Health Ministry Advisory: ಈ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ರಕ್ತಹೆಪ್ಪುಗಟ್ಟುವಿಕೆ ಕಾಣಿಸಿಕೊಂಡಿದೆ, ಆರೋಗ್ಯ ಸಚಿವಾಲಯದಿಂದ ಅಡ್ವೈಸರಿ ಜಾರಿ

Health Ministry Advisory - ಕೇಂದ್ರ ಆರೋಗ್ಯ ಸಚಿವಾಲಯ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ಜನರಿಗೆ ಸಲಹೆಗಳನ್ನು ಜಾರಿಗೊಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಸಚಿವಾಲಯ ಒಂದು ವೇಳೆ ಲಸಿಕೆ ಹಾಕಿಸಿಕೊಂಡ 20 ದಿನಗಳವರೆಗೆ  AEFI (Adverse Events Following Immunization)ದೂರು ಬಂದರೆ, ಲಸಿಕೆ ಹಾಕಿಸಿಕೊಂಡ ಕೇಂದ್ರಕ್ಕೆ ಸಂಪರ್ಕಿಸಲು ಸಲಹೆ ನೀಡಿದೆ.

Written by - Nitin Tabib | Last Updated : May 17, 2021, 05:57 PM IST
  • ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ರಕ್ತಹೆಪ್ಪುಗಟ್ಟುವಿಕೆಯ ಪ್ರಕರಣಗಳು ವರದಿಯಾಗಿವೆ.
  • ಭಾರತದಲ್ಲಿ ಒಟ್ಟು 26 ಪ್ರಕರಣಗಳು ವರದಿಯಾಗಿವೆ.
  • ಭಾರತದ AEFI ಸಮಿತಿಯ ವರದಿಯಲ್ಲಿ ಈ ಅಂಶ ಬಹಿರಂಗ.
Health Ministry Advisory: ಈ ವ್ಯಾಕ್ಸಿನ್ ಹಾಕಿಸಿಕೊಂಡವರಲ್ಲಿ ರಕ್ತಹೆಪ್ಪುಗಟ್ಟುವಿಕೆ ಕಾಣಿಸಿಕೊಂಡಿದೆ, ಆರೋಗ್ಯ ಸಚಿವಾಲಯದಿಂದ ಅಡ್ವೈಸರಿ ಜಾರಿ title=
Health Ministry Advisory (File Photo)

ನವದೆಹಲಿ:  Health Ministry Advisory - ಭಾರತದಲ್ಲಿ ಕೊರೊನಾ ವ್ಯಾಕ್ಸಿನೆಶನ್ (Corona Vaccine) ನ ಆರಂಭದಿಂದ ಇದುವರೆಗೆ ಸುಮಾರು 23 ಸಾವಿರಕ್ಕೂ ಅಧಿಕ ಅಡ್ವರ್ಸ್ ಇವೆಂಟ್ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳು ದೇಶದ ಸುಮಾರು 684 ಜಿಲ್ಲೆಗಳಿಂದ ವರದಿಯಾಗಿವೆ. ಇವುಗಳಲ್ಲಿ 700 ಪ್ರಕರಣಗಳು ಗಂಭೀರ ಹಾಗೂ ಅತಿ ಗಂಭೀರ ಪ್ರಕರಣಗಳಾಗಿವೆ. ಇವುಗಳಲ್ಲಿನ ಒಟ್ಟು 498 ಸಿರಿಯಸ್ ಹಾಗೂ ಸಿವಿಯರ್ ಪ್ರಕರಣಗಳ ತನಿಖೆಯನ್ನು AEFI ಸಮೀತಿ ನಡೆಸಿದ್ದು, ಇವುಗಳಲ್ಲಿ 26 ರಕ್ತಹೆಪ್ಪುಗಟ್ಟುವಿಕೆ ಪ್ರಕರಣಗಳಾಗಿವೆ. ಈ ಪ್ರಕರಣಗಳು 10 ಲಕ್ಷಕ್ಕೆ ಶೇ.0.61 ರಷ್ಟು ಇವೆ ಎಂದಿದೆ.

ಎಲ್ಲಾ ಪ್ರಕರಣಗಳು ಕೋವಿಶೀಲ್ಡ್ ಗೆ ಸಂಬಂಧಿಸಿವೆ
ಬ್ಲಡ್ ಕ್ಲಾಟಿಂಗ್ ನ ಎಲ್ಲ ಪ್ರಕರಣಗಳು ಕೋವಿಶಿಲ್ದ್ ವ್ಯಾಕ್ಸಿನ್ ಪ್ರಕರಣಗಳಾಗಿವೆ. ಕೊವ್ಯಾಕ್ಸಿನ್ ಗೆ ಸಂಬಂಧಿಸಿದಂತೆ AEFI ಸಮೀತಿಗೆ ಒಂದೂ  ಬ್ಲಡ್ ಕ್ಲಾಟಿಂಗ್ ದೂರು ಬಂದಿಲ್ಲ. UK ನಲ್ಲಿ ಪ್ರತಿ ಮಿಲಿಯನ್ ಗೆ 4 ಹಾಗೂ ಜರ್ಮನಿಯಲ್ಲಿ ಪ್ರತಿ ಮಿಲಿಯನ್ ಗೆ 10 ರೋಗಿಗಳು ಈ ಕುರಿತು ದೂರಿದ್ದಾರೆ. ಈ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯ ಅಡ್ವೈಸರಿ ಜಾರಿಗೊಳಿಸಿದೆ.

