ಮನೆಯಲ್ಲಿ ಆರ್ಥಿಕ ಸಮಸ್ಯೆಯೇ? ಹಾಗಿದ್ರೆ ಪ್ರತಿ ಸೋಮವಾರ ಈ ಕೆಲಸ ಮಾಡಿ

Last Updated : Nov 5, 2020, 05:22 PM IST
ಮನೆಯಲ್ಲಿ ಆರ್ಥಿಕ ಸಮಸ್ಯೆಯೇ? ಹಾಗಿದ್ರೆ ಪ್ರತಿ ಸೋಮವಾರ ಈ ಕೆಲಸ ಮಾಡಿ title=

ಮಾನವನಿಗೆ ಜೀವಿಸಲು ನೀರು, ಗಾಳಿ, ಆಹಾರ ಎಷ್ಟು ಮುಖ್ಯನೋ ಹಾಗೇ ಜೀವನ ನಡೆಸಲು ಹಣ ಕೂಡ ಅಷ್ಟೇ ಮುಖ್ಯ. ಹಣ (Money) ಮನುಷ್ಯನ ಅತೀ ಅವಶ್ಯಕ ವಾದ ವಸ್ತು. ನಾವು ಎಷ್ಟೇ ಕಷ್ಟಪಟ್ಟು ದುಡಿದರೂ ಅದನ್ನು ಉಳಿತಾಯ ಮಾಡಲು ಆಗುವುದಿಲ್ಲ. ಅದಕ್ಕೆ ಜನ ಏನೆಲ್ಲಾ ಪ್ರಯತ್ನ ಪಡ್ತಾರೆ, ಅಂತವರು ಸೋಮವಾರದಂದು ಈ ಕೆಲಸ ಮಾಡಿ ಆರ್ಥಿಕ ಸಮಸ್ಯೆಯಿಂದ ಪರಿಹಾರವನ್ನು ಪಡೆಯಿರಿ.

ಸೋಮವಾರದಂದು ಸೂರ್ಯೋದಯಕ್ಕೂ ಮುಂಚೆ ಸ್ನಾನ ಮಾಡುವಾಗ ನೀರಿಗೆ ಶ್ರೀಗಂಧ ಹಾಕಿ ಸ್ನಾನ ಮಾಡಿ. ಬಳಿಕ ಪೂಜೆ ಮಾಡುವಾಗ ಲಕ್ಷ್ಮೀನಾರಾಯಣ, ಶಿವನ ಪೋಟೊಗೆ ಹೂ, ಶ್ರೀಗಂಧದ ತಿಲಕವನ್ನಿಟ್ಟು ಪೂಜೆ ಮಾಡಿ ಬೆಲ್ಲ ಮತ್ತು ಕಡಲೆಕಾಳನ್ನು ನೈವೇದ್ಯವಾಗಿ ಇಡಬೇಕು. ಇದರಿಂದ ನಿಮ್ಮ ಮೇಲೆ ದೇವರ ಅನುಗ್ರಹ ದೊರೆತು ಅಂದುಕೊಂಡ ಕಾರ್ಯಗಳು ಕೈಗೂಡುತ್ತದೆ.

ಅದು ಅಲ್ಲದೆ ನಾವು ವಾಸಿಸುವ ಮನೆಯ ಸ್ವಚ್ಛೆತೆಯ ಬಗ್ಗೆ ಕುರಿತಂತೆ ಈ ಕೆಲವು ಮಾಹಿತಿಯನ್ನ ಅನುಸರಿಸಿ. 

ತೊಟ್ಟಿಕ್ಕುವ ನೀರಿನ ಟ್ಯಾಪ್‌: ಮನೆಯಲ್ಲಿ ನೀರು ವ್ಯರ್ಥವಾಗುತ್ತಿದ್ದರೆ ಲಕ್ಷ್ಮೀ ದೇವಿಯು ಖಂಡಿತಾ ಇಷ್ಟಪಡುವುದಿಲ್ಲ. ನೀರಿಲ್ಲದಿದ್ದರೆ ಯಾವ ಜೀವಿಯೂ ಬದುಕುವುದಿಲ್ಲ. ಆದ್ದರಿಂದ ಎಲ್ಲರಿಗೂ ಜೀವ ನೀಡುವ ನೀರು ವ್ಯರ್ಥವಾಗುತ್ತಿದ್ದರೆ ಅದು ಸಂಪತ್ತಿನ ದೇವತೆಯಾದ ಲಕ್ಷ್ಮೀದೇವಿಗೆ ಸ್ವೀಕಾರಾರ್ಹವಲ್ಲ. ನಿಮ್ಮ ಮನೆಯ ನೀರಿನ ನಲ್ಲಿಯಿಂದ ನೀರು ಹನಿಯಾಗಿ ತೊಟ್ಟಿಕ್ಕುತ್ತಿದ್ದರೆ ತಕ್ಷಣವೇ ಅದನ್ನು ಸರಿಪಡಿಸಿ. ಮನೆಯಲ್ಲಿ ನಿರಂತರವಾಗಿ ನೀರು ತೊಟ್ಟಿಕ್ಕುತ್ತಿದ್ದರೆ ಹಣದ ಸಂಕಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥವೆಂದರೆ ನೀರಿನಂತೆ ನಮ್ಮ ಹಣವೂ ವ್ಯರ್ಥವಾಗುವುದು. ಇಂತಹ ಸಮಸ್ಯೆ ಇರುವ ಟ್ಯಾಪ್‌ಗಳನ್ನು ಸರಿಪಡಿಸಿ.

