌ಫ್ರಾರೆಡ್‌ ಕಿರಣಗಳ ನೆರವಿನಿಂದ ಹತ್ತಿರದಿಂದ ಪರಿಶೀಲಿಸುವ ಉದ್ದೇಶದಿಂದ ಇಸ್ರೊ ಖುದ್ದಾಗಿ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಿತ್ತು. ಈ ಉಪಗ್ರಹವು ಭೂಮಿ ವೀಕ್ಷಣೆ, ಅಂತರಿಕ್ಷದಿಂದ ಭೂ ಮಂಡಲದ ಚಲನ-ವಲನಗಳ ಮೇಲೆ ನಿಗಾ (ಅಂತರಿಕ್ಷ ಬೇಹುಗಾರಿಕೆ), ಹಮಾವಾನ ಮುನ್ಸೂಚನೆ, ನೆಟ್‍ವರ್ಕ್ ವೇಗ ವೃದ್ಧಿ, ಜಾಗತಿಕ ಮಾಹಿತಿ ವಿನಿಮಯ, ಮಾಹಿತಿ-ತಂತ್ರಜ್ಞಾನ ಜಾಲ ವಿಸ್ತರಣೆ ಮೊದಲಾದ ಮಹತ್ವದ ಉದ್ದೇಶಗಳಿಗೆ ಈ ಉಪಗ್ರಹಗಳು ನೆರವಾಗಲಿವೆ.

Trending News