ಹ್ಯೂಸ್ಟನ್: 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 50 ಸಾವಿರ ಅಮೆರಿಕನ್ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ ಕವಿತೆಯ ಎರಡು ಸಾಲುಗಳು ನೆರೆದಿದ್ದವರನ್ನು ಮೂಖ ವಿಸ್ಮಿತರನ್ನಾಗಿಸಿತು. ಸಮಯದ ಅಭಾವದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕವಿತೆಯನ್ನು ಪೂರ್ಣವಾಗಿ ಓದದಿದ್ದರೂ, ಕೇವಲ ಎರಡು ಸಾಲುಗಳನ್ನು ಮಾತ್ರ ಹೇಳಿದರು. ಆದರೆ ಅವರ ಎರಡು ಸಾಲುಗಳು ಪ್ರೇಕ್ಷಕರನ್ನು ಮೋಡಿಮಾಡಿದವು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, ಸಂಪೂರ್ಣ ಕವಿತೆಯನ್ನು ಇಲ್ಲಿ ಪಠಿಸಲು ಸಮಯವಿಲ್ಲ. ಆದರೆ ನಾನು ಬರೆದ ಕವಿತೆಯ ಎರಡು ಸಾಲುಗಳನ್ನು ನಿಮಗೆ ಹೇಳಲು ಬಯಸುತ್ತೇನೆ ಎನ್ನುತ್ತಾ, "ಕಷ್ಟಗಳನ್ನು ಎದುರಿಸುತ್ತಿರುವವರು, ನನ್ನ ಆತ್ಮಗಳ ಗೋಪುರ" ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 50 ಸಾವಿರ ಅಮೆರಿಕನ್ ಭಾರತೀಯರನ್ನು ಉದ್ದೇಶಿಸಿ 'ಹೌಡಿ ಮೋದಿ'ಗೆ ಪ್ರತಿಕ್ರಿಯಿಸಿ ಭಾರತದಲ್ಲಿ ಎಲ್ಲವೂ ಉತ್ತಮವಾಗಿದೆ ಎಂದು ಹೇಳಿದರು. ಭಾರತದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ ಎಂಬುದನ್ನು ದೇಶದ ಹಲವು ಭಾಷೆಗಳಲ್ಲಿ ಉಚ್ಚರಿಸಿದರು. ಭಾರತದಲ್ಲಿನ ಭಾಷೆಗಳ ವೈವಿಧ್ಯತೆಗೆ ಒತ್ತು ನೀಡಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಅಲ್ಲಿನ ಅಮೆರಿಕನ್ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾನು ಹೇಳಿದ್ದರಿಂದ ನನ್ನ ಅಮೇರಿಕನ್ ಸ್ನೇಹಿತರು ಆಶ್ಚರ್ಯಚಕಿತರಾಗಿದ್ದಾರೆ. ಅಧ್ಯಕ್ಷ ಟ್ರಂಪ್ ಮತ್ತು ನನ್ನ ಅಮೇರಿಕನ್ ಸ್ನೇಹಿತರಿಗೆ ನಾನು ಭಾರತೀಯ ಭಾಷೆಗಳಲ್ಲಿ ಎಲ್ಲವೂ ಉತ್ತಮವಾಗಿದೆ ಎಂದು ಹೇಳಿದೆ' ಎಂದು ವಿವರಿಸಿದರು.
#WATCH Prime Minister Narendra Modi says,'everything is fine,' in different Indian languages. pic.twitter.com/IpSKbGpTjg
— ANI (@ANI) September 22, 2019
ಭಾರತವು ವಿವಿಧ ಭಾಷೆಗಳು, ವಿಭಿನ್ನ ಸಂಸ್ಕೃತಿ, ವಿಭಿನ್ನ ಆಹಾರವನ್ನು ಹೊಂದಿರುವ ವೈವಿಧ್ಯತೆಗಳಿಂದ ಕೂಡಿದೆ ಮತ್ತು ಅದು ಅದರ ವಿಶಿಷ್ಟ ಗುರುತು ಹಾಗೂ ಶಕ್ತಿಯೂ ಹೌದು. ನಮ್ಮ ರೋಮಾಂಚಕ ಪ್ರಜಾಪ್ರಭುತ್ವ ನಮ್ಮ ಅಡಿಪಾಯ ಮತ್ತು ಇದು ನಮ್ಮ ಸ್ಫೂರ್ತಿ ಎಂದು ಪ್ರಧಾನಿ ಮೋದಿ ತಿಳಿಸಿದರು.