ಕೊರೋನಾ ಬಿಕ್ಕಟ್ಟಿನ ನಡುವೆಯೂ ಭಾರತ ದೃಢವಾಗಿ ನಿಂತಿದೆ: RBI ಗವರ್ನರ್

ಕರೋನಾ ಬಿಕ್ಕಟ್ಟಿನ ನಡುವೆ ದೇಶದ ಬ್ಯಾಂಕುಗಳ ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve bank of India) ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

Last Updated : Apr 17, 2020, 11:33 AM IST
ಕೊರೋನಾ ಬಿಕ್ಕಟ್ಟಿನ ನಡುವೆಯೂ ಭಾರತ ದೃಢವಾಗಿ ನಿಂತಿದೆ: RBI ಗವರ್ನರ್  title=
Image courtesy: ANI

ನವದೆಹಲಿ : ಜಾಗತಿಕ ಸಾಂಕ್ರಾಮಿಕ ರೋಗವಾದ ಕರೋನಾ ವೈರಸ್‌ನಿಂದಾಗಿ ಕಂಗೆಟ್ಟಿರುವ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸರ್ಕಾರ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕರೋನಾ ಬಿಕ್ಕಟ್ಟಿನ ನಡುವೆ ದೇಶದ ಬ್ಯಾಂಕುಗಳ ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಗುತ್ತಿದ್ದು,  ಕೊರೋನಾ ಬಿಕ್ಕಟ್ಟಿನ ನಡುವೆಯೂ ಭಾರತ ದೃಢವಾಗಿ ನಿಂತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.  

ಕರೋನಾ ವೈರಸ್‌ನಿಂದಾಗಿ ಜಾಗತಿಕ ಆರ್ಥಿಕತೆ ಕುಸಿತ ಕಂಡಿದೆ.  ಆದಾಗ್ಯೂ ಇದು ಭಾರತದ ಜಿಡಿಪಿ ದೃಷ್ಟಿಯಿಂದ ಸಕಾರಾತ್ಮಕವಾಗಿದೆ. ಜಿ 20 ದೇಶಗಳಲ್ಲಿಯೇ ಭಾರತದ ಪರಿಸ್ಥಿತಿ ಉತ್ತಮವಾಗಿದೆ. ಬಿಕ್ಕಟ್ಟಿನಿಂದಾಗಿ ಜಗತ್ತಿನಲ್ಲಿ  9 ಟ್ರಿಲಿಯನ್ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಭಾರತದ ಜಿಡಿಪಿ 1.9 ದರದಲ್ಲಿ ಬೆಳೆಯಲಿದೆ ಎಂದವರು ಭರವಸೆ ವ್ಯಕ್ತಪಡಿಸಿದರು.

ಕರೋನಾವೈರಸ್ ಬಿಕ್ಕಟ್ಟಿನ ನಡುವೆ ಬದಲಾಯ್ತು Debit-Credit ಕಾರ್ಡ್‌ಗಳ ನಿಯಮ

ದಿನವಿಡೀ ದುಡಿಯುತ್ತಿರುವವರಿಗೆ ಧನ್ಯವಾದ 
ಕರೋನಾ ಕಷ್ಟದ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ150 ಜನ ತಮ್ಮ ಕುಟುಂಬಗಳಿಂದ ದೂರವುಳಿದು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಿಬ್ಬಂದಿಗಳ ತಂಡವನ್ನು  ಪ್ರಶಂಸಿಸುತ್ತೇನೆ ಮತ್ತು ಅವರಿಗೆ ಧನ್ಯವಾದ ಹೇಳುತ್ತೇನೆ. ಇದರಿಂದಾಗಿ ಅಗತ್ಯ ಸೇವೆಗಳು ಮುಂದುವರಿಯುತ್ತಿವೆ. ಪ್ರತಿಯೊಂದು ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ವಿಶ್ವದಲ್ಲಿ ಅತಿದೊಡ್ಡ ಆರ್ಥಿಕ ಹಿಂಜರಿತ ಬರಲಿದೆ ಎಂದು ಐಎಂಎಫ್ ಮುನ್ಸೂಚನೆ ನೀಡಿರುವುದು ಅಪಾಯದ ಗಂಟೆಯಾಗಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. 

