ಭಾರತದ 1.4 ಬಿಲಿಯನ್ ಗ್ರಾಹಕರ ಬಿಡಿಗಾಸಿನಲ್ಲಿ ಪಾಲಿಗಾಗಿ ಸಮರ

Indian Economy : ಆರ್ಥಿಕತೆಯನ್ನು ವ್ಯವಸ್ಥೆಯನ್ನು ಉದಾರಗೊಳಿಸಿರುವ ಹೊಸ ದೆಹಲಿಯ ಉಪಕ್ರಮವು ಸಮೃದ್ಧಿಯನ್ನು ಸೃಷ್ಟಿಸುವದಷ್ಟೇ ಅಲ್ಲದೆ ಬೆರಳೆಣಿಕೆಯಷ್ಟು ಪ್ರಭಾವೀ  ಉದ್ಯಮಿಗಳ ಕೈಯಲ್ಲಿ ಅಧಿಕಾರವನ್ನು ಕ್ರೋಢೀಕರಿಸಿದೆ.  

Written by - Girish Linganna | Last Updated : May 11, 2023, 11:42 AM IST
  • ಭಾರತದ ಶ್ರೀಮಂತರಲ್ಲಿ 1% ಭಾಗ ದೇಶದ ಒಟ್ಟು ಸಂಪತ್ತಿನ 40%ಕ್ಕಿಂತ ಹೆಚ್ಚು ಭಾಗವನ್ನು ಹೊಂದಿದ್ದಾರೆ,
  • ಪ್ರಸ್ತುತದಲ್ಲಿ ವಿಶ್ವದಲ್ಲಿ ಅತಿ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆ ಭಾರತ ಎಂಬ ಜಾಗತಿಕ ನಿಲುವಿದೆ.
  • ಭಾರತದಲ್ಲಿ ಸ್ವದೇಶಿ ಕೈಗಾರಿಕೆಗಳು ಶ್ರೇಷ್ಠತೆ ಹಾಗೂ ಪ್ರಾಬಲ್ಯವನ್ನು ಕಬಳಿಸುತ್ತಿವೆ
ಭಾರತದ 1.4 ಬಿಲಿಯನ್ ಗ್ರಾಹಕರ ಬಿಡಿಗಾಸಿನಲ್ಲಿ ಪಾಲಿಗಾಗಿ ಸಮರ  title=

India : ಈಗ ಒಂದೇ ತಿಂಗಳಿನಲ್ಲಿ ವಿಮಾನಯಾನ ಮಾಡುವಷ್ಟು ಭಾರತೀಯರು 25 ವರ್ಷಗಳ ಹಿಂದೆ ಒಂದು ವರ್ಷದಲ್ಲಿ ಮಾಡುತ್ತಿದ್ದರು. ಇದು ಆರ್ಥಿಕ ಸಮೃದ್ಧಿಯ ಒಂದು ಅಳತೆ ಗೋಲಿನಂತೆ ಅನಿಸಬಹುದು. ಆಗ ದೇಶಿಯ ವಾಯು ಯಾನ ಮಾರುಕಟ್ಟೆಯ ಅರ್ಧದಷ್ಟು ಭಾಗವನ್ನು ಕೇವಲ ಎರಡು ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಗಳು ಹೊಂದಿದ್ದವು. 

ಈ ವರ್ಷದ ಮಾರ್ಚ್ ನಲ್ಲಿ ಮಾರಾಟವಾದ 13 ಮಿಲಿಯನ್ ಟಿಕೆಟ್ ಗಳಲ್ಲಿ ಶೇಕಡ 57% ರಷ್ಟು ಟಿಕೆಟ್ ಗಳನ್ನು ಕೇವಲ ಒಂದೇ ಖಾಸಗಿ ಏರ್ ಲೈನ್ ನಲ್ಲಿ ಖರೀದಿಸಲಾಗಿದೆ. ಭಾರತದ ಆರ್ಥಿಕತೆ ವ್ಯವಸ್ಥೆ ಬಂಡವಾಳ ಶಾಹಿಯತ್ತ ತಿರುಗಿ 1991ರಲ್ಲಿ ಜಾಗತೀಕರಣಕ್ಕೆ  ತನ್ನ  ಬಾಗಿಲನ್ನು ತೆರೆದಾಗಿನಿಂದ  ಮೊದಲಿಗಿಂತ ವೇಗವಾಗಿ ಬೆಳೆದಿದೆ ಆದರೆ ಸರ್ಕಾರಿ-ನಿಯಂತ್ರಿತ ವಲಯಗಳು ಗ್ರಾಹಕರಿಗೆ ಸುಧಾರಿತ ಹಾಗೂ ಅಗ್ಗದ ಸರಕುಗಳು ಹಾಗೂ ಸೇವೆಗಳ ಜೊತೆಗೆ ವ್ಯಾಪಕವಾದ ಆಯ್ಕೆಗಳನ್ನು ಕೊಡುವಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಬೆಳೆದಿಲ್ಲ. 

