ಹಿಮಾಚಲ ಪ್ರದೇಶ: ಪುತ್ರ ಕಾಂಗ್ರೆಸ್ ಅಭ್ಯರ್ಥಿ, ಅವನ ವಿರುದ್ಧ ಪ್ರಚಾರ ಮಾಡುವುದಿಲ್ಲ- ಬಿಜೆಪಿ ಸಚಿವ

ಹಿಮಾಚಲ ಪ್ರದೇಶದ ಬಿಜೆಪಿ ಸಚಿವ ಅನಿಲ್ ಶರ್ಮಾ ಅವರು ಮಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿರುವ ಅವರ ಮಗ ಆಶ್ರೇ ಶರ್ಮಾ ವಿರುದ್ಧ ಪ್ರಚಾರ ಮಾಡುವಿದಿಲ್ಲವೆಂದು ಹೇಳಿದ್ದಾರೆ.

Last Updated : Mar 31, 2019, 10:34 AM IST
ಹಿಮಾಚಲ ಪ್ರದೇಶ: ಪುತ್ರ ಕಾಂಗ್ರೆಸ್ ಅಭ್ಯರ್ಥಿ, ಅವನ ವಿರುದ್ಧ ಪ್ರಚಾರ ಮಾಡುವುದಿಲ್ಲ- ಬಿಜೆಪಿ ಸಚಿವ  title=
Photo courtesy: Twitter

ನವದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಸಚಿವ ಅನಿಲ್ ಶರ್ಮಾ ಅವರು ಮಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿರುವ ಅವರ ಮಗ ಆಶ್ರೇ ಶರ್ಮಾ ವಿರುದ್ಧ ಪ್ರಚಾರ ಮಾಡುವಿದಿಲ್ಲವೆಂದು ಹೇಳಿದ್ದಾರೆ.

ಮಂಡಿ ಸಂಸತ್ ಕ್ಷೇತ್ರದಿಂದ ಆಶ್ರೇ ಶರ್ಮಾರಿಗೆ ಕಾಂಗ್ರೆಸ್ ಟಿಕೆಟ್ ಹಂಚಿಕೆಯಾದ ನಂತರ ತನ್ನ ಮಗನ ವಿರುದ್ಧ ಪ್ರಚಾರ ಮಾಡುವುದಿಲ್ಲವೆಂದು ಅನಿಲ್ ಶರ್ಮಾ ಪಿಟಿಐಗೆ ತಿಳಿಸಿದರು. ಸುಖರಾಮ್ ಅವರ ಪುತ್ರ ಅನಿಲ್ ಶರ್ಮಾ ಮಂಡಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿದ್ದಾರೆ, ಮಂಡಿ ಪಾರ್ಲಿಮೆಂಟರಿ ವಿಭಾಗದಲ್ಲಿ 16 ಇತರ ಅಸೆಂಬ್ಲಿ ವಿಭಾಗಗಳು ಸೇರಿವೆ.

ಅನಿಲ್ ಶರ್ಮಾ ಪಿಟಿಐ ಜೊತೆ ಮಾತನಾಡುತ್ತಾ" ನನ್ನ ತಂದೆ ಸುಖ್ ರಾಮ್ ಮತ್ತು ನನ್ನ ಪುತ್ರ ಮಾರ್ಚ್ 25 ರಂದು ಕಾಂಗ್ರೆಸ್ಗೆ ಸೇರಿಕೊಂಡ ನಂತರ ಒಂದು ವೇಳೆ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿದರೆ ಅವರ ವಿರುದ್ಧ ಪ್ರಚಾರ ಮಾಡುವುದಿಲ್ಲವೆಂದು ಈಗಾಗಲೇ ಬಿಜೆಪಿ ನಾಯಕರಿಗೆ ಸ್ಪಷ್ಟಪಡಿಸಿದ್ದೇನೆ" ಎಂದು ತಿಳಿಸಿದರು.

ಈ ವಿಷಯದ ಬಗ್ಗೆ ಹಿಮಾಚಲ ಪ್ರದೇಶದ ಬಿಜೆಪಿ ಅಧ್ಯಕ್ಷ ಸತ್ಪಾಲ್ ಸಿಂಗ್ ಸಟ್ಟಿ ಅವರನ್ನು ಕೇಳಿದಾಗ"ಮಾಧ್ಯಮವು ಈ ವಿಚಾರವನ್ನು ಏಕೆ ಫಾಲೋ ಮಾಡುತ್ತಿದೆ ಎನ್ನುವುದು ತಿಳಿಯುತ್ತಿಲ್ಲ, ಇದು ಅವರ ಕೌಟುಂಬಿಕ ವಿಷಯ" ಎಂದು ಹೇಳಿದರು.

Trending News