ಯೂಟ್ಯೂಬ್ ನೋಡಿ ಹೆರಿಗೆಗೆ ಸಾಹಸ...ಆಗಿದ್ದೇನು ಗೊತ್ತೇ?

ಪತಿ ಕಾರ್ತಿಕೇಯನ್ ತನ್ನ ಕುಟುಂಬ ಸ್ನೇಹಿತ ಪ್ರವೀಣ ಹಾಗೂ ಲಾವಣ್ಯ ದಂಪತಿ ಜೊತೆ ಸೇರಿ ಯೂಟ್ಯೂಬ್ ವಿಡಿಯೋ ನೋಡಿ ಹೆರಿಗೆ ಮಾಡಿಸುವ ಪ್ರಯತ್ನ ಮಾಡಿದ್ದಾನೆ.

Last Updated : Jul 26, 2018, 08:22 PM IST
ಯೂಟ್ಯೂಬ್ ನೋಡಿ ಹೆರಿಗೆಗೆ ಸಾಹಸ...ಆಗಿದ್ದೇನು ಗೊತ್ತೇ? title=

ಚೆನ್ನೈ: ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಲು ಹೋಗಿ ಪತ್ನಿಯನ್ನೇ ಕಳೆದುಕೊಂಡ ಮನಕಲಕುವ ಘಟನೆ ತಿರುವಣ್ಣಾಮಲೈ ಜಿಲ್ಲೆಯ ಪುದುಪಾಲ್ಯಂ ಸಮೀಪದ ರೈತನಗಿರೀಶ್ವರ್​​ ನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಕೃತಿಕಾ(28) ಎಂದು ಗುರುತಿಸಲಾಗಿದೆ. 

ಆಸ್ಪತ್ರೆಯ ಖರ್ಚು ಉಳಿಸುವ ಉದ್ದೇಶದಿಂದ ಪತಿ ಕಾರ್ತಿಕೇಯನ್ ತನ್ನ ಕುಟುಂಬ ಸ್ನೇಹಿತ ಪ್ರವೀಣ ಹಾಗೂ ಲಾವಣ್ಯ ದಂಪತಿ ಜೊತೆ ಸೇರಿ ಯೂಟ್ಯೂಬ್ ವಿಡಿಯೋ ಪತ್ನಿ ಕ್ರುತಿಕಗೆ ಹೆರಿಗೆ ಮಾಡಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಹೆರಿಗೆ ಆಗಿ ಹೆಣ್ಣು ಮಗು ಬದುಕುಳಿದಿದ್ದು, ತಾಯಿ ಕೃತಿಕ ಮೃತಪಟ್ಟಿದ್ದಾಳೆ. 

ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕೇಯನ್ ದಂಪತಿಗೆ ಈಗಾಗಲೇ ಮೂರೂ ವರ್ಷದ ಮಗಳಿದ್ದಾಳೆ. ಗರ್ಭಿಣಿಯಾಗಿದ್ದ ಪತ್ನಿ ಕೃತಿಕಾಗೆ ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮನೆಯಲ್ಲೇ ಹೆರಿಗೆ ಮಾಡಿಸಲು ಹೋಗಿ ಈ ದುರಂತ ನಡೆದಿದೆ. ಸದ್ಯ ಕಾರ್ತಿಕೇಯನ್ ಮತ್ತು ಪ್ರವೀಣ್-ಲಾವಣ್ಯ ದಂಪತಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

Trending News