ಭಾರತದ ಶ್ರೀಮಂತರಲ್ಲಿ 1% ಭಾಗ ದೇಶದ ಒಟ್ಟು ಸಂಪತ್ತಿನ 40%ಕ್ಕಿಂತ ಹೆಚ್ಚು ಭಾಗವನ್ನು ಹೊಂದಿದ್ದಾರೆ, ಬಡವರು ಮಾತ್ರ ಕೇವಲ 3%ರಷ್ಟು ಪಾಲನ್ನು ಹೊಂದಿದ್ದಾರೆ. ರಾಷ್ಟ್ರದ ಸಂಪತ್ತಿನ ಈ ಬಗೆಯ ನ್ಯಾಯ ಸಮ್ಮತವಲ್ಲದ ಹಂಚಿಕೆ ಸನ್ನಿವೇಶಗಳು ಹೇಗೆ ಮತ್ತು ಏಕೆ ಈ ರೀತಿಯಾಗಿ ತಿರುವನ್ನು ಪಡೆದಿವೆ ಎಂದು ಆತ್ಮವಲೋಕನದ ಮಾಡಿಕೊಳ್ಳುವ ಅಗತ್ಯತೆಯನ್ನು ಬಿಂಬಿಸುತ್ತದೆ.

ಇದನ್ನೂ ಓದಿ-Karnataka Election 2023: ಕಾಂಗ್ರೆಸ್ ಮುಖಂಡ ಮಿಥುನ್ ರೈ ಕಾರಿನ ಮೇಲೆ ಕಲ್ಲು ತೂರಾಟ!
 
ಪ್ರಸ್ತುತದಲ್ಲಿ ವಿಶ್ವದಲ್ಲಿ ಅತಿ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆ ಭಾರತ ಎಂಬ ಜಾಗತಿಕ ನಿಲುವಿದೆ. ಆದರೆ ಈ ಅಂಕಿ ಅಂಶಗಳು ಸೂಚಿಸುವಂತೆ ಅದು ತನ್ನ ಬಡ ಜನಸಂಖ್ಯೆಯನ್ನು ಬಡತನದ ರೇಖೆಯಿಂದ ತೀರ ಕೆಳಗೆ ತೊಳಲಾಡಲು ಬಿಟ್ಟು ಇತರರ ತುಡಿತಕ್ಕೆ ಮಿಡಿಯದ ತನ್ನದೇ ಲೋಕದಲ್ಲಿ ಮುಳುಗಿ ಹೋಗಿರುವ ಆತ್ಮಗಳ ಆಳವಾದ ಸಂಕುಲವಾಗಿ ಹೋಗಿದೆ.

ಪ್ರತಿ ಸೆಕೆಂಡಿಗೆ ಸುಮಾರು ಇಬ್ಬರು ಭಾರತೀಯರು, ಗಿರ ಗಿರನೆ ತಿರುಗುತ್ತ ಏರುವ ಬೆಲೆಗಳು ಮತ್ತು ನಿರುದ್ಯೋಗದ ಪೈಶಾಚಿಕ ದಟ್ಟ ಹಾಗೂ ಆಳವಾದ ಸಾಗರದ ಜಾಲದಿಂದ ಹೊರಬರಲಾರದಂತೆ ಸಿಕ್ಕಿಕೊಂಡು ಬಡತನದ ಕರಾಳಪ್ರಪಾತಕ್ಕೆ ತಳ್ಳಲ್ಪಡುತ್ತಾರೆ. ಕಳೆದ ಜಾಗತಿಕ ಹಸಿವು ಸೂಚ್ಯಂಕದ ದಲ್ಲಿ 121 ರಾಷ್ಟ್ರಗಳಲ್ಲಿ  107ನೇ  ನಿರಾಶಾದಾಯಕ ಸ್ಥಾನದಲ್ಲಿರುವ 350 ಮಿಲಿಯನ್ ಬೃಹತ್ ಜನಸಂಖ್ಯೆಯ ಭಾರತ  ಗಂಭೀರವಾದ ಆಹಾರ ಕೊರತೆಯ ಅನಿಶ್ಚಿತತೆಯನ್ನು ಎದುರಿಸುತ್ತಿದೆ

