ಕಾಶ್ಮೀರದ ಬಿಜೆಪಿ ರ್ಯಾಲಿಯಲ್ಲಿ ತಲೆಕೆಳಗಾದ ತ್ರಿವರ್ಣ ಧ್ವಜ, ಕೇಸ್ ದಾಖಲು

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ನಾಯಕ ರಾಜೀವ್ ಜಶ್ರೋಟಿಯಾ ರ್ಯಾಲಿಯಲ್ಲಿ ತ್ರಿವರ್ಣ ಧ್ವಜ ತಲೆಕೆಳಗಾಗಿ ಹಾರಾಡಿದ ಹಿನ್ನಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಲಾಗಿದೆ ತಿಳಿದು ಬಂದಿದೆ.

Last Updated : Sep 29, 2018, 04:21 PM IST
ಕಾಶ್ಮೀರದ ಬಿಜೆಪಿ ರ್ಯಾಲಿಯಲ್ಲಿ ತಲೆಕೆಳಗಾದ ತ್ರಿವರ್ಣ ಧ್ವಜ, ಕೇಸ್ ದಾಖಲು  title=

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ನಾಯಕ ರಾಜೀವ್ ಜಶ್ರೋಟಿಯಾ ರ್ಯಾಲಿಯಲ್ಲಿ ತ್ರಿವರ್ಣ ಧ್ವಜ ತಲೆಕೆಳಗಾಗಿ ಹಾರಾಡಿದ ಹಿನ್ನಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಲಾಗಿದೆ ತಿಳಿದು ಬಂದಿದೆ.

ರಾಷ್ಟ್ರೀಯ ಧ್ವಜ ಅಥವಾ ಸಂವಿಧಾನವನ್ನು ಅವಮಾನಿಸುವ ಕಾಯ್ದೆ ಅಡಿಯಲ್ಲಿ ಕತುವಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳೀಯ ನಿವಾಸಿ ವಿನೋದ್ ನಿಜ್ಹಾವಾನ್ ಅವರು ದೂರಿನಲ್ಲಿ ಮಾಜಿ ಸಚಿವ ಜಸ್ರೋಟಿ ನೇತೃತ್ವದ ರಾಲಿಯಲ್ಲಿ ರಾಷ್ಟ್ರೀಯ ಧ್ವಜವು ಅವಮಾನಕ್ಕೊಳಗಾಗಿದೆಯೆಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ.

ಕಥುವಾ ಕ್ಷೇತ್ರದ ಬಿಜೆಪಿ ಶಾಸಕ ಜಸ್ರೋಟಿಯವರು ಶರ್ಮಾ ಅವರ ಶಿವನಗರ್ ನಿವಾಸದಿಂದ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ಮೆರವಣಿಗೆಯಲ್ಲಿ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ದೂರುದಾರರು ಎರಡು ಕಿ.ಮೀ.ದೂರದಲ್ ಮೆರವಣಿಗೆಯಲ್ಲಿ ತ್ರಿವರ್ಣ ಧ್ವಜ ತಲೆಕೆಳಗಾಗಿ ಹಿಡಿದಿರುವ ವ್ಯಕ್ತಿಯ ವೀಡಿಯೊ ಕ್ಲಿಪ್ ಅನ್ನು ದೂರಿನಲ್ಲಿ ಪ್ರಸ್ತುತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಷಯದಲ್ಲಿ ಪೊಲೀಸರು ಈಗ ತನಿಖೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

Trending News