Covid 19 Third Wave: ಕರೋನಾ ಮೂರನೇ ತರಂಗವನ್ನು ತಡೆಯುವುದು ಅಸಾಧ್ಯ- ಚಿಂತೆ ಹೆಚ್ಚಿಸಿದ ತಜ್ಞರ ಹೇಳಿಕೆ

Omicron Variant: ಕರೋನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಬಗ್ಗೆ ಪ್ರಪಂಚದಾದ್ಯಂತ ಆತಂಕದ ಮೋಡ ಕವಿದಿದೆ. ಈ ಮಧ್ಯೆ ಲಸಿಕೆಯ ಬೂಸ್ಟರ್ ಡೋಸ್ ಬಗ್ಗೆಯೂ ಭಾರೀ ಚರ್ಚೆ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಉನ್ನತ ಆರೋಗ್ಯ ತಜ್ಞರು ಆಘಾತಕಾರಿ ಹೇಳಿಕೆ ನೀಡಿದ್ದಾರೆ.

Written by - Yashaswini V | Last Updated : Dec 16, 2021, 07:06 AM IST
  • ಪ್ರಪಂಚದಾದ್ಯಂತ ಆತಂಕ ಸೃಷ್ಟಿಸಿರುವ ಓಮಿಕ್ರಾನ್
  • ದೇಶದಲ್ಲಿ ಪ್ರತಿದಿನ ಹೆಚ್ಚಾಗುತ್ತಿರುವ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ
  • ಕರೋನದ ಮೂರನೇ ತರಂಗದ ಆತಂಕ
Covid 19 Third Wave: ಕರೋನಾ ಮೂರನೇ ತರಂಗವನ್ನು ತಡೆಯುವುದು ಅಸಾಧ್ಯ- ಚಿಂತೆ ಹೆಚ್ಚಿಸಿದ ತಜ್ಞರ ಹೇಳಿಕೆ title=
Impossible to stop the third wave of corona - health expert has given a shocking statement

Omicron Variant: ದಕ್ಷಿಣ ಆಫ್ರಿಕಾ (South Africa) ದಿಂದ ಇದೀಗ ಇಡೀ ವಿಶ್ವದಲ್ಲೇ ಆತಂಕ ಹೆಚ್ಚಿಸಿರುವ ಕೋವಿಡ್-19 (Covid-19) ಹೊಸ ರೂಪಾಂತರ ಓಮಿಕ್ರಾನ್  (Omicron) ಭಾರತದಲ್ಲಿ ಬೆಳೆಯುತ್ತಿರುವ ಕರೋನಾ ಮೂರನೇ ತರಂಗದ ಆತಂಕವನ್ನು ಹೆಚ್ಚಿಸಿದೆ. ಜೀನೋಮ್ ಸೀಕ್ವೆನ್ಸಿಂಗ್ ವೇಗವನ್ನು ಹೆಚ್ಚಿಸಿದ ನಂತರ, ಒಮಿಕ್ರಾನ್ ರೂಪಾಂತರಗಳ ಹೊಸ ಪ್ರಕರಣಗಳು ದೇಶದಲ್ಲಿ ಪ್ರತಿದಿನ ವರದಿಯಾಗುತ್ತಿವೆ. ಈ ನಡುವೆ ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್ಸ್ ಟಿಟ್ಯೂಟ್ ಅಧ್ಯಕ್ಷ, ಉನ್ನತ ಆರೋಗ್ಯ ತಜ್ಞ ಡಾ.ಅಶೋಕ್ ಸೇಠ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಕರೋನಾ ಸಾಂಕ್ರಾಮಿಕದ ಮೂರನೇ ತರಂಗ (Covid-19 Third Wave) ವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ  ಎಂದು ಅವರು ಹೇಳಿದ್ದಾರೆ.  