ಅರ್ಥಶಾಸ್ತ್ರಜ್ಞರಾದ ಅರವಿಂದ್ ಸುಬ್ರಮಣಿಯನ್ ಮತ್ತು ಜೋಶ್ ಫೆಲ್ಮನ್ ಅವರು 2ಎ ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರುಗಳ ಬೆಳೆಯುತ್ತಿರುವ ಪ್ರಾಬಲ್ಯವನ್ನು ಕೆಲವೇ ಕೆಲವರ ಕೈಯಲ್ಲಿ ಆರ್ಥಿಕ ಶಕ್ತಿಯ ಅಧಿಕಾರದ ನಿಯಂತ್ರಣದ ಅಸಾಧಾರಣ ಕೇಂದ್ರೀಕರಣದ ಪುರಾವೆ ಎಂದು ಸೂಚಿಸಿದ್ದಾರೆ. ಸೆಂಟ್ರಲ್ ಬ್ಯಾಂಕ್ ನ ಮಾಜಿ ಡೆಪ್ಯೂಟಿ ಗವರ್ನರ್ ವಿಠ್ಠಲ್ ಆಚಾರ್ಯ ಅವರು ಈ ಅಧ್ಯಯನವನ್ನು ಇನ್ನೂ ವಿಸ್ತರಿಸಲು ಮುಂಬೈ ಮೂಲದ ಟಾಟಾ ಗ್ರೂಪ್, ಅಲ್ಯುಮಿನಿಯಂ ಹಾಗೂ ಸಿಮೆಂಟ್ ದೊರೆ ಕುಮಾರ ಮಂಗಳಂ ಬಿರ್ಲಾ ಹಾಗೂ ಟೆಲಿಕಾಂ ದಿಗಜ ದಿಗ್ಗಜ ಸುನಿಲ್ ಮಿತಲ್ ಮಿತ್ತಲ್ ಅವರುಗಳನ್ನು ಇದರಲ್ಲಿ ಸೇರಿಸಿದ್ದಾರೆ. 

ಕಳೆದ 30 ವರ್ಷಗಳಲ್ಲಿ ಹಣಕಾಸೇತರ  ಐದು ಅಗ್ರ ಉದ್ಯಮಗಳ ಪ್ರಭಾವವು 8% ಪಾಯಿಂಟ್ ಗಳಷ್ಟು ಬೆಳೆದಿದ್ದರೆ ನಂತರದ ಐದು ವ್ಯಾಪಾರಿ ವರ್ಗಗಳು  ಅಷ್ಟೇ ಮೊತ್ತವನ್ನು ಕಳೆದುಕೊಂಡಿವೆ. ಆಚಾರ್ಯ ಅವರು ಇತ್ತೀಚಿಗೆ ಮಂಡಿಸಿದ ಪ್ರಬಂಧದ ಅನುಸಾರ ಇದನ್ನು ಇನ್ನೊಂದು ದೃಷ್ಟಿಕೋನದಿಂದ ಪರಿಗಣಿಸಿದಲ್ಲಿ ಬೃಹತ್ ಕಂಪನಿಗಳು ಕೇವಲ ಸಣ್ಣ ಕಂಪನಿಗಳನ್ನು ತುಳಿದು ಮುನ್ನಡೆದಿದ್ದಷ್ಟೇ ಅಲ್ಲದೆ ಈ ಪಂಚ ದೈತ್ಯರು ತಮ್ಮ ನಂತರದಲ್ಲಿದ್ದ ದೊಡ್ಡ ಕಂಪನಿಗಳು ಹಿನ್ನಡೆಯುವ ರೀತಿಯಲ್ಲಿ ಆರ್ಥಿಕವಾಗಿ ವಿಸ್ತರಣೆಯಾದವು

ಇದನ್ನೂ ಓದಿ-Karnataka Election 2023: ಈ ಬಾರಿ ಶೇ.72.67 ವೋಟಿಂಗ್: 2018ರಲ್ಲಿ ಎಷ್ಟಾಗಿತ್ತು ಗೊತ್ತಾ ಮತದಾನ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

