ಮುಂಬೈನಲ್ಲಿ ಭಾರೀ ಮಳೆ: ವಿಮಾನ ಹಾರಾಟದಲ್ಲಿ ವ್ಯತ್ಯಯ

ಮುಂಬೈಗೆ ತೆರಳುತ್ತಿರುವ ಅಥವಾ ಮುಂಬೈನಿಂದ ಬೇರೆಡೆಗೆ ಹೊರಡುತ್ತಿರುವ ಪ್ರಯಾಣಿಕರಿಗೆ ವಿಮಾನಗಳ ಆಗಮನ ಮತ್ತು ನಿರ್ಗಮನ ಸಮಯವನ್ನು ಪರಿಶೀಲಿಸುವಂತೆ ಸೂಚಿಸಲಾಗುತ್ತಿದೆ.

Last Updated : Jul 8, 2019, 01:35 PM IST
ಮುಂಬೈನಲ್ಲಿ ಭಾರೀ ಮಳೆ: ವಿಮಾನ ಹಾರಾಟದಲ್ಲಿ ವ್ಯತ್ಯಯ title=

ಮುಂಬೈ: ಸೋಮವಾರ ಮುಂಜಾನೆಯಿಂದ ಮುಂಬೈಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ.

ಭಾನುವಾರ ರಾತ್ರಿ ನಿಲ್ದಾಣದಲ್ಲಿ ವಿಮಾನ ಹಾರಾಟ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತಾದರೂ, ನಿರಂತರ ಮಳೆಯಿಂದಾಗಿ ಸೋಮವಾರ ಬೆಳಿಗ್ಗೆ ಕೂಡಾ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಯಾವುದೇ ವಿಮಾನಗಳು ರದ್ದಾಗಿರಲಿಲ್ಲ. ಆದರೆ ಮುಂಬೈಗೆ ಆಗಮಿಸುವ ಮತ್ತು ಮುಂಬೈನಿಂದ ಬೇರೆಡೆ ತೆರಳುವ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಲಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಬೆಳಿಗ್ಗೆ 9.30 ರಿಂದ ಗೋಚರತೆ ಸ್ಪಷ್ಟವಾಗಿಲ್ಲದ ಕಾರಣ ವಿಮಾನಗಳ ಹಾರಾಟ ವಿಳಂಬವಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಎರಡು ವಿಮಾನಗಳನ್ನು ಮುಂಬೈಯಿಂದ ಬೇರೆಡೆಗೆ ತಿರುಗಿಸುವ ನಿರೀಕ್ಷೆಯಿದೆ. ಒಂದನ್ನು ಹೈದರಾಬಾದ್‌ಗೆ (ಬಿಎ 135) ಮತ್ತು ಇನ್ನೊಂದು ವಿಮಾನವನ್ನು ಅಹಮದಾಬಾದ್‌ಗೆ (ಎಸ್‌ಜಿ 8701) ತಿರುಗಿಸುವ ಸಾಧ್ಯತೆ ಇದೇ ಎನ್ನಲಾಗಿದೆ.

ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಂಗಳವಾರ ಮತ್ತು ಬುಧವಾರದಂದು ಮಳೆ ತೀವ್ರಗೊಳ್ಳಬಹುದು ಎಂದು ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ. 

Trending News