ಇದನ್ನೂ ಓದಿ-Black Fungus : ಬ್ಲ್ಯಾಕ್ ಫಂಗಸ್ ಬಗ್ಗೆ 'ಶಾಕಿಂಗ್' ಹೇಳಿಕೆ ನೀಡಿದ ಸಚಿವ ಸುಧಾಕರ್..!

ಕೇಂದ್ರ ಆರೋಗ್ಯ ಸಚಿವಾಲಯದ ಅಡ್ವೈಸರಿ
ಕೇಂದ್ರ ಆರೋಗ್ಯ ಸಚಿವಾಲಯ ಆರೋಗ್ಯ ಸೇವೆಯಲ್ಲಿ ತೊಡಗಿದವರು ಅದರಲ್ಲೂ ವಿಶೇಷವಾಗಿ ಕೋವಿಶೀಲ್ಡ್ (Covishield) ಲಸಿಕೆ ಪಡೆದ ಜನರಿಗೆ ಅಡ್ವೈಸರಿ ಜಾರಿಗೊಳಿಸಿದೆ.  ಲಸಿಕೆ ಹಾಕಿಸಿಕೊಂಡ 20 ದಿನಗಳವರೆಗೆ AEFI ದೂರು ಬರುವ ಸಾಧ್ಯತೆ ಇದೆ ಹಾಗೂ ದೂರು ಬಂದರೆ ಲಸಿಕೆ ಪಡೆದ ಕೇಂದ್ರವನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದೆ. ಬ್ಲಡ್ ಕ್ಲಾಟಿಂಗ್ (Blood Clotting) ಹೊರತುಪಡಿಸಿ ಇತರೆ ದೂರುಗಳು (Bleeding) ಕೂಡ ಬರುವ ಸಾಧ್ಯತೆ ಇದ್ದು, ಇದರಲ್ಲಿ ಎದೆನೋವು, ಉಸಿರಾಟದ ತೊಂದರೆ, ಹೊಟ್ಟೆನೋವು, ಆಯಾಸ, ದೃಷ್ಟಿದೋಷ ಇತ್ಯಾದಿಗಳು ಶಾಮೀಲಾಗಿವೆ.  ಇಲ್ಲಿ ವಿಶೇಷ ಎಂದರೆ AEFIಗೆ ಕೊವ್ಯಾಕ್ಸಿನ್ ಕುರಿತು ಒಂದೂ ಬ್ಲಡ್ ಕ್ಲಾಟಿಂಗ್ ದೂರು ಬಂದಿಲ್ಲ. 

ಇದನ್ನೂ ಓದಿ-ಖಾಸಗಿ ಆಸ್ಪತ್ರೆಗಳಲ್ಲಿ Sputnik-V ಲಸಿಕೆ ಲಭ್ಯ, CoWIN ಪೋರ್ಟಲ್ ನಲ್ಲಿ ಬುಕ್ ಮಾಡುವುದು ಹೇಗೆ ತಿಳಿಯಿರಿ

ಇತರ ದೇಶಗಳಿಗೆ ಹೋಲಿಸಿದರೆ ಪ್ರಕರಣಗಳು ತುಂಬಾ ಕಡಿಮೆಯಾಗಿವೆ
ಭಾರತದಲ್ಲಿ AEFI ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಬ್ಲಡ್ ಕ್ಲಾಟಿಂಗ್ ಪ್ರಕರಣಗಳು ಶೇ.0.61 ಪ್ರತಿ ಮಿಲಿಯನ್ ಇವೆ. ಇದು ಬ್ರಿಟನ್ ನ 4 ಪ್ರಕರಣಗಳು/ಮಿಲಿಯನ್ ಹಾಗೂ ಜರ್ಮನಿಯ 10 ಪ್ರಕರಣಗಳು/ಪ್ರತಿ ಮಿಲಿಯನ್ ಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿವೆ ಎನ್ನಬಹುದು. ಏಪ್ರಿಲ್ 27, 2021 ರವರೆಗೆ ಭಾರತದಲ್ಲಿ ಕೋವಿಶೀಲ್ಡ್ ವ್ಯಾಕ್ಸಿನ್ ನ 13.4 ಕೋಟಿಗೂ ಅಧಿಕ ಪ್ರಮಾಣಗಳನ್ನು ನೀಡಲಾಗಿದೆ. MoHFW ಎಲ್ಲ COVID-19 ಲಸಿಕೆಗಳ ಸುರಕ್ಷತೆಯ ಮೇಲೆ ನಿಗಾವಹಿಸಿದೆ ಹಾಗೂ ಶಂಕಿತ ಪ್ರತಿಕೂಲ ಘಟನೆಗಳನ್ನು ವರದಿ ಮಾಡುತ್ತಿದೆ.

ಇದನ್ನೂ ಓದಿ-ಕೋವಿಡ್ ಲಸಿಕೆ ಪಡೆಯಲು ಹಿರಿಯ ನಾಗರೀಕರಿಗೆ ಬೇಕಿಲ್ಲ 'ಆಧಾರ್ ಕಾರ್ಡ್'..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News