Controversy: 'ಮದರ್ಸಾ ಹಾಗೂ ಎಎಂಯುಗಳನ್ನು ಬಾಂಬ್ ಬಳಸಿ ಬ್ಲಾಸ್ಟ್ ಮಾಡಬೇಕು' : ಸ್ವಾಮಿ ಯತಿ ನರಸಿಂಹಾನಂದ್

Swami Yati Narasimhanand Controversial Statement: ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹಾನಂದರು ಒಂದು ನಿರ್ದಿಷ್ಟ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಳುಕಿಕೊಂಡಿದ್ದಾರೆ. ಅವರ ವಿರುದ್ಧ ಇದೀಗ ಗಾಂಧಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Written by - Nitin Tabib | Last Updated : Sep 19, 2022, 02:35 PM IST
  • ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ (AMU) ಮತ್ತು ಮದರಸಾಗಳನ್ನು ಬಾಂಬ್‌ಗಳಿಂದ ಸ್ಫೋಟಿಸುವ ಬಗ್ಗೆ ಮಾತನಾಡಿದ ಸ್ವಾಮಿ ಯತಿ ನರಸಿಂಹಾನಂದ
  • ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯೂ ಕೂಡ ಒಂದು ಜೋಕ್ ಎಂದ ಸ್ವಾಮೀಜಿ
Controversy: 'ಮದರ್ಸಾ ಹಾಗೂ ಎಎಂಯುಗಳನ್ನು ಬಾಂಬ್ ಬಳಸಿ ಬ್ಲಾಸ್ಟ್ ಮಾಡಬೇಕು' : ಸ್ವಾಮಿ ಯತಿ ನರಸಿಂಹಾನಂದ್ title=
Swami Yati Narasimhanand

Swami Yati Narasimhanand Controversial Statement: ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹಾನಂದ ಅವರು ನಿರ್ದಿಷ್ಟ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಯತಿ ನರಸಿಂಹಾನಂದ ಅವರು ಆಲಿಘರ್ ಗೆ ಬಂದಿದ್ದರು, ಅಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ (AMU) ಮತ್ತು ಮದರಸಾಗಳನ್ನು ಬಾಂಬ್‌ಗಳಿಂದ ಸ್ಫೋಟಿಸುವ ಬಗ್ಗೆ ಮಾತನಾಡಿದ್ದಾರೆ. ಅವರು ನೀಡಿರುವ ಈ ಹೇಳಿಕೆಯ ನಂತರ, ಕಾರ್ಯಕ್ರಮದ ಆಯೋಜಕ, ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷೆ ಪೂಜಾ ಶಕುನ್ ಪಾಂಡೆ, ರಾಷ್ಟ್ರೀಯ ವಕ್ತಾರ ಅಶೋಕ್ ಪಾಂಡೆ ವಿರುದ್ಧ ಗಾಂಧಿ ಪಾರ್ಕ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ' ಕುರಿತು ಅಪಹಾಸ್ಯ
ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ'ಯ ಕುರಿತು ಕೂಡ ಯತಿ ನರಸಿಂಹಾನಂದ್  ಗೇಲಿ ಮಾಡಿದಾರೆ ಮತ್ತು ಅದನ್ನು ಒಂದು ದೊಡ್ಡ ತಮಾಷೆ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ ರಾಹುಲ್ ಗಾಂಧಿಯನ್ನು ಜಿಹಾದಿಗಳ ಸ್ನೇಹಿತ ಎಂದು ಕರೆದಿದ್ದಾರೆ. ಯುಪಿಯಲ್ಲಿ ಗೆಲ್ಲಲಾಗದೆ ಕೇರಳಕ್ಕೆ ಹೋಗಿ ವಯನಾಡಿನಿಂದ ಸ್ಪರ್ಧಿಸಿದ್ದರು. ಭಾರತವನ್ನು ಒಂದುಗೂಡಿಸುವ ಐತಿಹಾಸಿಕ ಅವಕಾಶ ಸಿಕ್ಕಿತ್ತು ಆದರೆ, ಗಾಂಧಿ ಕುಟುಂಬ ದೇಶವನ್ನೇ ಹಾಳು ಮಾಡಿದೆ ಎಂದಿದ್ದಾರೆ.