ದೇವರ ಕೋಣೆಯಲ್ಲಿ ಒಣಗಿದ ಹೂವು: ಮನೆಯ ಪೂಜಾ ಕೋಣೆಯಲ್ಲಿ ಭಗವಂತನಿಗೆ ಪ್ರತಿದಿನ ನಾವು ಹೂಗಳನ್ನು ಅರ್ಪಿಸುತ್ತೇವೆ. ಆದರೆ ಕೆಲವು ಮನೆಗಳಲ್ಲಿ ದೇವರಿಗಿಟ್ಟ ಒಣಗಿದ ಹೂಗಳನ್ನು ತೆಗೆದು ಮತ್ತೆ ದೇವರ ಕೋಣೆಯಲ್ಲಿಯೇ ಇಡುತ್ತಾರೆ. ಅವುಗಳನ್ನು ತೆಗೆಯುವ ಗೋಜಿಗೆ ಹೋಗುವುದಿಲ್ಲ. ಆದರೆ ವಾಸ್ತುವಿನ ದೃಷ್ಟಿಯಿಂದ ಇದು ಸರಿಯಲ್ಲ. ಒಣಗಿದ ಹೂಗಳನ್ನು ದೇವರ ಕೋಣೆಯಲ್ಲಿ ಇಡಬೇಡಿ. ಇದನ್ನು ಲಕ್ಷ್ಮೀದೇವಿಯು ಇಷ್ಟಪಡುವುದಿಲ್ಲ. ಇವು ಹಣದ ನಷ್ಟಕ್ಕೂ ಕಾರಣವಾಗುತ್ತದೆ.

ಬಾಗಿಲಿನಲ್ಲಿ ಶಬ್ದ: ಮನೆಯ ಬಾಗಿಲು ತೆರೆಯುವಾಗ ಅಥವಾ ಮುಚ್ಚುವಾಗ ಅದು ಶಬ್ದವಾದರೆ ಅದು ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ಇದು ನಿಮ್ಮ ಮನೆಯಲ್ಲಿ ಜಗಳಕ್ಕೆ ಕಾರಣವಾಗಬಹುದು. ಬಾಗಿಲುಗಳು ಮುರಿದುಹೋಗಿದ್ದರೆ ಅದನ್ನು ಸರಿಪಡಿಸಬೇಕು. ಬಾಗಿಲು ತೆರೆಯವಾಗ ಮತ್ತು ಮತ್ತು ಮುಚ್ಚುವಾಗ ಶಬ್ದವಾದರೆ ಅದರ ಮಧ್ಯೆ ತೈಲವನ್ನು ಹಾಕಿ ಸರಿಪಡಿಸಬೇಕು. ಈ ಕಾರಣದಿಂದಾಗಿಯೂ ಮನೆಯಲ್ಲಿ ವೃಥಾ ಜಗಳವಾಗಬಹುದು, ಇದು ಸಂಭವಿಸಲು ಬಿಡದಿರಿ.

ಮನೆಯ ಉತ್ತರ ದಿಕ್ಕು ಸ್ವಚ್ಛವಾಗಿರಲಿ: ಮನೆಯ ಉತ್ತರ ದಿಕ್ಕನ್ನು ದೇವತಾಮೂಲೆ ಹಾಗೂ ಕುಬೇರ ಮೂಲೆ ಎಂದು ಕರೆಯಲಾಗುತ್ತದೆ. ಈ ದಿಕ್ಕನ್ನು ಎಂದಿಗೂ ಕೊಳಕು ಮಾಡಬಾರದು. ಮನೆಯ ಉತ್ತರ ದಿಕ್ಕಿನಲ್ಲಿ ಪೂಜೆಯನ್ನು ಮಾಡುವ ಮೂಲಕ ಪ್ರತಿದಿನ ಧೂಪ ಮತ್ತು ದೀಪವನ್ನು ಹಚ್ಚಿ. ಈ ದಿಕ್ಕಿನಲ್ಲಿ ಕಸ ಸಂಗ್ರಹವಾಗದ ಹಾಗೆ ನೋಡಿಕೊಳ್ಳಿ. ಇಲ್ಲವಾದರೆ ಹೆಚ್ಚು ಹಣ ಖರ್ಚಾಗಬಹುದು.

Trending News