Mamata Banerjee : ನಿಮಗೆ ದಮ್ಮಿದ್ದರೆ ನನ್ನ ಎದೆಗೆ ಗುಂಡಿಡಿ : ಸಿಎಂ ಮಮತಾ ಬ್ಯಾನರ್ಜಿ

‘ಉತ್ತರ ಬಂಗಾಳವನ್ನು ವಿಭಜಿಸದಿದ್ದರೆ ನನ್ನನ್ನು ಸಾಯಿಸುತ್ತೇನೆ ಎಂದು ಹೇಳುತ್ತಿದ್ದಾರೆ, ನಿಮಗೆ ದಮ್ಮಿದ್ದರೆ ನನ್ನ ಎದೆಗೆ ಗುಂಡಿಡಿ, ನಾನು ಸಾಕಷ್ಟು ಬಂದೂಕುಗಳನ್ನು ನೋಡಿದ್ದೇನೆ ಎಂದು ತಿರುಗೇಟು ನೀಡಿದರು. 

Written by - Channabasava A Kashinakunti | Last Updated : Jun 7, 2022, 05:39 PM IST
  • ನನ್ನ ದೇಹದಲ್ಲಿ ರಕ್ತ ಇರುವವರೆಗೆ ಬಂಗಾಳವನ್ನು ವಿಭಜಿಸಲು ನಾನು ಬಿಡುವುದಿಲ್ಲ
  • ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳ
  • ಕಳೆದ 10 ವರ್ಷಗಳಲ್ಲಿ ಉತ್ತರ ಬಂಗಾಳದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ,
Mamata Banerjee : ನಿಮಗೆ ದಮ್ಮಿದ್ದರೆ ನನ್ನ ಎದೆಗೆ ಗುಂಡಿಡಿ : ಸಿಎಂ ಮಮತಾ ಬ್ಯಾನರ್ಜಿ title=

ನವದೆಹಲಿ : 'ನನ್ನ ದೇಹದಲ್ಲಿ ರಕ್ತ ಇರುವವರೆಗೆ ಬಂಗಾಳವನ್ನು ವಿಭಜಿಸಲು ನಾನು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳ ವಿಭಜನೆಯ ಬಗ್ಗೆ ಗುಡುಗಿದ್ದಾರೆ. 

ಉತ್ತರ ಬಂಗಾಳದ ಅಲಿಪುರ್‌ದೌರ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ ಬ್ಯಾನರ್ಜಿ, ಕಳೆದ 10 ವರ್ಷಗಳಲ್ಲಿ ಉತ್ತರ ಬಂಗಾಳದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ, ಈಗ ಉತ್ತರ ಬಂಗಾಳದ ಜನರು ದಕ್ಷಿಣ ಬಂಗಾಳಕ್ಕೆ ಹೋಗಬೇಕಾಗಿಲ್ಲ ಎಂದರು. 

ಇದನ್ನೂ ಓದಿ : Nupur Sharma : ನೂಪುರ್ ಶರ್ಮಾಗೆ ಸಮನ್ಸ್ ನೀಡಿದ ಮುಂಬೈ ಪೊಲೀಸರು!

ಜಾನ್ ಬರ್ಲಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಪ್ರತ್ಯೇಕ ಉತ್ತರ ಬಂಗಾಳದ ವಿಷಯವನ್ನು ಪ್ರಸ್ತಾಪಿಸಿದರು, ಆಗ ದೀದಿ ನನ್ನ ದೇಹದಲ್ಲಿ ರಕ್ತ ಇರುವವರೆಗೂ ಬಂಗಾಳ ಇಬ್ಭಾಗವಾಗಲು ಬಿಡುವುದಿಲ್ಲ. ಬಿಜೆಪಿಯವರು ವಿಭಜನೆಯ ರಾಜಕಾರಣ ಮಾಡುತ್ತಾರೆ. ನಾವು ವಿಭಜಿಸುವುದಿಲ್ಲ, ನಾವು ಒಟ್ಟಿಗೆ ಬೆಳೆಯುತ್ತೇವೆ, ಬದುಕುತ್ತವೆ ಎಂದು ಹೇಳಿದರು. 

