ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ವಲಯ ಪರಿಷತ್ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಕನ್ನಡದಲ್ಲಿ ತಮ್ಮ ಟ್ವಿಟ್ಟರ್ ಖಾತೆ ಹೆಸರನ್ನು ಬದಲಿಸಿಕೊಳ್ಳುವ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Kiranji, I have deep respect for all Indian languages. Unfortunately I can’t speak most of them. So I’m trying to learn how to write my name in other Indian languages. https://t.co/oHBTY6shhU
— राजनाथ सिंह (@rajnathsingh) September 19, 2018
ಸಚಿವರ ಹೆಸರು ಕನ್ನಡದಲ್ಲಿ ಬದಲಾಗಿರುವ ಕುರಿತು ಟ್ವೀಟ್ ಮಾಡಿರುವ ಕಿರಣ್ ಕುಮಾರ್ ಎಸ್ ಎನ್ನುವವರು ಇದನ್ನು ರಾಜನಾಥ್ ಸಿಂಗ್ ರನ್ನು ಟ್ಯಾಗ್ ಮಾಡುವ ಮೂಲಕ ಗಮನಕ್ಕೆ ತಂದಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ " ಕಿರಣ್ ಜಿ ನನಗೆ ಭಾರತೀಯ ಎಲ್ಲ ಭಾಷೆಗಳ ಬಗ್ಗೆ ತುಂಬಾ ಗೌರವವಿದೆ. ದುರಾದೃಷ್ಟವಶಾತ್ ಅವುಗಳಲ್ಲಿ ಬಹುತೇಕ ಭಾಷೆಗಳನ್ನು ನನಗೆ ಮಾತನಾಡಲು ಬರುವುದಿಲ್ಲ.ಆದ್ದರಿಂದ ನಾನು ಈಗ ಇತರ ಭಾರತೀಯ ಭಾಷೆಗಳಲ್ಲಿ ನನ್ನ ಹೆಸರನ್ನು ಹೇಗೆ ಬರೆಯಬಹುದೆನ್ನುವುದನ್ನು ಕಲಿಯುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.