ಭಾರತದಲ್ಲಿ ಸ್ವದೇಶಿ ಕೈಗಾರಿಕೆಗಳು ಶ್ರೇಷ್ಠತೆ ಹಾಗೂ ಪ್ರಾಬಲ್ಯವನ್ನು ಕಬಳಿಸುತ್ತಿವೆ ಅಥವಾ ಸ್ವಾಧೀನ ಪಡಿಸಿಕೊಳ್ಳುತ್ತಿವೆ. ಕೇವಲ ಈಜಿಪ್ಟ್ ಸುಡಾನ್ ಮತ್ತು ವೆನಿಜುಯೆಲಾ ದೇಶಗಳು ಮಾತ್ರ ಭಾರತಕ್ಕಿಂತ ಹೆಚ್ಚಿನ ಆಮದು ಸುಂಕವನ್ನು ಹೊಂದಿವೆ. ಇದು ಭಾರತದ ಭದ್ರವಾಗಿ ನೆಲೆಗೊಂಡ ಉದ್ಯಮ ದೈತ್ಯರಿಗೆ ದೇಶದ 1.4 ಬಿಲಿಯನ್ ಗ್ರಾಹಕರ ಮೇಲೆ ಹೆಚ್ಚು ವ್ಯವಹಾರಿಕ ಪ್ರಭುತ್ವ ವನ್ನು ನೀಡುತ್ತದೆ

ವಾಯುಯಾನ, ದೂರಸಂಪರ್ಕದಿಂದ ಹಿಡಿದು ಬಂದರುಗಳು, ವಿಮಾನ ನಿಲ್ದಾಣಗಳು ಹಾಗೂ ಅಧಿಕಾರ ಇವೆಲ್ಲದರಲ್ಲೂ ಸರ್ಕಾರಗಳು ಸಹಜವಾಗಿ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ತೋರುತ್ತಿದ್ದು ಕಾಲಕ್ರಮೇಣ ಉಳಿದ ಶ್ರೀಮಂತ ಉದ್ಯಮ ದೈತ್ಯರನ್ನು ಮೀರಿಸಿ ಬೆಳೆದ ಒಬ್ಬ ಅಥವಾ ಇಬ್ಬರು ರಾಜಕೀಯ ಪ್ರಭಾವೀ ಉದ್ಯಮಿಗಳನ್ನು ಹೊರತುಪಡಿಸಿ ಉಳಿದೆಲ್ಲ ಉದ್ಯಮಗಳು ಏರಿಳಿವುಗಳನ್ನು ಕಾಣಲಿದೆ. 

ಭಾರತದ ಮೂರನೆಯ ಉತ್ಕೃಷ್ಟ ವಾಹಕ ಸಂಸ್ಥೆ, ಶ್ರೀಮಂತ ಉದ್ಯಮಿ ನುಸ್ಲಿ ವಾಡಿಯ ಅವರ ಗೋ ಫಸ್ಟ್ ದಿವಾಳಿತನಕ್ಕೆ ಇತ್ತೀಚಿಗಷ್ಟೇ ಅರ್ಜಿ ಸಲ್ಲಿಸಿದೆ. ಕಳೆದ 11 ವರ್ಷಗಳಲ್ಲಿ ನಮ್ಮ ಅಸ್ತಿತ್ವಕ್ಕಾಗಿ ಸೆಣಸುವಿಕೆಯ ಸಮರದ ಬಿಸಿ ಏರುತ್ತಿದ್ದಂತೆ ವೊಡಾಫೋನ್ ಗ್ರೂಪ್ ಪ್ರೈವೇಟ್ ಪಿ ಎಲ್ ಸಿ ಮತ್ತು ಸರಕು ಸಾಮಗ್ರಿ ಉದ್ಯಮ ದೈತ್ಯ ಬಿರ್ಲಾ ಸಂಸ್ಥೆಗಳ ನಡುವಿನ ಜಂಟಿ ಉದ್ಯಮ ತನ್ನ ವ್ಯವಹಾರಗಳನ್ನು ತಕ್ಕಮಟ್ಟಿಗೆ ನಡೆಸಲೂ ಹೆಣಗುತ್ತಿದೆ.

