ನವದೆಹಲಿ: ನಿಮ್ಮ ಮಕ್ಕಳನ್ನು ನೀವು ಪ್ರೀತಿಸುವುದಾದರೆ ಮೋದಿಗೆ ಮತ ಹಾಕಬೇಡಿ, ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕರೆ ನೀಡಿದ್ದಾರೆ.
ದೆಹಲಿಯ ಸರ್ವೋದಯ ಕನ್ಯಾ ವಿದ್ಯಾಲಯದಲ್ಲಿ ನಡೆದ, 200 ಸರ್ಕಾರಿ ಶಾಲೆಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಎಪಿಗೆ ಮತ ಹಾಕುವಂತೆ ಪೋಷಕರಿಗೆ ತಿಳಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪೋಷಕರು 'ದೇಶಭಕ್ತಿ' ಮತ್ತು 'ಮೋದಿಭಕ್ತಿ'ಗಳ ನಡುವೆ ಯಾವುದು ದೇಶಕ್ಕೆ ಅಗತ್ಯ ಎಂಬುದನ್ನು ಪೋಷಕರೇ ನಿರ್ಧರಿಸಬೇಕು. ನೀವು ನಿಜವಾಗಿಯೂ ನಿಮ್ಮ ಮಕ್ಕಳನ್ನು ಪ್ರೀತಿಸುವುದಾದರೆ ದೇಶಭಕ್ತಿಗೆ ಮತಹಾಕಿ. ಇಲ್ಲವಾದರೆ ಮೋದಿಗೆ ಮತ ಹಾಕಿ. ಏಕೆಂದರೆ ಇದುವರೆಗೂ ದೆಹಲಿಯಲ್ಲಿ ವಿದ್ಯಾರ್ಥಿಗಳಿಗಾಗಿ ಮೋದಿ ಒಂದೇ ಒಂದು ಶಾಲಾ ಕೊಠಡಿಯನ್ನೂ ಸಹ ನಿರ್ಮಿಸಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.