ದೇಶದಲ್ಲಿನ ಸಮಸ್ಯೆಗಳನ್ನು ಮರೆಮಾಚಲು ಮೋದಿ ನನ್ನ ಹೆಸರನ್ನು ಎಳೆದು ತಂದಿದ್ದಾರೆ -ರಾಬರ್ಟ್ ವಾದ್ರಾ

ಪ್ರಧಾನಿ ಮೋದಿ ದೇಶದಲ್ಲಿ ಬಡತನ, ನಿರುದ್ಯೋಗದಂತಹ ಸಮಸ್ಯೆಗಳನ್ನು ಮರೆಮಾಚಲು ತಮ್ಮ ಹೆಸರನ್ನು ಎಳೆದು ತಂದಿದ್ದಾರೆ ಎಂದು ರಾಬರ್ಟ್ ವಾದ್ರಾ ಆರೋಪಿಸಿದ್ದಾರೆ.

Last Updated : May 8, 2019, 06:55 PM IST
ದೇಶದಲ್ಲಿನ ಸಮಸ್ಯೆಗಳನ್ನು ಮರೆಮಾಚಲು ಮೋದಿ ನನ್ನ ಹೆಸರನ್ನು ಎಳೆದು ತಂದಿದ್ದಾರೆ -ರಾಬರ್ಟ್ ವಾದ್ರಾ title=
photo:ANI

ನವದೆಹಲಿ: ಪ್ರಧಾನಿ ಮೋದಿ ದೇಶದಲ್ಲಿ ಬಡತನ, ನಿರುದ್ಯೋಗದಂತಹ ಸಮಸ್ಯೆಗಳನ್ನು ಮರೆಮಾಚಲು ತಮ್ಮ ಹೆಸರನ್ನು ಎಳೆದು ತಂದಿದ್ದಾರೆ ಎಂದು ರಾಬರ್ಟ್ ವಾದ್ರಾ ಆರೋಪಿಸಿದ್ದಾರೆ.

"ನಿಮ್ಮ ರ್ಯಾಲಿಯಲ್ಲಿ ನನ್ನ ಹೆಸರನ್ನು ಮತ್ತೆ ಕೇಳುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.ಬಡತನ, ನಿರುದ್ಯೋಗ, ಮಹಿಳಾ ಸಬಲೀಕರಣ ಮುಂತಾದ ಸಮಸ್ಯೆಗಳಿವೆ. ಅವುಗಳ ಬಗ್ಗೆ ಮಾತನಾಡುವ ಬದಲು ನನ್ನ ಬಗ್ಗೆ ಮಾತನಾಡುತ್ತಿದ್ದಿರಿ" ಎಂದು ವಾದ್ರಾ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಇದೇ ವೇಳೆ ಮೋದಿ ಸರ್ಕಾರವು ವಿವಿಧ ಸರ್ಕಾರಿ ಏಜೆನ್ಸಿಗಳು ಮೂಲಕ  ತಮಗೆ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿದ್ದಾರೆ.

"ಕಳೆದ ಐದು ವರ್ಷಗಳಿಂದ ನಿಮ್ಮ ಸರ್ಕಾರದ  ಕಿರುಕುಳವನ್ನು ನಾನು ಅನುಭವಿಸಿದ್ದೇನೆ. ವಿವಿಧ ಏಜೆನ್ಸಿಗಳು, ನ್ಯಾಯಾಲಯಗಳು ಮತ್ತು ನ್ಯಾಯ ಇಲಾಖೆಗಳು, ಹಲವಾರು ನೋಟಿಸ್ ಗಳ ಮೂಲಕ ಮಾನಸಿಕ ಒತ್ತಡ ಹಾಕುತ್ತಿವೆ ಎಂದರು.ಸರ್ಕಾರದ ವೈಪಲ್ಯಗಳನ್ನು ಮುಚ್ಚಿ ಹಾಕಲು ತಮ್ಮ ಹೆಸರನ್ನು ಮೋದಿ ಪದೆ ಪದೆ ಎಳೆದು ತರುತ್ತಿದ್ದಾರೆ.ತಮಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ.ಆದ್ದರಿಂದ ನನ್ನ ಮೇಲೆ ವೈಯಕ್ತಿಕ ಟೀಕೆಯನ್ನು ನಿಲ್ಲಿಸಿ. ಹೀಗೆ ಮಾಡುವುದರಿಂದ ನೀವು ನಮ್ಮ ನ್ಯಾಯಾಂಗ ವ್ಯವಸ್ಥೆ ಅವಮಾನ ಮಾಡುತ್ತಿದ್ದೀರಿ" ಎಂದು ರಾಬರ್ಟ್ ವಾದ್ರಾ ಹೇಳಿಕೊಂಡಿದ್ದಾರೆ. 

ಪ್ರಧಾನಿ ಮೋದಿ ಬುಧವಾರದಂದು ರ್ಯಾಲಿಯೊಂದರಲಿ ಭಾಷಣ ಮಾಡುತ್ತಾ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಐದು ವರ್ಷಗಳಲ್ಲಿ ಶೆಹನ್ ಶಾ ರನ್ನುಜೈಲಿಗೆ ಕಳುಹಿಸುವುದಾಗಿ ಹೇಳಿದ್ದರು.  

.

Trending News