ಅಮೇರಿಕಾದ ಷೇರು ಮಾರುಕಟ್ಟೆಯನ್ನು ಮೀರಿಸಲಿದೆ ಭಾರತದ ಮಾರುಕಟ್ಟೆ..!

ಮುಂಬರುವ ವರ್ಷಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಯುಎಸ್ ಷೇರು ಮಾರುಕಟ್ಟೆ ಸೇರಿದಂತೆ ಜಾಗತಿಕ ಷೇರುಗಳನ್ನು ಮೀರಿಸುತ್ತದೆ ಎಂದು ಎನ್ವಿಷನ್ ಕ್ಯಾಪಿಟಲ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಲೇಶ್ ಶಾ ಹೇಳಿದ್ದಾರೆ.

Written by - Zee Kannada News Desk | Last Updated : Mar 3, 2022, 07:09 PM IST
  • ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಓಎನ್ಜಿಸಿನಲ್ಲಿ ಷೇರುಗಳು ಈ ವರ್ಷ ಇಲ್ಲಿಯವರೆಗೆ ಶೇ 17 ರಷ್ಟು ಏರಿಕೆಯಾಗಿದೆ.
  • ಒಎನ್‌ಜಿಸಿ ತೈಲ ಬೆಲೆಯಲ್ಲಿ ಎಷ್ಟು ಏರಿಕೆಯಾಗುತ್ತಿದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ಹೂಡಿಕೆಯ ದೃಷ್ಟಿಕೋನದಿಂದ ಅಂತಹ ಷೇರುಗಳನ್ನು ತಪ್ಪಿಸಬೇಕು ಎಂದು ಶಾ ಹೇಳಿದರು.
ಅಮೇರಿಕಾದ ಷೇರು ಮಾರುಕಟ್ಟೆಯನ್ನು ಮೀರಿಸಲಿದೆ ಭಾರತದ ಮಾರುಕಟ್ಟೆ..! title=

ನವದೆಹಲಿ: ಮುಂಬರುವ ವರ್ಷಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಯುಎಸ್ ಷೇರು ಮಾರುಕಟ್ಟೆ ಸೇರಿದಂತೆ ಜಾಗತಿಕ ಷೇರುಗಳನ್ನು ಮೀರಿಸುತ್ತದೆ ಎಂದು ಎನ್ವಿಷನ್ ಕ್ಯಾಪಿಟಲ್‌ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಲೇಶ್ ಶಾ ಹೇಳಿದ್ದಾರೆ.

ಮಾರ್ಚ್ 3 ರಂದು ಖಾಸಗಿ ಚಾನೆಲ್ ನೀಡಿದ ಸಂದರ್ಶನದಲ್ಲಿ ಷಾ,"ಭಾರತ ಸೇರಿದಂತೆ ಯುಎಸ್ ಇಕ್ವಿಟಿಗಳಿಗಿಂತ ಇಎಮ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ನಾನು ಸ್ಪಷ್ಟವಾಗಿ ನಂಬುತ್ತೇನೆ" ಎಂದು ಶಾ ಹೇಳಿದರು.ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ತನ್ನ ಅಂಗ ಸಂಸ್ಥೆಯಾದ NSE IFSC ಗಿಫ್ಟ್ ಸಿಟಿಯಲ್ಲಿ ಹೂಡಿಕೆದಾರರಿಗೆ ಪ್ರಾಯೋಜಿತವಲ್ಲದ ಠೇವಣಿ ರಸೀದಿಗಳ ಮೂಲಕ ಅಮೇರಿಕಾದ ಷೇರುಗಳನ್ನು ನೇರವಾಗಿ ಹೊಂದಲು ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಷಾ ಅವರ ಈ ಹೇಳಿಕೆಗಳು ಬಂದಿವೆ.

ಇದನ್ನೂ ಓದಿ: ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ? ಈ ಕಾರಣಕ್ಕೆ ‘ದೊಡ್ಡಣ್ಣ’ನಿಗೆ ಕೋಪ!