ಈ ಅಸಮತೋಲಿತ ಹಾಗೂ ಏಕಪ್ರಕಾರದಲ್ಲಿರದ ಸ್ಪರ್ಧೆಯ ಪರಿಣಾಮವೆಂದರೆ ಬೆಲೆಗಳ ಏರಿಕೆ. ಅದು ಪರಿಣಾಮ ಬೀರಲು ಹಲವು ವರ್ಷಗಳೇ ತೆಗೆದುಕೊಳ್ಳಬಹುದು. ತನ್ನ ಸ್ಪರ್ಧಿಗಳನ್ನು ತೊಡೆದು ಹಾಕಿ ಮಾರುಕಟ್ಟೆಯ ಬೃಹತ್ ಪಾಲನ್ನು ಪಡೆಯಲು ಅಂಬಾನಿಯವರು ಮಾಡಿದ ಏಳು ವರ್ಷಗಳ ಪ್ರಯತ್ನದ ನೇರ ಪರಿಣಾಮವಾಗಿ  ಭಾರತ ಇಂದು ವಿಶ್ವದಲ್ಲೇ ಐದನೇ ಅತ್ಯಂತ ಕಡಿಮೆ ದತ್ತಾಂಶ ಡೇಟಾ ವೆಚ್ಚವನ್ನು ಹೊಂದಿದ ರಾಷ್ಟ್ರವಾಗಿದೆ. 

ಈ ಮೊದಲು ಸುಮಾರು ಒಂದು ಡಜನ್ ಸ್ಪರ್ಧಿಗಳಿದ್ದ ಕಣದಲ್ಲಿ ಅಂಬಾನಿಯವರ ಕೇವಲ ರಿಲಯನ್ಸ್ ಜಿಯೋ ಇನ್ಫೋ ಕಾಮ್ ಲಿ ಮತ್ತು ಮಿತ್ತಲ್ ವರ ಭಾರತಿ ಏರ್ ಟೆಲ್ ಲಿಮಿಟೆಡ್ ಇವೆರಡೇ ಉಳಿದಿವೆ. ಈ ಎರಡು ಉದ್ಯಮ ದೈತ್ಯರು 5G ನೆಟ್ ವರ್ಕ್ ಅನ್ನು ಹೊರಬಿಡುತ್ತಿದ್ದಂತೆ ಡೇಟಾ ಶುಲ್ಕಗಳು ಕಡಿಮೆಯಾಗಿಯೇ ಇರಬಹುದಾದ್ದರಿಂದ ಅದು ಹೆಣಗಾಡುತ್ತಿರುವ ವೊಡಾಫೋನ್ ನ ಜಂಟಿ ಉದ್ಯಮದಿಂದ ಗ್ರಾಹಕರನ್ನು ದೂರವಿರಿಸುತ್ತದೆ. 

ನಂತರ ಅಂಬಾನಿ ಅವರ ಡಿಜಿಟಲ್ ಉದ್ಯಮ ಜಿಯೋ ಪ್ಲ್ಯಾಟ್ ಫಾರ್ಮ್ಸ್ ಲಿಮಿಟೆಡ್ ಸಾರ್ವಜನಿಕ ವಲಯದ ಉದ್ಯಮವಾಗಿ ಹೊರಬರಲು ಸಿದ್ಧವಾಗುತ್ತಿದ್ದಂತೆ ಈ ಶುಲ್ಕವು ಮತ್ತೆ ಹೆಚ್ಚಾಗಲೂಬಹುದು ಭಾರತದಲ್ಲಿ, ಪ್ರತಿಸ್ಪರ್ಧಿಗಳ ವ್ಯವಹಾರಗಳಲ್ಲಿ ಪಾಲನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವುದು ಉದ್ಯಮದಲ್ಲಿ ತನ್ನ ಅಸ್ತಿತ್ವವನ್ನು ನೆಲೆಗೊಳಿಸುವ ಭರವಸೆಯನ್ನೇ ನೀಡುವುದಿಲ್ಲ.

