SARS CoV 2 ನ ಡೆಲ್ಟಾ ರೂಪಾಂತರದ ಹಿನ್ನಲೆಯಲ್ಲಿ ಭಾರತದಲ್ಲಿ ಹೈಅಲರ್ಟ್

ಯುಕೆ ಮತ್ತು ಯುಎಸ್‌ಎಯಲ್ಲಿ SARS CoV 2 ನ ಡೆಲ್ಟಾ ರೂಪಾಂತರದ ಉಪವರ್ಗವನ್ನು ಪತ್ತೆಹಚ್ಚಿದ ನಂತರ ಭಾರತದಲ್ಲಿ ಈಗ ತೀವ್ರ ಎಚ್ಚರಿಕೆ ವಹಿಸಲಾಗುತ್ತಿದೆ.

Last Updated : Oct 24, 2021, 07:44 PM IST
  • ಯುಕೆ ಮತ್ತು ಯುಎಸ್‌ಎಯಲ್ಲಿ SARS CoV 2 ನ ಡೆಲ್ಟಾ ರೂಪಾಂತರದ ಉಪವರ್ಗವನ್ನು ಪತ್ತೆಹಚ್ಚಿದ ನಂತರ ಭಾರತದಲ್ಲಿ ಈಗ ತೀವ್ರ ಎಚ್ಚರಿಕೆ ವಹಿಸಲಾಗುತ್ತಿದೆ.
  • ಈಗಾಗಲೇ AY. 4.2, ಎಂದು ಕರೆಯಲಾಗುವ ಹೊಸ ರೂಪಾಂತರವನ್ನು ಯುಕೆಯಲ್ಲಿ ಎಚ್ಚರಿಕೆ ವಹಿಸಬೇಕಾಗಿರುವ ರೂಪಾಂತರ ಎಂದು ಘೋಷಿಸಲಾಗಿದೆ.
SARS CoV 2 ನ ಡೆಲ್ಟಾ ರೂಪಾಂತರದ ಹಿನ್ನಲೆಯಲ್ಲಿ ಭಾರತದಲ್ಲಿ ಹೈಅಲರ್ಟ್  title=
ಸಾಂದರ್ಭಿಕ ಚಿತ್ರ

ನವದೆಹಲಿ: ಯುಕೆ ಮತ್ತು ಯುಎಸ್‌ಎಯಲ್ಲಿ SARS CoV 2 ನ ಡೆಲ್ಟಾ ರೂಪಾಂತರದ ಉಪವರ್ಗವನ್ನು ಪತ್ತೆಹಚ್ಚಿದ ನಂತರ ಭಾರತದಲ್ಲಿ ಈಗ ತೀವ್ರ ಎಚ್ಚರಿಕೆ ವಹಿಸಲಾಗುತ್ತಿದೆ.

ಈಗಾಗಲೇ AY. 4.2, ಎಂದು ಕರೆಯಲಾಗುವ ಹೊಸ ರೂಪಾಂತರವನ್ನು ಯುಕೆಯಲ್ಲಿ ಎಚ್ಚರಿಕೆ ವಹಿಸಬೇಕಾಗಿರುವ ರೂಪಾಂತರ ಎಂದು ಘೋಷಿಸಲಾಗಿದೆ.ಇಲ್ಲಿಯವರೆಗೆ, INSACOG ಯೋಜನೆಯಡಿ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್‌ಗೆ ಒಳಗಾದ SARS CoV 2 ಸೋಂಕಿತ ರೋಗಿಗಳ 68,000 ಮಾದರಿಗಳಲ್ಲಿ ಇದುವರೆಗೂ ಈ ರೂಪಾಂತರ ಭಾರತದಲ್ಲಿ ಪತ್ತೆಯಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಸುಭಾಶ್ರೀ ಸಾವು: ಸರ್ಕಾರದ ಮೇಲೆ ನಂಬಿಕೆ ಕಳೆದುಹೋಗಿದೆ- ಮದ್ರಾಸ್ ಹೈಕೋರ್ಟ್

'ಆದಾಗ್ಯೂ, ನಾವು ಕಣ್ಗಾವಲು ಹೆಚ್ಚಿಸುತ್ತೇವೆ ಮತ್ತು ಮುಂಬರುವ ದಿನಗಳಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರಿಂದ ಹೆಚ್ಚಿನ ಮಾದರಿಗಳನ್ನು ಪರೀಕ್ಷಿಸಲಾಗುವುದು-ಇದರಿಂದಾಗಿ AY 4. 2 ರಿಂದ ಉಂಟಾಗುವ ಸಂಭವನೀಯ ಸೋಂಕುಗಳನ್ನು ಮತ್ತು ಸೋಂಕಿತರನ್ನು ತ್ವರಿತವಾಗಿ ಗುರುತಿಸಲಾಗುತ್ತದೆ"ಎಂದು INSACOG ಮುನ್ನಡೆಸುತ್ತಿರುವ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ

ಕಳೆದ ವಾರ, ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಹೊಸ ಡೆಲ್ಟಾದ ಉಪವರ್ಗ ದೇಶದಲ್ಲಿ ಹರಡುತ್ತಿದೆ ಎಂದು ಘೋಷಿಸಿತ್ತು. ಜಾಗತಿಕವಾಗಿ ಅಮೇರಿಕಾದ ನಂತರ ಯುಕೆ ಈಗ ಅತಿ ಹೆಚ್ಚು ದೈನಂದಿನ Covid19 ಪ್ರಕರಣಗಳನ್ನು ವರದಿ ಮಾಡಿದೆ.ಹೊಸದಾಗಿ ಪತ್ತೆಯಾದ ರೂಪಾಂತರವು ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗುವ ವಾರದಲ್ಲಿ SARS CoV2 ನ ಎಲ್ಲಾ ಆನುವಂಶಿಕ ಅನುಕ್ರಮಗಳಲ್ಲಿ ಶೇ 6 ರಷ್ಟನ್ನು ಹೊಂದಿದೆ ಎಂದು ಅದು ಹೇಳಿದೆ.

ಈಗ ಈ ರೂಪಾಂತರವು ಹೆಚ್ಚುತ್ತಿರುವ ಪಥದಲ್ಲಿದೆ ಮೂಲ ಡೆಲ್ಟಾ ರೂಪಾಂತರಕ್ಕಿಂತ ಸುಮಾರು ಶೇ 10 ರಷ್ಟು ಹೆಚ್ಚು ಹರಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ-T20 World Cup, Ind vs Pak: ಪಾಕ್ ವಿರುದ್ಧ ಜೈತ್ರಯಾತ್ರೆ ಮುಂದುವರೆಸುವುದೇ ಭಾರತ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News