ಕಳೆದ ದಶಕದಲ್ಲಿ ಆ ಮಾರುಕಟ್ಟೆಯಲ್ಲಿ (Share Market Update)ನ ಉತ್ಕರ್ಷದಿಂದಾಗಿ ಹೂಡಿಕೆದಾರರು ಅಮೇರಿಕಾದ ಸ್ಟಾಕ್‌ಗಳಲ್ಲಿ, ವಿಶೇಷವಾಗಿ ತಂತ್ರಜ್ಞಾನದ ಷೇರುಗಳಲ್ಲಿ ಹೂಡಿಕೆ ಮಾಡಲು ಹೆಚ್ಚು ಗಮನಹರಿಸುತ್ತಿರುವುದರಿಂದ ಈ ಅಭಿವೃದ್ಧಿಯು ಬರುತ್ತದೆ.ಈಗ ಹೆಚ್ಚಿನ ಜಾಗತಿಕ ಬಡ್ಡಿದರಗಳು ಮತ್ತು ಉಕ್ರೇನ್‌ನ ಮೇಲೆ ನಡೆಯುತ್ತಿರುವ ರಷ್ಯಾದ ಆಕ್ರಮಣದ ಹಿನ್ನಲೆಯಲ್ಲಿ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಅಕ್ಟೋಬರ್ 2021 ರಲ್ಲಿ ತಮ್ಮ ದಾಖಲೆಯ ಗರಿಷ್ಠ ಮಟ್ಟದಿಂದ ಶೇ 10 ರಷ್ಟು ಕುಸಿದಿವೆ.

ಆದರೆ ಮಾರುಕಟ್ಟೆಗಳು ಚೇತರಿಸಿಕೊಳ್ಳುವ ಬಗ್ಗೆ ಆಶಾವಾದ ವ್ಯಕ್ತಪಡಿಸಿದ ಷಾ ಅವರು 'ಬಹಳಷ್ಟು ಭೌಗೋಳಿಕ ರಾಜಕೀಯ ಅಪಾಯಗಳ ಹೊರತಾಗಿಯೂ,ಮಾರುಕಟ್ಟೆಗಳು ಚೇತರಿಸಿಕೊಳ್ಳುತ್ತಿವೆ" ಎಂದು ಅವರು ಹೇಳಿದ್ದಾರೆ.ಹೂಡಿಕೆದಾರರು ಅಲ್ಪಾವಧಿಯ ಸವಾಲುಗಳ ನಡುವೆಯೂ ಕೆಲವು ಆಟೋಮೊಬೈಲ್ ಕಂಪನಿಗಳ ಷೇರುಗಳ ಕುಸಿತವನ್ನು ಖರೀದಿಸಲು ನೋಡಬೇಕು ಎಂದು ಷಾ ಅವರು ಹೇಳಿದರು.ಆದರೆ ಇದೇ ವೇಳೆ ಓಎನ್ಜಿಸಿನಲ್ಲಿ ಹೂಡಿಕೆ ಮಾಡದಂತೆ ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮೂರನೇ ಜಾಗತಿಕ ಯುದ್ಧ ಪರಮಾಣು ಯುದ್ಧವಾಗಿರಲಿದೆ ಎಂದ ರಷ್ಯಾ ವಿದೇಶಾಂಗ ಸಚಿವ..!

ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಓಎನ್ಜಿಸಿನಲ್ಲಿ ಷೇರುಗಳು ಈ ವರ್ಷ ಇಲ್ಲಿಯವರೆಗೆ ಶೇ 17 ರಷ್ಟು ಏರಿಕೆಯಾಗಿದೆ.ಒಎನ್‌ಜಿಸಿ ತೈಲ ಬೆಲೆಯಲ್ಲಿ ಎಷ್ಟು ಏರಿಕೆಯಾಗುತ್ತಿದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ಹೂಡಿಕೆಯ ದೃಷ್ಟಿಕೋನದಿಂದ ಅಂತಹ ಷೇರುಗಳನ್ನು ತಪ್ಪಿಸಬೇಕು ಎಂದು ಶಾ ಹೇಳಿದರು.

 

Trending News