ಏರ್ ಡೆಕ್ಕನ್ ಅನ್ನು ಸ್ವಾಧೀನ ಕ್ಕೆ ತೆಗೆದುಕೊಂಡ ಕಿಂಗ್ ಫಿಷರ್ ಏರ್ ಲೈನ್ಸ್ ಹಾಗೂ ಸಾಮಾನ್ಯರಿಗೆ ಕೈಗೆಟ್ಟುವಂತಿದ್ದ ವಾಯುಯಾನ ವಾಹಕ (ಬಜೆಟ್ ಕ್ಯಾರಿಯರ್)  ಏರ್ ಸಹಾರವನ್ನು ಸ್ವಾಧೀನ ಪಡಿಸಿಕೊಂಡ ಜೆಟ್ ಏರ್ ವೇಸ್ ಇವೆರಡೂ ದಿವಾಳಿತನವನ್ನು ಘೋಷಿಸಿದವು. ದ ಟಾಟಾ ಗ್ರೂಪ್ ಎರಡು ಸ್ಥಳೀಯ ಜಂಟಿ ಉದ್ಯಮಗಳಾದ ಕ್ಯಾಪಿಟಲ್ ಎ ಬಿಎಚ್ ಡಿ ಯ ಏರ್ ಏಷ್ಯಾ ಹಾಗೂ ಸಿಂಗಪೂರ್ ಏರ್ ಲೈನ್ಸ್ ಲಿಮಿಟೆಡ್ ಇವೆರಡರಲ್ಲೂ ಬಹುಭಾಗದ ಪಾಲನ್ನು ಹೊಂದಿದೆ. ಆದಾಗ್ಯೂ ಇದು ತನ್ನ ಎಲ್ಲಾ ಬ್ರಾಂಡ್ ಗಳನ್ನು ಒಂದೇ ನೆಲೆ ಅಡಿಯಲ್ಲಿ ತರಲು ಪ್ರಾರಂಭಿಸಿದೆ.

ಗ್ರಾಹಕರ ಬಳಕೆಗೆ ಅನೇಕ ವಿಧದಲ್ಲಿ ಹೊಡೆತ ಬೀಳಬಹುದು. ಏರ್ ಲೈನ್ಸ್ ಉದ್ಯಮವನ್ನು ಖಾಸಗೀಕರಿಸುವ ನಿಟ್ಟಿನಲ್ಲಿ 2021ರಲ್ಲಿ ಟಾಟಾ ಗ್ರೂಪ್ ಸರ್ಕಾರಿ ಸ್ವಾಮ್ಯದಿಂದ ಖರೀದಿಸಿದ ಏರ್ ಇಂಡಿಯಾದ ಜೊತೆಗೆ ಸಿಂಗಪೂರ್ ಏರ್ ಲೈನ್ಸ್ ಲಿಮಿಟೆಡ್ ಹಾಗೂ ಮುಂಬೈನಲ್ಲಿ ಟಾಟಾ ಗ್ರೂಪ್ ಸ್ವಾಮ್ಯದ ಪೂರ್ಣ ಪ್ರಮಾಣದ ವಾಯು ಯಾನ ಸೇವಾ ಸಂಸ್ಥೆ ವಿಸ್ತಾರ ಇವೆರಡೂ ಸೇರಿಕೊಳ್ಳಲಿವೆ. 

ಟಾಟಾ ಸ್ವಾಮ್ಯದ ಮೂರನೇ ಏರ್ ಲೈನ್ಸ್ ಏರ್ ಏಷ್ಯಾ ಇಂಡಿಯಾದೊಂದಿಗೆ  ಟಾಟಾ ಗ್ರೂಪ್  ಮಾರುಕಟ್ಟೆಯಲ್ಲಿ 25% ಭಾಗದ ಪಾಲನ್ನು ಹೊಂದಿರುತ್ತದೆ. ಜೊತೆಗೆ ಅದು ಇನ್ನೂ 470 ವಿಮಾನಗಳಿಗಾಗಿ  ತನ್ನ ಕೋರಿಕೆಯನ್ನು ಸಲ್ಲಿಸಿದೆ. ಇದು ಭಾರತೀಯ ವಾಯುಯಾನ ಇತಿಹಾಸದಲ್ಲಿಯೇ ಅತಿದೊಡ್ಡ ಆರ್ಡರ್ ಆಗಿದೆ. ವಿಶ್ವದ ಇತರ ಎಲ್ಲಾ ದೇಶಗಳಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಶೀಘ್ರದಲ್ಲೇ ಇಂಡಿಗೋ ಹಾಗೂ ಟಾಟಾ ಸೇವೆಗಳು ಸ್ಥಳೀಯವಾಗಿ ಸುಗಮವಾದ ಆಯ್ಕೆಗಳಾಗಿ ಪರಿಣಮಿಸಬಹುದಾದರೂ ಟಿಕೆಟ್ ದರಗಳು ಮನಸೋ ಇಚ್ಛೆ ಮುಗಿಲು ಮುಟ್ಟುವ ಸಾಧ್ಯತೆಗಳಿರುತ್ತವೆ!

(ಲೇಖಕರು ಬಾಹ್ಯಾಕಾಶ, ರಕ್ಷಣಾ ಮತ್ತು ರಾಜಕೀಯ ವಿಶ್ಲೇಷಕರಾಗಿದ್ದಾರೆ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News