Aiplane Milage: ಒಂದು ಲೀಟರ್ ಇಂಧನದಲ್ಲಿ ವಿಮಾನ ಎಷ್ಟು ದೂರ ಪ್ರಯಾಣಿಸುತ್ತೆ? ಇದರ ಮೈಲೇಜ್ ಬಗ್ಗೆ ತಿಳಿದರೆ ಶಾಕ್ ಆಗ್ತೀರ!

Aviation Turbine Fuel: ನಿಮಗೆ ವಿಮಾನಕ್ಕೆ ಬಳಸುವ ಇಂಧನದ ಬಗ್ಗೆ ಮಾಹಿತಿ ತಿಳಿದಿದೆಯೇ? ಅದಕ್ಕೆ ಬಳಸುವ ಇಂಧನ ಯಾವುದು ಎಂದು ಆಲೋಚಿಸಿದ್ದೀರಾ? ಒಂದು ಲೀಟರ್ ಇಂಧನದಲ್ಲಿ ವಿಮಾನ ಎಷ್ಟು ಮೈಲೇಜ್ ನೀಡುತ್ತದೆ ಎಂದು ಗೊತ್ತಾ? ಈ ಎಲ್ಲಾ ವಿಚಾರಗಳಿಗೆ ನಾವಿಂದು ಉತ್ತರ ನೀಡಲಿದ್ದೇವೆ.  

Written by - Bhavishya Shetty | Last Updated : Apr 8, 2023, 03:37 PM IST
    • ಜಗತ್ತಿನ ಅತೀ ಪ್ರಬಲ ಸಾರಿಗೆ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕಿದೆ.
    • ನಿಮಗೆ ವಿಮಾನಕ್ಕೆ ಬಳಸುವ ಇಂಧನದ ಬಗ್ಗೆ ಮಾಹಿತಿ ತಿಳಿದಿದೆಯೇ?
    • ಅದಕ್ಕೆ ಬಳಸುವ ಇಂಧನ ಯಾವುದು ಎಂದು ಆಲೋಚಿಸಿದ್ದೀರಾ?
Aiplane Milage: ಒಂದು ಲೀಟರ್ ಇಂಧನದಲ್ಲಿ ವಿಮಾನ ಎಷ್ಟು ದೂರ ಪ್ರಯಾಣಿಸುತ್ತೆ? ಇದರ ಮೈಲೇಜ್ ಬಗ್ಗೆ ತಿಳಿದರೆ ಶಾಕ್ ಆಗ್ತೀರ!   title=
Airplane mileage

Aviation Turbine Fuel: ಮಧ್ಯಮ ವರ್ಗದ ಸಾಮಾನ್ಯ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣ ಬೆಳಸಲು ಬಸ್ ಅಥವಾ ರೈಲು ಸೇವೆಗಳನ್ನು ಬಳಸುತ್ತಾರೆ. ಇದು ಬಜೆಟ್ ಫ್ರೆಂಡ್ಲಿ ಎಂಬ ಕಾರಣಕ್ಕೆ ಇದನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಆದರೆ ವಿದೇಶಕ್ಕೆ ತೆರಳಬೇಕೆಂದರೆ ಹಡಗು ಅಥವಾ ವಿಮಾನವನ್ನು ಅನುಸರಿಸುತ್ತೇವೆ. ತ್ವರಿತವಾಗಿ ತಲುಪಬೇಕೆಂದರೆ ವಿಮಾನ ಸೇವೆಯನ್ನು ಬಳಕೆ ಮಾಡುತ್ತೇವೆ. ಹೀಗಿರುವಾಗ ಜಗತ್ತಿನ ಅತೀ ಪ್ರಬಲ ಸಾರಿಗೆ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕಿದೆ.

ಇದನ್ನೂ ಓದಿ: Corona Viraus : ಕೊರೊನಾ ಆರ್ಭಟ ಮತ್ತೆ ಶುರು.. ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ನಿಮಗೆ ವಿಮಾನಕ್ಕೆ ಬಳಸುವ ಇಂಧನದ ಬಗ್ಗೆ ಮಾಹಿತಿ ತಿಳಿದಿದೆಯೇ? ಅದಕ್ಕೆ ಬಳಸುವ ಇಂಧನ ಯಾವುದು ಎಂದು ಆಲೋಚಿಸಿದ್ದೀರಾ? ಒಂದು ಲೀಟರ್ ಇಂಧನದಲ್ಲಿ ವಿಮಾನ ಎಷ್ಟು ಮೈಲೇಜ್ ನೀಡುತ್ತದೆ ಎಂದು ಗೊತ್ತಾ? ಈ ಎಲ್ಲಾ ವಿಚಾರಗಳಿಗೆ ನಾವಿಂದು ಉತ್ತರ ನೀಡಲಿದ್ದೇವೆ. 

ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಲು ಕಷ್ಟಕರವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ "ಸರಾಸರಿ ಪ್ರಯಾಣಿಕ ವಿಮಾನ" ದ ವ್ಯಾಖ್ಯಾನ. ಮತ್ತೊಂದು ಕಾರಣವೆಂದರೆ, ಚಾಲ್ತಿಯಲ್ಲಿರುವ ಪರಿಸ್ಥಿತಿಗಳ ಆಧಾರದ ಮೇಲೆ ಇಂಧನ ಬಳಕೆಯಲ್ಲಿ ಭಾರಿ ವ್ಯತ್ಯಾಸಗಳಾಗುತ್ತವೆ. ಉದಾಹರಣೆಗೆ ವಿಮಾನದ ತೂಕ, ವಿಮಾನದ ಎತ್ತರ ಮತ್ತು ಹವಾಮಾನ ಪರಿಸ್ಥಿತಿಗಳು ಹೀಗೆ ಅನೇಕ ವಿಚಾರಗಳಿವೆ.

