Covid-19 ನಾಲ್ಕನೇ ಅಲೆ ಎಷ್ಟು ತೀವ್ರವಾಗಿ ಅಪ್ಪಳಿಸಲಿದೆ? ಈ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ..

Covid-19 fourth Wave: ಭಾರತವು ಇಲ್ಲಿಯವರೆಗೆ ಕೋವಿಡ್ -19 ರ ಮೂರು ಅಲೆಗಳನ್ನು ಎದುರಿಸಿದೆ. ಇದರಲ್ಲಿ ವೈರಸ್‌ನ ಅಪಾಯಕಾರಿ ಡೆಲ್ಟಾ ರೂಪಾಂತರದಿಂದ ಎದುರಾದ ಎರಡನೇ ಅಲೆ ತೀರಾ ಮಾರಣಾಂತಿಕವಾಗಿತ್ತು. 

Written by - Chetana Devarmani | Last Updated : Mar 20, 2022, 11:19 AM IST
  • ಯುರೋಪ್ ಮತ್ತು ಏಷ್ಯಾ ಸೇರಿದಂತೆ ವಿಶ್ವದ ಹಲವಾರು ಭಾಗಗಳಲ್ಲಿ ಕೋವಿಡ್ -19 ಭೀತಿಯಿಂದ ಜನ ಕಂಗೆಟ್ಟಿದ್ದರು
  • ಮತ್ತೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ
  • ಕೊಂಚ ಕಾಲ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಇದೀಗ ಕೊರೊನಾ ನಾಲ್ಕನೇ ಅಲೆಯ ಭೀತಿ ಎದುರಾಗಿದೆ
Covid-19 ನಾಲ್ಕನೇ ಅಲೆ ಎಷ್ಟು ತೀವ್ರವಾಗಿ ಅಪ್ಪಳಿಸಲಿದೆ? ಈ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ..  title=
ಕೋವಿಡ್ -19

ನವದೆಹಲಿ: ಯುರೋಪ್ ಮತ್ತು ಏಷ್ಯಾ ಸೇರಿದಂತೆ ವಿಶ್ವದ ಹಲವಾರು ಭಾಗಗಳಲ್ಲಿ ಕೋವಿಡ್ -19 (Covid-19) ಭೀತಿಯಿಂದ ಜನ ಕಂಗೆಟ್ಟಿದ್ದರು. ಕೊರೊನಾ (Corona) ಸೃಷ್ಟಿಸಿದ ಅನಾಹುತ ಅಷ್ಟಿಷ್ಟಲ್ಲ. ಕೊಂಚ ಕಾಲ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಇದೀಗ ಕೊರೊನಾ ನಾಲ್ಕನೇ ಅಲೆಯ ಭೀತಿ ಎದುರಾಗಿದೆ. ಮತ್ತೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ. 

ಇದನ್ನೂ ಓದಿ: ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳಿಗೆ ಮಾಸಿಕ 1000 ರೂ ನೆರವು ಘೋಷಿಸಿದ ತಮಿಳುನಾಡು ಸರ್ಕಾರ

ಭಾರತವು ಈಗಾಗಲೇ ಕೋವಿಡ್ -19 ರ ಮೂರು ಅಲೆಗಳನ್ನು ಎದುರಿಸಿದೆ. ಇದರಲ್ಲಿ ವೈರಸ್‌ನ ಅಪಾಯಕಾರಿ ಡೆಲ್ಟಾ (Delta) ರೂಪಾಂತರದಿಂದ ಬಂದ ಎರಡನೇ ಅಲೆ ಮಾರಣಾಂತಿಕವಾಗಿತ್ತು. ಅನೇಕ ಜನರ ಜೀವವನ್ನು ಬಾಲಿ ಪಡೆಯಿತು. 

ಕೋವಿಡ್ -19 ರ ಸಂಭವನೀಯ ನಾಲ್ಕನೇ ಅಲೆಯ (Covid-19 fourth Wave) ವರದಿಗಳು ಬರುತ್ತಿವೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದು ಸ್ಪೈಕ್‌ಗಾಗಿ ಭಾರತ ಸಿದ್ಧವಾಗುವ ತಜ್ಞರು ಅಭಿಪ್ರಾಯ ತಿಳಿಸಿದ್ದಾರೆ. 

ಭಾರತದಲ್ಲಿ ನಾಲ್ಕನೇ ಅಲೆ: 

ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗಣಿತ ಮತ್ತು ಸಂಖ್ಯಾಶಾಸ್ತ್ರ ವಿಭಾಗದ ಅಧ್ಯಯನವು ಈ ವರ್ಷದ ಜೂನ್‌ನಲ್ಲಿ ಕೋವಿಡ್ -19 ರ ನಾಲ್ಕನೇ ಅಲೆಯ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ. ಈ ಅಲೆಯು ಭಾರತದ ಆರೋಗ್ಯ ಮತ್ತು ಮೂಲಸೌಕರ್ಯದ ಮೇಲೆ ಒತ್ತಡವನ್ನು ಉಂಟುಮಾಡುವುದಿಲ್ಲ ಮತ್ತು ಹಿಂದಿನ ಎಲ್ಲ ಅಲೆಗಳಿಗಿಂತ ಕಡಿಮೆ ಅಪಾಯಕಾರಿ ಎಂದು ಸಂಶೋಧನೆ ಹೇಳಿದೆ.

ಇದನ್ನೂ ಓದಿ: RRR ಪ್ರೀ ರಿಲೀಸ್ ಇವೆಂಟ್ : ಪ್ರೇಕ್ಷಕರಿಂದ ನೂಕು ನುಗ್ಗಲು, ಪೊಲೀಸರಿಂದ ಲಘು ಲಾಠಿ ಪ್ರಹಾರ!

ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ, NITI ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್, ಜನಸಂಖ್ಯೆಯ ಹೆಚ್ಚಿನ ಭಾಗವು ಸ್ವಾಭಾವಿಕವಾಗಿ ರೋಗನಿರೋಧಕವನ್ನು ಹೊಂದಿರುವುದರಿಂದ ಮತ್ತು ಕೋವಿಡ್ ಲಸಿಕೆಗಳ ಎರಡೂ ಡೋಸ್ ಗಳನ್ನು ಸ್ವೀಕರಿಸಿರುವುದರಿಂದ ಭಾರತವು ಮತ್ತೊಂದು ಸಂಭವನೀಯ ಅಲೆಗೆ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News