ದಲಿತ ಮತಗಳನ್ನು ಕಡೆಗಣಿಸದಿರಿ- ಬಿಜೆಪಿ-ಶಿವಸೇನಾ ವಿರುದ್ಧ ರಾಮದಾಸ್ ಅಠವಾಳೆ ಗರಂ

ಕೇಂದ್ರ ಸಚಿವ ರಾಮ್ ದಾಸ್ ಅಠವಾಳೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

Last Updated : Mar 18, 2019, 02:33 PM IST
ದಲಿತ ಮತಗಳನ್ನು ಕಡೆಗಣಿಸದಿರಿ- ಬಿಜೆಪಿ-ಶಿವಸೇನಾ ವಿರುದ್ಧ ರಾಮದಾಸ್ ಅಠವಾಳೆ ಗರಂ  title=

ನವದೆಹಲಿ: ಕೇಂದ್ರ ಸಚಿವ ರಾಮ್ ದಾಸ್ ಅಠವಾಳೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಆಂಗ್ಲ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿರುವ ರಾಮದಾಸ್ ಅಠವಾಳೆ  "ಇತ್ತೀಚಿಗೆ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಶಿವಸೇನಾ ಮತ್ತು ಬಿಜೆಪಿ ಪಕ್ಷವು ಮೈತ್ರಿಕೂಟದ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಮದಾಸ್ ಅಠವಾಳೆ " 2019 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಿಪಬ್ಲಿಕ್ ಪಕ್ಷವನ್ನು ಶಿವಸೇನಾ-ಬಿಜೆಪಿ ನಾಯಕರು ಕಡೆಗಣಿಸಿರುವುದು ನಿಜಕ್ಕೂ ಅಸಮಾಧಾನ ತಂದಿದೆ. ಎರಡು ಪಕ್ಷಗಳು ಕ್ರಮವಾಗಿ 23 ಹಾಗೂ 25 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಅವರು ಕನಿಷ್ಠ ಒಂದು ಸ್ಥಾನವನ್ನಾದರು ಆರ್ಪಿಐಗಾಗಿ ಪರಿಗಣಿಸಬೇಕಾಗಿತ್ತು, ನಾನು ಮುಂಬೈ ಈಶಾನ್ಯ ಭಾಗದಲ್ಲಿ ಅಥವಾ ಮುಂಬೈ ಉತ್ತರ ಸೆಂಟ್ರಲ್ ಭಾಗದಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ಹೊಂದಿದ್ದೆ "ಎಂದು ಅಠವಾಳೆ ತಿಳಿಸಿದರು.

ಎನ್ ಡಿ ಎ ದಿಂದ ದೂರ ಉಳಿಯುವ ಉದ್ದೇಶವೇನಾದರು ಇದೆಯೇ ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಠವಾಳೆ " ಇಲ್ಲ ಈಗ ಅಂತಹ ಯಾವುದೇ ತೀರ್ಮಾನವನ್ನು ತೆಗೆದುಕೊಂಡರೆ ಅದು ಪೂರ್ವಾಗ್ರಹ ಪೀಡಿತವಾಗುತ್ತದೆ. ಆರ್ಪಿಐ ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡುವ ನಿರ್ಧಾರವನ್ನು ಕೈಗೊಂಡಿದೆ. ಆದರೆ ಇದೇ ವೇಳೆ  ಬಿಜೆಪಿ-ಶಿವಸೇನಾಗೆ ದಲಿತರ ಮತಗಳನ್ನು ಸಣ್ಣದಾಗಿ ಪರಿಗಣಿಸಬೇಡಿ ಎಂದು ಅವರು ಎಚ್ಚರಿಕೆ ನೀಡಿದರು. 

Trending News