'ನರಸಿಂಹರಾವ್ ಬಯಸಿದ್ದರೆ 1984 ರ ಗಲಭೆ ತಪ್ಪಿಸಬಹುದಿತ್ತು'

ಐಕೆ ಗುಜ್ರಾಲ್ ಅವರ 100 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಖ್ಯಾತ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್, "ಈ ಘಟನೆ ನಡೆದಾಗ, ಗುಜ್ರಾಲ್ ಜಿ ಅವರು ತುಂಬಾ ಕಾಳಜಿ ವಹಿಸಿದ್ದರು, ಅವರು ಅಂದು ಸಂಜೆ ಅಂದಿನ ಗೃಹ ಸಚಿವ ನರಸಿಂಹರಾವ್ ಅವರ ಬಳಿ ತೆರಳಿ ಪರಿಸ್ಥಿತಿ ಬಗ್ಗೆ ವಿವರಿಸಿದರು. ಸರ್ಕಾರವು ಶೀಘ್ರವೇ ಸೈನ್ಯವನ್ನು ಕರೆಯುವುದು ಅವಶ್ಯಕವಾಗಿದೆ ಎಂದು ವಿವರಿಸಿದ್ದರು. ಆ ಸಲಹೆಯನ್ನು ಗಮನಿಸಿದ್ದರೆ ಬಹುಶಃ 1984 ರ ಹತ್ಯಾಕಾಂಡವನ್ನು ತಪ್ಪಿಸಬಹುದಿತ್ತು"  ಎಂದು ಹೇಳಿದ್ದಾರೆ.

Last Updated : Dec 7, 2019, 01:30 PM IST
'ನರಸಿಂಹರಾವ್ ಬಯಸಿದ್ದರೆ 1984 ರ ಗಲಭೆ ತಪ್ಪಿಸಬಹುದಿತ್ತು' title=

ನವದೆಹಲಿ: 1984ರಲ್ಲಿ ಇಂದರ್ ಕುಮಾರ್ ಗುಜ್ರಾಲ್(IK Gujaral) ಅವರ ಸಲಹೆಯನ್ನು ಅಂದಿನ ಗೃಹ ಸಚಿವ 
ನರಸಿಂಹರಾವ್ ಆಲಿಸಿದ್ದಿದ್ದರೆ 1984 ರ ಸಿಖ್ ಗಲಭೆಯನ್ನು ತಪ್ಪಿಸಬಹುದಿತ್ತು ಎಂದು ಖ್ಯಾತ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್(Dr Manmohan Singh) ಬುಧವಾರ ಹೇಳಿದ್ದಾರೆ.

ಐ.ಕೆ. ಗುಜ್ರಾಲ್(1997-98ರಲ್ಲಿ ಭಾರತದ ಪ್ರಧಾನ ಮಂತ್ರಿ) ಅವರ 100 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಗ್, "ಈ ಘಟನೆ ನಡೆದಾಗ, ಗುಜ್ರಾಲ್ ಜಿ ಅವರು ತುಂಬಾ ಕಾಳಜಿ ವಹಿಸಿದ್ದರು. ಅವರು ಅಂದು ಸಂಜೆ ಅಂದಿನ ಗೃಹ ಸಚಿವ ನರಸಿಂಹರಾವ್ ಅವರ ಬಳಿ ತೆರಳಿ ಪರಿಸ್ಥಿತಿ ಬಗ್ಗೆ ವಿವರಿಸಿದರು. ಸರ್ಕಾರವು ಶೀಘ್ರವೇ ಸೈನ್ಯವನ್ನು ಕರೆಯುವುದು ಅವಶ್ಯಕವಾಗಿದೆ ಎಂದು ವಿವರಿಸಿದ್ದರು. ಆ ಸಲಹೆಯನ್ನು ಗಮನಿಸಿದ್ದರೆ ಬಹುಶಃ 1984 ರ ಹತ್ಯಾಕಾಂಡವನ್ನು ತಪ್ಪಿಸಬಹುದಿತ್ತು"  ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆ ಮಾಡಿದ ನಂತರ ಭುಗಿಲೆದ್ದಿದ್ದ, 1984 ರ ಸಿಖ್ ಹತ್ಯಾಕಾಂಡ ಎಂದೂ ಕರೆಯಲ್ಪಡುವ 1984 ರ ಸಿಖ್ ವಿರೋಧಿ ಗಲಭೆಯಲ್ಲಿ ಸುಮಾರು 3,000 ಜನರು ಸಾವನ್ನಪ್ಪಿದರು. 
 

Trending News