ಜ್ಞಾನವಾಪಿ ಮತ್ತು ಲಖಿಂಪುರ ಘಟನೆಯ ಕುರಿತು ಹೇಳಿದ್ದೇನು?
ಜ್ಞಾನವಾಪಿ ಮಸೀದಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೂ ಸಮಾಜ ಜಾಗೃತಗೊಂಡಿದೆ ಎಂದರು. ಶೀಘ್ರದಲ್ಲೇ ಅದು ಹಿಂದೂ ಸಮಾಜದ ಬಳಿ ಮರಳಿ ಬರಲಿದೆ. ಮಕ್ಕೇಶ್ವರ ಮಹಾದೇವನ ಮೇಲೆ ಶ್ರಮಿಸಬೇಕು ಎಂದರು. ಮಕ್ಕೇಶ್ವರ ಮಹಾದೇವ ನಮ್ಮ ಬಳಿಗೆ ಬರಬೇಕಾದರೆ, ಒಬ್ಬರು  ಪಣವನ್ನೆ ತೊಡಬೇಕು. ಕೇವಲ ಜ್ಞಾನವಪಿಯಿಂದ ಏನಾಗುತ್ತದೆ? ನಮಗೆ ಮಕ್ಕೇಶ್ವರ ಮಹಾದೇವ ಕೂಡ ಬೇಕು. ಇಡೀ ಜಗತ್ತಿನಲ್ಲಿ ಎಲ್ಲೆಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಲಾಗಿದೆಯೋ, ಆ ಎಲ್ಲಾ ಸ್ಥಳಗಳು ನಮಗೆ ಮರಳಿ ಬರಬೇಕು. ಇದುವೇ ಧರ್ಮ. ಇದುವೇ ಮಾನವೀಯತೆ. ಇದಕ್ಕಾಗಿ ಏನು ಮಾಡಬೇಕು. ಅದನ್ನು ಮಾಡಬೇಕು ಎಂದಿದ್ದಾರೆ. 

ಲಖೀಂಪುರ ಖೇರಿ ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಅದು ಅಪರಾಧವಲ್ಲ, ಇಸ್ಲಾಂನ ಜಿಹಾದ್ ಆಗಿದೆ ಎಂದು ಹೇಳಿದ್ದಾರೆ. ಕಳೆದ 14 ನೂರು ವರ್ಷಗಳಿಂದ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಬೇಟೆಯಾಡುತ್ತಿರುವ ಜಿಹಾದಿಗಳು ಈ ಘಟನೆಯನ್ನು ನಡೆಸಿದ್ದಾರೆ. ಅಲ್ಲಿ ಜಿಹಾದ್ ನಡೆದಿದೆ, ಮೊದಲು ಜಿಹಾದ್ ಅರ್ಥ ಮಾಡಿಕೊಂಡು ಜಿಹಾದ್ ತೊಲಗಿಸಿ ಎಂದಿದ್ದಾರೆ. ಆಗ ಮಾತ್ರ ಮಾನವೀಯತೆ ಸುರಕ್ಷಿತವಾಗಿರುತ್ತದೆ. ಇಲ್ಲದಿದ್ದರೆ ಜಿಹಾದ್ ಎಲ್ಲರನ್ನೂ ಕೊನೆಗಾಣಿಸುತ್ತದೆ. ಲಖಿಂಪುರದಲ್ಲಿ ನಡೆದ ಘಟನೆಯಂತೆ  ಪ್ರತಿಯೊಬ್ಬ ಹಿಂದೂ ಹೆಣ್ಣು ಮಗುವಿಗೂ ಕೂಡ ಘಟನೆ ಜರುಗಬಹುದು ಎಂದಿದ್ದಾರೆ.

