ಮುಂದಿನ 48 ಗಂಟೆ ಭಾರೀ ಮಳೆ: ಮುಂಬೈ, ರಾಯ್ಗಡ್, ರತ್ನಗಿರಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ ಐಎಂಡಿ

ಐಎಂಡಿ ಹೊರಡಿಸಿದ ಎಚ್ಚರಿಕೆಯನ್ನು ಅನುಸರಿಸಿ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಾಗರಿಕರನ್ನು ಸಮುದ್ರ ತೀರದಿಂದ ದೂರವಿರಲು ಕೇಳಿದೆ.  

Last Updated : Jul 4, 2020, 09:30 AM IST
ಮುಂದಿನ 48 ಗಂಟೆ ಭಾರೀ ಮಳೆ: ಮುಂಬೈ, ರಾಯ್ಗಡ್, ರತ್ನಗಿರಿಯಲ್ಲಿ ರೆಡ್ ಅಲರ್ಟ್ ಘೋಷಿಸಿದ  ಐಎಂಡಿ title=

ಮುಂಬೈ: ಮುಂದಿನ 48 ಗಂಟೆಗಳ ಕಾಲ ಮುಂಬೈನ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಭಾರತ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ, ಪಾಲ್ಘರ್, ಮುಂಬೈ, ಥಾಣೆ ಮತ್ತು ರಾಯ್ಗಡ್ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಶನಿವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರ ಬೆಳಿಗ್ಗೆ 11:38ಕ್ಕೆ 4.57 ಮೀಟರ್ ಎತ್ತರದ ಉಬ್ಬರವಿಳಿತ ಸಂಭವಿಸುತ್ತದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ.

ಐಎಂಡಿ ಹೊರಡಿಸಿದ ಎಚ್ಚರಿಕೆಯನ್ನು ಅನುಸರಿಸಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಾಗರಿಕರನ್ನು ಸಮುದ್ರ ತೀರದಿಂದ ದೂರವಿರಲು ಕೇಳಿದೆ.

ಇದಕ್ಕೂ ಮೊದಲು ಮಹಾನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗಬಹುದು. ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿತ್ತು.

ಭಾರತದ ಹವಾಮಾನ ಇಲಾಖೆಯ ಮುಂಬೈ (Mumbai) ಕೇಂದ್ರದ ಪ್ರಕಾರ, ಕೊಲಾಬಾ ಹವಾಮಾನ ಬ್ಯೂರೋ ಶುಕ್ರವಾರ ಬೆಳಿಗ್ಗೆ 8:30 ರಿಂದ ರಾತ್ರಿ 8:30 ರ ನಡುವೆ 161.4 ಮಿ.ಮೀ ಮಳೆಯಾಗಿದೆ ಎಂದು ವರದಿ ಮಾಡಿದೆ. ಈ ಅವಧಿಯಲ್ಲಿ ನಗರದ ಸ್ಯಾಂಟಕ್ರೂಜ್ ಹವಾಮಾನ ಕೇಂದ್ರದಲ್ಲಿ 102.7 ಮಿ.ಮೀ ಮಳೆಯಾಗಿದೆ.

ಮುಂಬೈ ಮತ್ತು ಪಕ್ಕದ ಕರಾವಳಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಐಎಂಡಿ ಗುರುವಾರ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿತ್ತು ಮತ್ತು ಶುಕ್ರವಾರ ಮತ್ತು ಶನಿವಾರದಂದು ಆರೆಂಜ್ ಅಲರ್ಟ್ ಘೋಷಿಸಿದೆ.
 

Trending News