ನಾನು ಪ್ರಧಾನಿ ಹುದ್ದೆಗೆ ಸ್ಪರ್ಧಿಯಲ್ಲ -ನಿತೀನ್ ಗಡ್ಕರಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಮತ್ತು ಸಿದ್ಧಾಂತದ ಅಡಿಯಲ್ಲಿ ದೇಶವು ಪ್ರಗತಿ ಸಾಧಿಸುತ್ತಿದೆ. ತಾವು ಆ ಪ್ರಧಾನಿ ಹುದ್ದೆಗೆ ಸ್ಪರ್ಧಿಯಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನೀತಿನ್ ಗಡ್ಕರಿ ತಿಳಿಸಿದರು.

Last Updated : Mar 1, 2019, 02:59 PM IST
ನಾನು ಪ್ರಧಾನಿ ಹುದ್ದೆಗೆ ಸ್ಪರ್ಧಿಯಲ್ಲ -ನಿತೀನ್ ಗಡ್ಕರಿ  title=
file photo

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಮತ್ತು ಸಿದ್ಧಾಂತದ ಅಡಿಯಲ್ಲಿ ದೇಶವು ಪ್ರಗತಿ ಸಾಧಿಸುತ್ತಿದೆ. ತಾವು ಆ ಪ್ರಧಾನಿ ಹುದ್ದೆಗೆ ಸ್ಪರ್ಧಿಯಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನೀತಿನ್ ಗಡ್ಕರಿ ತಿಳಿಸಿದರು.

ನೀತಿನ್ ಗಡ್ಕರಿ ಶುಕ್ರವಾರದಂದು ಇಂಡಿಯಾ ಟುಡೇ ಕಂಕ್ಲೇವ್ ನಲ್ಲಿ ಭಾಗವಹಿಸಿ ಮಾತನಾಡುತ್ತಾ."ನಾನು ಪ್ರಧಾನ ಮಂತ್ರಿ ಹುದ್ದೆಗೆ ಸ್ಪರ್ಧಿಯಲ್ಲ. ಮೋದಿ ಅವರು ಚುನಾವಣೆ ನಂತರವೂ ಪ್ರಧಾನಿಯಾಗುತ್ತಾರೆ. ನಾನು ಆರ್ಎಸ್ಎಸ್ ನ ವ್ಯಕ್ತಿ, ರಾಷ್ಟ್ರದ ಸೇವೆ ನನ್ನ ಕರ್ತವ್ಯವಾಗಿದೆ. ನಾವೆಲ್ಲರೂ ಅವರ ಹಿಂದೆ ಇರುತ್ತೇವೆ. ನಾನು ಅವರ ವಿಚಾರಗಳನ್ನು ಕಾರ್ಯಗತಗೊಳಿಸುವ ಮತ್ತೊಬ್ಬ ಸೇವಕ.ಆದ್ದರಿಂದ ಪ್ರಧಾನಿಯಾಗುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದರು.

ಇದೇ ವೇಳೆ 'ಕ್ಲೀನ್ ಗಂಗಾ' ಯೋಜನೆಯ ಬಗ್ಗೆ ಮಾತನಾಡಿದ ಗಡ್ಕರಿ, "ಗಂಗಾದಲ್ಲಿ ನೀರಿನ ಹರಿವು ಮೋದಿ ಸರ್ಕಾರದಲ್ಲಿ ಹೆಚ್ಚಾಗಿದೆ. ಈಗ 13 ತಿಂಗಳುಗಳಲ್ಲಿ, ಗಂಗಾ ನದಿ ಶುಚಿಯಾಗಲಿದೆ ಎಂದರು. ಈ ಹಿಂದೆ ನಿರುದ್ಯೋಗದ ವಿಚಾರವಾಗಿ ಹೇಳಿಕೆ ನೀಡಿದ್ದ ಗಡ್ಕರಿ ಈ ವಿಚಾರವಾಗಿ ಮಾತನಾಡುತ್ತಾ ತಮ್ಮ  ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ.ತಾವು ಗಣಕೀಕರಣದ ನಂತರ ಉದ್ಯೋಗಗಳು ಕಡಿಮೆಯಾಗಿದೆ ಎಂದು ಹೇಳಿದ್ದು ಎಂದರು.

Trending News