ರಾಬರ್ಟ್ ವಾದ್ರಾ ಅಥವಾ ಪ್ರಧಾನಿ ಮೋದಿಯೇ ಇರಲಿ ಎಲ್ಲರನ್ನು ತನಿಖೆಗೆ ಒಳಪಡಿಸಿ- ರಾಹುಲ್ ಗಾಂಧಿ

ಸರ್ಕಾರಕ್ಕೆ ರಾಬರ್ಟ್ ವಾದ್ರಾರನ್ನು ತನಿಖೆಗೆ ಒಳಪಡಿಸುವ ಎಲ್ಲ ಹಕ್ಕು ಇದೆ.ಆದರೆ ಕಾನೂನು ಆಯ್ಕೆ ಮೂಲಕ ಅನ್ವಯಗೊಳಿಸುಬಾರದು ಎಂದು ರಾಹುಲ್ ಗಾಂಧಿ ಹೇಳಿದರು.

Last Updated : Mar 13, 2019, 02:57 PM IST
ರಾಬರ್ಟ್ ವಾದ್ರಾ ಅಥವಾ ಪ್ರಧಾನಿ ಮೋದಿಯೇ ಇರಲಿ ಎಲ್ಲರನ್ನು ತನಿಖೆಗೆ ಒಳಪಡಿಸಿ- ರಾಹುಲ್ ಗಾಂಧಿ      title=
Photo courtesy: Twitter

ನವದೆಹಲಿ: ಸರ್ಕಾರಕ್ಕೆ ರಾಬರ್ಟ್ ವಾದ್ರಾರನ್ನು ತನಿಖೆಗೆ ಒಳಪಡಿಸುವ ಎಲ್ಲ ಹಕ್ಕು ಇದೆ.ಆದರೆ ಆಯ್ಕೆ ಕಾನೂನಿನ ಮೂಲಕ ಅನ್ವಯಗೊಳಿಸುಬಾರದು ಎಂದು ರಾಹುಲ್ ಗಾಂಧಿ ಹೇಳಿದರು.

ಚೆನ್ನೈನಲ್ಲಿ ಸ್ಟೆಲ್ಲಾ ಮೇರಿಸ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುತ್ತಾ ಮಾತನಾಡಿದ ರಾಹುಲ್ ಗಾಂಧಿ " ಸರ್ಕಾರಕ್ಕೆ ಅವರನ್ನು ತನಿಖೆಗೆ ಒಳಪಡಿಸುವ ಎಲ್ಲ ಹಕ್ಕು ಇದೆ. ಆದರೆ  ಆಯ್ಕೆ ಕಾನೂನಿನ ಮೂಲಕ ಅನ್ವಯಗೊಳಿಸಬಾರದು " ಎಂದು ಹೇಳಿದರು.

ನೀರವ್ ಮೋದಿಯವರ ಬ್ಯಾಂಕ್ ವಂಚನೆ ಪ್ರಕರಣದ ವಿಚಾರವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ವಾದ್ರಾ ಕುರಿತು ಮಾತನಾಡದಿರುವುದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರು ಕೂಡ ರಫೇಲ್ ವಿಚಾರವಾಗಿ ಮಾತನಾಡಬೇಕು ಎಂದು ಹೇಳಿದರು.

"ರಫೇಲ್ ವಿಚಾರವಾಗಿ ಪ್ರಧಾನಮಂತ್ರಿ ಹೆಸರು ಕೂಡ ಸರ್ಕಾರಿ ದಾಖಲೆಯಲ್ಲಿದೆ ಆದ್ದರಿಂದ ಎಲ್ಲರನ್ನು ತನಿಖೆಗೆ ಒಳಪಡಿಸಿ ಅದು ವಾದ್ರಾ ಇರಲಿ ಅಥವಾ ಪ್ರಧಾನಿ ಇರಲಿ " ಎಂದು ಹೇಳಿದರು.

ನಿಮ್ಮಲ್ಲಿ ಎಷ್ಟು ಜನರು ಪ್ರಧಾನಿ 3000 ಸಾವಿರ ಮಹಿಳೆಯರ ನಡುವೆ ನಿಂತು ಭಾಷಣ ಮಾಡಿದ್ದನ್ನು ನೋಡಿದ್ದಿರಾ? ನಿಮ್ಮಲ್ಲಿ ಎಷ್ಟು ಜನರು ಪ್ರಧಾನಿ ಈ ರೀತಿ ನಿಂತು ಪ್ರಶ್ನೆ ಎದುರಿಸಿರುವುದನ್ನು ನೋಡಿದ್ದಿರಿ ಎಂದು ರಾಹುಲ್ ಅಲ್ಲಿ ನೆರೆದಿದ್ದ ಪ್ರೇಕ್ಷರಿಕೆ ಕೇಳಿದರು.

 

Trending News