ನೀವು ಕಿಮೀ/ಲೀನಲ್ಲಿ ವಿಮಾನದ ಮೈಲೇಜ್ ಅನ್ನು ಲೆಕ್ಕಾಚಾರ ಮಾಡಲು ಬಯಸಿದರೆ, ಇಲ್ಲಿ ನಿಮಗೆ ವಿವರವಾಗಿ ಮಾಹಿತಿ ನೀಡಲಿದ್ದೇವೆ. B737 ಸಾಮಾನ್ಯವಾಗಿ ಪ್ರತಿ ಇಂಜಿನ್‌ ಗೆ ಪ್ರತಿ ನಿಮಿಷಕ್ಕೆ 20 ಲೀಟರ್ ಇಂಧನವನ್ನು ಬಳಕೆ ಮಾಡುತ್ತದೆ. ಅಂದರೆ, ಎರಡೂ ಎಂಜಿನ್‌ ಗಳ ಆಧಾರದಲ್ಲಿ ಹೇಳುವುದಾದರೆ ನಿಮಿಷಕ್ಕೆ 40 ಲೀಟರ್ ಇಂಧನ ಬೇಕು. ವೇಗವು ಸಾಮಾನ್ಯವಾಗಿ ಗಂಟೆಗೆ 900 ಕಿಮೀ ಇರುತ್ತದೆ. ಈ ರೀತಿ ಲೆಕ್ಕ ಹಾಕಿದರೆ ಗಂಟೆಗೆ 2400 ಲೀಟರ್ ಇಂಧನ ಖರ್ಚಾಗುತ್ತದೆ. ಒಂದು ಗಂಟೆಯಲ್ಲಿ ಕ್ರಮಿಸಿದ ದೂರ = 900 ಕಿ.ಮೀ. ಆದ್ದರಿಂದ ಪ್ರತಿ ಕಿ.ಮೀಗೆ 2.6 ಲೀಟರ್ ಇಂಧನವನ್ನು ವ್ಯಯಿಸಲಾಗುತ್ತದೆ.

ಇನ್ನೊಂದು ರೀತಿಯಲ್ಲಿ ವಿವರಿಸುವುದಾದರೆ, ಇದು 384 kmpl ಮೈಲೇಜ್ ಅನ್ನು ನೀಡುತ್ತದೆ. ಈ ರೀತಿಯ ವಿಮಾನವು 189 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿಮಾನವು ಇನ್ನೇನು ಹಾರುತ್ತದೆ ಎಂಬ ಸಂದರ್ಭದಲ್ಲಿಯೇ ಬಹಳಷ್ಟು ಇಂಧನವನ್ನು ಬಳಸುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ, ಲ್ಯಾಂಡಿಂಗ್ ಸಮಯದಲ್ಲಿ ಇಂಜಿನ್ ಗಳು ಕಡಿಮೆ ಇಂಧನವನ್ನು ಬಳಸುತ್ತವೆ.

ಇದನ್ನೂ ಓದಿ:  ವಿಮಾನ ಹಾರಾಟಕ್ಕೂ ಮುನ್ನ ಮೊಬೈಲ್’ನ್ನು ಏರೋಪ್ಲೇನ್ ಮೋಡ್’ಗೆ ಹಾಕೋದು ಏಕೆ ಗೊತ್ತಾ?

ವಿಮಾನಕ್ಕೆ ಬಳಕೆ ಮಾಡುವ ಇಂಧನವನ್ನು ಏರ್‌ಕ್ರಾಫ್ಟ್ ಟರ್ಬೈನ್ ಫ್ಯೂಲ್ (ATF) ಎಂದು ಕರೆಯಲಾಗುತ್ತದೆ. ವಿಮಾನಗಳ ಎಂಜಿನ್ ಮಾದರಿಯ ಆಧಾರದ ಮೇಲೆ, ಅವುಗಳಿಗೆ ಯಾವ ರೀತಿಯ ಇಂಧನವನ್ನು ಬಳಸಬೇಕು ಎಂದು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ, ವಿಮಾನಗಳಲ್ಲಿ ಎರಡು ರೀತಿಯ ಇಂಧನವನ್ನು ಬಳಸಲಾಗುತ್ತದೆ. ಈ ಇಂಧನಗಳು ಜೆಟ್ ಇಂಧನ ಮತ್ತು ಅವಿಗಾಸ್ ಎಂದು ಹೇಳಲಾಗುತ್ತದೆ. ಜೆಟ್ ಇಂಧನವನ್ನು ಜೆಟ್ ಎಂಜಿನ್‌’ಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಅವಿಗಾಸ್ ಅನ್ನು ಸಣ್ಣ ಟರ್ಬೊಪ್ರಾಪ್ ವಿಮಾನಗಳಲ್ಲಿ ಎಂಜಿನ್ ಪಿಸ್ಟನ್‌’ಗಳನ್ನು ಓಡಿಸಲು ಬಳಸಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News