ಕಾಶ್ಮೀರದಲ್ಲಿ ಜನರ ಮೇಲಿನ ನಿರ್ಬಂಧಕ್ಕೆ ಬೇಸತ್ತು ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ

ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಅಲ್ಲಿನ ಲಕ್ಷಾಂತರ ಜನರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದ್ದಕ್ಕೆ ಬೇಸತ್ತು ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್  ರಾಜೀನಾಮೆ ನೀಡಿದ್ದಾರೆ.

Last Updated : Aug 25, 2019, 11:54 AM IST
ಕಾಶ್ಮೀರದಲ್ಲಿ ಜನರ ಮೇಲಿನ ನಿರ್ಬಂಧಕ್ಕೆ ಬೇಸತ್ತು ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ title=
photo courtesy: FACEBOOK

ನವದೆಹಲಿ: ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಅಲ್ಲಿನ ಲಕ್ಷಾಂತರ ಜನರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಿದ್ದಕ್ಕೆ ಬೇಸತ್ತು ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್  ರಾಜೀನಾಮೆ ನೀಡಿದ್ದಾರೆ.

ದಾದ್ರಾ ಮತ್ತು ನಗರ ಹವೇಲಿಯ ಪ್ರಮುಖ ಇಲಾಖೆಗಳ ಕಾರ್ಯದರ್ಶಿಯಾಗಿ ಗೋಪಿನಾಥನ್ ಅವರು ನಷ್ಟದಲ್ಲಿದ್ದ ಸರ್ಕಾರಿ ವಿದ್ಯುತ್ ವಿತರಣಾ ಸಂಸ್ಥೆಯನ್ನು ಲಾಭದಾಯಕ ಸಂಸ್ಥೆಯಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. "...ನನ್ನ ರಾಜೀನಾಮೆ ಯಾವುದೇ ಪರಿಣಾಮ ಬೀರುವುದಿಲ್ಲ.ಆದರೆ ಇನ್ನೊಬ್ಬರಿಗೆ ಉತ್ತರಿಸಲು ನಮಗೆ ಆತ್ಮ ಸಾಕ್ಷಿ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ ಎಂದು ಗೋಪಿನಾಥನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಜಮ್ಮು ಮತ್ತು ಕಾಶ್ಮೀರದಲ್ಲಿ, ಲಕ್ಷಾಂತರ ಜನರ ಮೂಲಭೂತ ಹಕ್ಕುಗಳನ್ನು 20 ದಿನಗಳವರೆಗೆ ಅಮಾನತುಗೊಳಿಸಲಾಗಿದೆ. ಮತ್ತು ಭಾರತದಲ್ಲಿ ಅನೇಕರಿಗೆ ಇದು ಸರಿಯೆಂದು ತೋರುತ್ತದೆ. ಇದು ಭಾರತದಲ್ಲಿ 2019 ರಲ್ಲಿ ನಡೆಯುತ್ತಿದೆ.370 ನೇ ವಿಧಿ ಅಥವಾ ಅದನ್ನು ರದ್ದುಪಡಿಸುವುದು ಸಮಸ್ಯೆಯಲ್ಲ, ಆದರೆ ಇದಕ್ಕೆ ನಾಗರಿಕರು ಪ್ರತಿಕ್ರಿಯಿಸುವ ಹಕ್ಕನ್ನು ನಿರಾಕರಿಸುವುದು ಪ್ರಮುಖ ವಿಷಯವಾಗಿದೆ. ಅವರು ಈ ಕ್ರಮವನ್ನು ಸ್ವಾಗತಿಸಬಹುದು ಅಥವಾ ಪ್ರತಿಭಟಿಸಬಹುದು, ಅದು ಅವರ ಹಕ್ಕು "ಎಂದು ಗೋಪಿನಾಥನ್ ತಿಳಿಸಿದರು, ಈ ವಿಷಯವು ತಮಗೆ ರಾಜೀನಾಮೆ ನೀಡುವಷ್ಟು ಆಘಾತಗೊಳಿಸಿದೆ ಎಂದು ಹೇಳಿದರು.

"ಮಾಜಿ ಐಎಎಸ್ ಅಧಿಕಾರಿಯನ್ನು ವಿಮಾನ ನಿಲ್ದಾಣದಿಂದ ಬಂಧಿಸಿದಾಗಲೂ, ನಾಗರಿಕ ಸಮಾಜದಿಂದ ಸಂಪೂರ್ಣ ಪ್ರತಿಕ್ರಿಯೆಯ ಕೊರತೆಯಿತ್ತು. ಈ ದೇಶದಲ್ಲಿ ಹೆಚ್ಚಿನವರಿಗೆ ಇದು ಸರಿಯೆಂದು ತೋರುತ್ತದೆ" ಎಂದು ಗೋಪಿನಾಥನ್ ಹೇಳಿದರು.

ಏಳು ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿದ್ದ ಗೋಪಿನಾಥನ್ ಆಗಸ್ಟ್ 21 ರಂದು ತಮ್ಮ ರಾಜೀನಾಮೆಯನ್ನು ನೀಡಿದರು.
 

Trending News