ಈ ಮಧ್ಯೆ, ಕಮ್ತಾಪುರ್ ಲಿಬರೇಶನ್ ಆರ್ಗನೈಸೇಶನ್ (KLO) ಮುಖ್ಯಸ್ಥ ಜಿಬೋನ್ ಸಿಂಗ್, ನಾನು ಮಮತಾ ಬ್ಯಾನರ್ಜಿ ಅವರಿಗೆ ಹೇಳುತ್ತಿದ್ದೇನೆ, ಕೋಚ್ ಕಮ್ತಾಪುರಕ್ಕೆ ಕಾಲಿಡಲು ಧೈರ್ಯ ಮಾಡಬೇಡಿ. ನೀವು ಕೋಚ್ ಕಮ್ತಾಪುರ ರಚನೆಗೆ ಮಧ್ಯಪ್ರವೇಶಿಸಲು ಅಥವಾ ವಿರೋಧಿಸಲು ಸಾಧ್ಯವಿಲ್ಲ" ಎಂದು ಹೇಳಿದರು. 

ಈ ಕುರಿತು ಮಾತನಾಡಿದ ಸಿಎಂ ಬ್ಯಾನರ್ಜಿ, ‘ಉತ್ತರ ಬಂಗಾಳವನ್ನು ವಿಭಜಿಸದಿದ್ದರೆ ನನ್ನನ್ನು ಸಾಯಿಸುತ್ತೇನೆ ಎಂದು ಹೇಳುತ್ತಿದ್ದಾರೆ, ನಿಮಗೆ ದಮ್ಮಿದ್ದರೆ ನನ್ನ ಎದೆಗೆ ಗುಂಡಿಡಿ, ನಾನು ಸಾಕಷ್ಟು ಬಂದೂಕುಗಳನ್ನು ನೋಡಿದ್ದೇನೆ ಎಂದು ತಿರುಗೇಟು ನೀಡಿದರು. 

ಇದನ್ನೂ ಓದಿ : Bullet Train : ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್ : ಟಿಕೆಟ್‌ ದರ ತಿಳಿಸಿದ ಸರ್ಕಾರ!

ಮಮತಾ ಪದೇ ಪದೇ ಉತ್ತರ ಬಂಗಾಳಕ್ಕೆ ಭೇಟಿ ನೀಡಿ ಬಿಜೆಪಿಯ ಆರೋಪವನ್ನು ಬೊಟ್ಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಡಾರ್ಜಿಲಿಂಗ್‌ಗೆ ಹೋಗಿದ್ದರು. ಜಿಟಿಎ ಚುನಾವಣೆಯ ದಿನವನ್ನೂ ಪ್ರಕಟಿಸಲಾಗಿದೆ. ಬೆಟ್ಟಗಳೂ ಈಗ ತುಂಬಾ ಶಾಂತವಾಗಿವೆ. ಪ್ರತ್ಯೇಕ ಗೂರ್ಖಾಲ್ಯಾಂಡ್‌ನ ಬೇಡಿಕೆಯಲ್ಲಿ ಹೆಚ್ಚು ಧ್ವನಿ ಎತ್ತಿದ್ದ ಬಿಮಲ್ ಗುರುಂಗ್ ಮತ್ತು ರೋಷನ್ ಗಿರಿ ಕೂಡ ಹಿನ್ನಡೆಯಲ್ಲಿದ್ದಾರೆ. ಈ ಪರಿಸ್ಥಿತಿಯಲ್ಲಿ ಬಿಜೆಪಿಯ ಪ್ರತ್ಯೇಕ ಉತ್ತರ ಬಂಗಾಳದ ಬೇಡಿಕೆಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವ ಬಗ್ಗೆ ಸಿಎಂ ಬ್ಯಾನರ್ಜಿ ಸಿಡಿಮಿಡಿಗೊಂಡಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News