ಅನೇಕ ದೇಶಗಳಲ್ಲಿ ಆಮದು ಮತ್ತು ರಫ್ತುಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ಆದರೆ ಈ ಮಧ್ಯೆ ಭಾರತದ ಕೃಷಿ ಕ್ಷೇತ್ರವು ಸುಸ್ಥಿರವಾಗಿದೆ. ನಮ್ಮಲ್ಲಿ ಬಫರ್ ಸ್ಟಾಕ್ ಇದೆ. ಈ ವರ್ಷಉತ್ತಮವಾದ ಮಳೆಯಾಗುವ ನಿರೀಕ್ಷೆಯಿದೆ. ಫೆಬ್ರವರಿಯಲ್ಲಿ ಟ್ರಾಕ್ಟರ್ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ ಎಂದು ತಿಳಿಸಿದರು. 

ಇಂದಿನಿಂದ ಬಂದ್ ಆಗಲಿದೆ ನಿಮ್ಮ Debit-Credit ಕಾರ್ಡ್‌ನಲ್ಲಿನ ಈ ಸೌಲಭ್ಯ

ಕಚ್ಚಾ ತೈಲದ ಕುಸಿತವು ಪ್ರಯೋಜನಕಾರಿ:
ವಿದೇಶಿ ವಿನಿಮಯ ಸಂಗ್ರಹ 476 ಬಿಲಿಯನ್ ಡಾಲರ್ಗಳ ಹೊರತಾಗಿಯೂ 2020ರ ಮಾರ್ಚ್ನಲ್ಲಿ ರಫ್ತುಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ಜಗತ್ತಿನಲ್ಲಿ ಕಚ್ಚಾ ತೈಲ ಬೆಲೆಗಳು ನಿರಂತರವಾಗಿ ಕಡಿಮೆಯಾಗುತ್ತಿದ್ದು ಇದರಿಂದ ಪ್ರಯೋಜನ ಪಡೆಯಬಹುದು. ಲಾಕ್‌ಡೌನ್ ಕಾರಣ ಬಹುತೇಕ ಎಲ್ಲಾ ರೀತಿಯ ಉದ್ಯೋಗಗಳನ್ನು ಮುಚ್ಚಲಾಗಿದೆ. ವಿಶ್ವದಾದ್ಯಂತದ ಕೇಂದ್ರ ಬ್ಯಾಂಕುಗಳು ತಮ್ಮ ಆರ್ಥಿಕತೆಯನ್ನು ಉಳಿಸಲು ಸಕ್ರಿಯವಾಗಿವೆ ಮತ್ತು ಈ ವಿಷಯದಲ್ಲಿ ರಿಸರ್ವ್ ಬ್ಯಾಂಕ್ ಕೂಡ ಹಿಂದುಳಿದಿಲ್ಲ  ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ.

ಕರೋನಾ ವಿರುದ್ಧ ಹೋರಾಡಲು ಕ್ಷೇತ್ರದಲ್ಲಿರುವ ಎಲ್ಲ ಇಲಾಖೆಗಳಿಗೆ ಆರ್‌ಬಿಐ ಗವರ್ನರ್ ವಂದಿಸಿದರು. 1929ರ ನಂತರ ದೇಶದ ಅತಿದೊಡ್ಡ ಆರ್ಥಿಕ ಕುಸಿತ ಇದು ಎಂದು ಅವರು ಹೇಳಿದರು. ಆರ್ಥಿಕ ಸ್ಥಿತಿಯ ಬಗ್ಗೆ ನಾವು ಸಂಪೂರ್ಣ ಕಣ್ಣಿಟ್ಟಿದ್ದೇವೆ. ಕಷ್ಟದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದರು.

ರಿವರ್ಸ್ ರೆಪೊ ದರದಲ್ಲಿ ಇಳಿಕೆ:
ಆರ್‌ಬಿಐ ರಿವರ್ಸ್ ರೆಪೊ ದರವನ್ನು ಕಡಿತಗೊಳಿಸಿದೆ. ಬ್ಯಾಂಕ್ ರಿವರ್ಸ್ ರೆಪೊ ದರವನ್ನು ಶೇಕಡಾ 0.25 ರಷ್ಟು ಕಡಿತಗೊಳಿಸಿತು. ಈ ಕಡಿತದ ನಂತರ ರಿವರ್ಸ್ ರೆಪೊ ದರವು ಶೇಕಡ 4 ರಿಂದ 3.75 ಕ್ಕೆ ಇಳಿದಿದೆ. ಇದಲ್ಲದೆ ರಾಜ್ಯ ಸರ್ಕಾರಗಳ WMA (Ways and Means Advances) ಮಿತಿಯನ್ನು ಶೇ. 30 ರಿಂದ ಶೇ. 60ಕ್ಕೆ ಏರಿಸಲಾಗಿದೆ ಎಂದವರು ತಿಳಿಸಿದರು.
 

Trending News