ಇದನ್ನೂ ಓದಿ-Project Cheetah: ಚಿರತೆಗಳ ಪುನರ್ವಸತಿ ರಾಜಕೀಯ! 8 ಚಿರತೆಗಳ ಹೆಸರು ಹೇಳಿದ ಮಲ್ಲಿಕಾರ್ಜುನ್ ಖರ್ಗೆ

ಮದರಸಾಗಳು ಮತ್ತು ಎಎಂಯು ಬಗ್ಗೆ ವಿವಾದಾತ್ಮಕ ಹೇಳಿಕೆ
ಈ ಸಂದರ್ಭದಲ್ಲಿ ಯುಪಿಯಲ್ಲಿ ನಡೆಯುತ್ತಿರುವ ಮದರಸಾಗಳ ಸಮೀಕ್ಷೆಯ ಕುರಿತು ಅವರನ್ನು ಪ್ರಶ್ನಿಸಿದಾಗ, ಸ್ವಾಮಿ ಯತಿ ನರಸಿಂಹಾನಂದರು, ಚೀನಾದಲ್ಲಿ ಮಾಡುವ ಹಾಗೆ ಎಲ್ಲಾ ಮದರಸಾಗಳ ವಿದ್ಯಾರ್ಥಿಗಳನ್ನು ಕುರಾನ್ ಎಂಬ ವೈರಸ್ ಅನ್ನು ಅವರ ಮನಸ್ಸಿನಿಂದ ತೆಗೆದು ಹಾಕುವ ಶಿಬಿರಗಳಿಗೆ ಕಳುಹಿಸಬೇಕು ಎಂದಿದ್ದಾರೆ. ಇನ್ನೊಂದೆಡೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಲ್ಲಿನ ಚುನಾವಣೆಯನ್ನು ರದ್ದುಗೊಳಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ಜಗತ್ತಿಗೆ ಇಸ್ಲಾಂ ಬಗ್ಗೆ ತಿಳಿದಿದೆ ಎಂದು ಹೇಳಿದ್ದಾರೆ. AMU ಇಸ್ಲಾಮಿನ ಅತಿದೊಡ್ಡ ಭದ್ರಕೋಟೆಯಾಗಿದೆ. ಭಾರತ ವಿಭಜನೆಗೆ ಬುನಾದಿ ಹಾಕಲಾಗಿದ್ದು ಅಲ್ಲಿಂದಲೇ. ಮದರಸಾಗಳಂತೆ ಎಎಂಯು ಅನ್ನು ಕೂಡ ಗನ್‌ಪೌಡರ್‌ನಿಂದ ಸ್ಫೋಟಿಸಬೇಕು ಮತ್ತು ಅದರಲ್ಲಿ ವಾಸಿಸುವ ಎಲ್ಲ ಜನರನ್ನು ಬಂಧನ ಕೇಂದ್ರಕ್ಕೆ ಕಳುಹಿಸಬೇಕು ಮತ್ತು ಅವರ ಮೆದುಳಿಗೆ ಚಿಕಿತ್ಸೆ ನೀಡಬೇಕು ಮತ್ತು ಕಟ್ಟಡವನ್ನು ಬಾಂಬ್‌ಗಳಿಂದ ಕೆಡವಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಸಹಕಾರಿ ಸಂಸ್ಥೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಭಾರೀ ಹಿನ್ನಡೆ...!

ಯತಿ ನರಸಿಂಹಾನಂದರ ಈ ಹೇಳಿಕೆಯ ನಂತರ ಅವರ ವಿರುದ್ಧದ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಸತ್ಯ ಮಾತನಾಡುವುದರಿಂದ ಪ್ರಕರಣಗಳು ದಾಖಲಾಗುತ್ತವೆ. ಸಾಧುಗಳಿಗೆ ಸರಕಾರದ ನೆರವು ಬೇಕಿಲ್ಲ ಎಂದಿದ್ದಾರೆ. ನಾವು ಹೊರಗಿರುವಂತೆಯೇ ಜೈಲಿನಲ್ಲೂ ಇರುತ್ತೇವೆ. ನಮಗೆ ಯಾವುದೇ ಸರ್ಕಾರದಿಂದ ಸಹಾಯ ಬೇಕಾಗಿಲ್ಲ, ಸರ್ಕಾರದಿಂದ ಸಹಾಯ ಕೇಳಿದರೆ ಸಮಾಜಕ್ಕಾಗಿ ಕೇಳುತ್ತೇವೆ. ನಮಗಾಗಿ ಯಾವುದೇ ಸರ್ಕಾರದಿಂದ ಯಾವುದೇ ಸಹಾಯದ ಅಗತ್ಯವಿಲ್ಲ ಎಂದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News