Alert...!Special Trainsಗಳ ಪ್ರಯಾಣ ನಿಯಮಗಳಲ್ಲಿ ಬದಲಾವಣೆ... ನೀವೂ ತಿಳಿದುಕೊಳ್ಳಿ

ರೈಲು ಪ್ರಯಾಣಿಸುವ ಪ್ರಯಾಣಿಕರಿಗೆ ವಿಶೇಷ ಎಚ್ಚರಿಕೆ. ಇಂದಿನಿಂದ, 15 ಜೋಡಿ ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.

Last Updated : May 25, 2020, 07:37 PM IST
Alert...!Special Trainsಗಳ ಪ್ರಯಾಣ ನಿಯಮಗಳಲ್ಲಿ ಬದಲಾವಣೆ... ನೀವೂ ತಿಳಿದುಕೊಳ್ಳಿ title=

ನವದೆಹಲಿ:ರೈಲುಗಳಲ್ಲಿ ಪ್ರಯಾಣ ಬೆಳೆಸಲು ಇಚ್ಚಿಸುವ ಯಾತ್ರಿಗಳಿಗಾಗಿ ರೇಲ್ವೆ ಇಲಾಖೆ ವಿಶೇಷ ಅಲರ್ಟ್ ಜಾರಿಗೊಳಿಸಿದೆ. ಇಂದಿನಿಂದ 15 ಜೋಡಿ ವಿಶೇಷ ರೈಲುಗಳಲ್ಲಿ ಪ್ರಯಾಣ ಬೆಳೆಸಲು ಇಚ್ಚಿಸುವ ಯಾತ್ರಿಗಳ ನಿಯಮಗಳಲ್ಲಿ ಬದಲಾವಣೆಗಳನ್ನೂ ಮಾಡಲಾಗಿದೆ. ಲಾಕ್ ಡೌನ್ ಹಿನ್ನೆಲೆ ರೇಲ್ವೆ ಇಲಾಖೆ ಈ ವಿಶೇಷ ರೈಲುಗಳ ಸೇವೆಯನ್ನು ಆರಂಭಿಸಿದೆ. ಈ ನಿಯಮಗಳು ಮೇ 24, 2020ರಿಂದ ಜಾರಿಗೊಳಿಸಲಾಗಿದೆ.

ಈ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ
- ರೈಲು ಇಲಾಖೆ ಇದೀಗ ವಿಶೇಷ ರೈಲುಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯ ಸಮಯವನ್ನು 7 ದಿನಗಳಿಂದ ಹೆಚ್ಚಿಸಿ 30 ದಿನಗಳನ್ನಾಗಿ ಮಾಡಿದೆ.
- ಈ ರೈಲುಗಳಲ್ಲಿ ಯಾವುದೇ ರೀತಿಯ ತತ್ಕಾಲ್ ಟಿಕೆಟ್ ಬುಕ್ ಮಾಡಲು ಅನುಮತಿ ನೀಡಲಾಗಿಲ್ಲ.
- ಈ ವಿಶೇಷ ರೈಲುಗಳಿಗೆ RAC/ವೇಟಿಂಗ್ ಲಿಸ್ಟ್ ಟಿಕೆಟ್ ಗಳನ್ನು ನೀಡಲಾಗುವುದು. ಆದರೆ, ವೇಟಿಂಗ್ ಲಿಸ್ಟ್ ನಲ್ಲಿರುವ ಯಾತ್ರಿಗಳಿಗೆ ರೈಲು ಹತ್ತಲು ಅನುಮತಿ ನೀಡಲಾಗುವುದಿಲ್ಲ.
- ರೈಲು ಬಿಡುಗಡೆಗೂ ಮುನ್ನ 4 ಗಂಟೆಗಳ ಮೊದಲು ಮೊದಲ ಚಾರ್ಟ್ ಜಾರಿಗೊಳಿಸಲಾಗುವುದು. ಎರಡನೇ ಚಾರ್ಟ್ 2 ಗಂಟೆ ಮುಂಚಿತವಾಗಿ ಜಾರಿಗೊಳಿಸಲಾಗುವುದು. ಮೊದಲ ಹಾಗೂ ಎರಡನೆಯ ಚಾರ್ಟ್ ನಡುವೆ ಕರೆಂಟ್ ಬುಕಿಂಗ್ ಚಾಲ್ತಿಯಲ್ಲಿ ಇರಲಿದೆ.
- ಯಾತ್ರಿಗಳು ರೇಲ್ವೆ ಕೌಂಟರ್ ಗಳ ಜೊತೆಗೆ ಇದೀಗ ಪೋಸ್ಟ್ ಆಫೀಸ್, ಯಾತ್ರಿ ಟಿಕೆಟ್ ಸೌಲಭ್ಯ ಕೇಂದ್ರ, IRCTC ಅಧಿಕೃತ ಏಜೆಂಟ್ ಹಾಗೂ ಕಾಮನ್ ಸರ್ವಿಸ್ ಸೆಂಟರ್ ಗಳ ಮೂಲಕ ಕೂಡ ಟಿಕೆಟ್ ಬುಕ್ ಮಾಡಬಹುದು.

ಆದರೆ ಇದೆ ವೇಳೆ ಪ್ರವಾಸಿ ಕಾರ್ಮಿಕ ವಿಶೇಷ ರೈಲುಗಳ ನಿಯಂತ್ರಣ ಇನ್ನೂ ಕೂಡ ಸಂಬಂಧಪಟ್ಟ ರಾಜ್ಯಸರ್ಕಾರಗಳ ಕೈಯಲ್ಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Trending News