ಕೊರೊನಾ ಮೂರನೇ ಅಲೆ (Corona Third Wave) ಬರುವುದು ಖಚಿತ ಎಂದು ಸ್ಪಷ್ಟಪಡಿಸಿರುವ ಅವರು ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಹೆಚ್ಚುತ್ತಿರುವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಸಂಬಂಧಪಟ್ಟ ಇಲಾಖೆಗಳು ಜನರಿಗೆ ಕೋವಿಡ್ ವಿರುದ್ಧ ಲಸಿಕೆಯ ಬೂಸ್ಟರ್ ಡೋಸ್ ಅನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಈ ಸಂಚಿಕೆಯಲ್ಲಿ ವಿಶೇಷವಾಗಿ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಬೂಸ್ಟರ್ ಡೋಸ್ ನೀಡುವ ಮೂಲಕ ರಕ್ಷಣೆ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕೊರೊನಾ ಮೂರನೇ ಅಲೆ ಬರುತ್ತಿದೆ:
ಕೊರೊನಾ ಮೂರನೇ ಅಲೆ  (Corona Third Wave) ಬರಲಿದ್ದು, ಇದಕ್ಕಾಗಿ ಲಸಿಕೆ ಬೂಸ್ಟರ್ ಡೋಸ್ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸುವ ಅಗತ್ಯವಿದೆ ಎಂದು ಡಾ.ಅಶೋಕ್ ಸೇಠ್ ಹೇಳಿದರು. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಬೂಸ್ಟರ್ ಡೋಸ್ ಬಹಳ ಮುಖ್ಯವಾಗಿದೆ. ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಅದಕ್ಕೆ ಸದಾ ಸಿದ್ಧರಾಗಿರಿ ಎಂದವರು ತಿಳಿಸಿದರು.

ಇದನ್ನೂ ಓದಿ-  ಒಮಿಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದೆ, ಮಾಸ್ಕ್-ಸಾಮಾಜಿಕ ಅಂತರ ಅತ್ಯಗತ್ಯ: ಆರೋಗ್ಯ ಸಚಿವ ಸುಧಾಕರ್

ಪ್ರಪಂಚದಾದ್ಯಂತ ಆತಂಕ ಸೃಷ್ಟಿಸಿರುವ ಓಮಿಕ್ರಾನ್ :
ಪ್ರಪಂಚದಾದ್ಯಂತ ವರದಿಯಾಗುತ್ತಿರುವ ಓಮಿಕ್ರಾನ್ ರೂಪಾಂತರದ (Omicron Variant) ಸುದ್ದಿಯನ್ನು ಗಮನದಲ್ಲಿಟ್ಟುಕೊಂಡು, ಕರೋನಾದ ಈ ರೂಪಾಂತರವು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲ, ಇದು ನಮ್ಮ ಲಸಿಕೆ ನಿರೋಧಕ ಶಕ್ತಿಯಿಂದಲೂ ಪಾರಾಗುತ್ತದೆ. ಇದರರ್ಥ ಇದು ಲಸಿಕೆ ವಿರುದ್ಧ ಹೋರಾಡಬಹುದು ಮತ್ತು ಅದರ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಆಸ್ಪತ್ರೆಗಳಲ್ಲಿ ರೋಗಿಗಳು ಹೆಚ್ಚಾಗಬಹುದು:
ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿ, ರೋಗವು ಎಷ್ಟು ಮಾರಣಾಂತಿಕವಾಗಿದೆ ಎಂದು ಸಾಬೀತುಪಡಿಸಬಹುದು ಎಂದು ಡಾ ಸೇಠ್ ಹೇಳಿದರು. ಭಾರತ ಬಹಳ ದೊಡ್ಡ ದೇಶ. ಇಲ್ಲಿನ ಜನಸಂಖ್ಯೆಯ ಒಂದು ಸಣ್ಣ ಭಾಗವೂ ಸೋಂಕಿನಿಂದ ಹೆಚ್ಚು ಪ್ರಭಾವಿತವಾಗಿದ್ದರೆ, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಬಹುದು ಎಂದವರು ತಿಳಿಸಿದ್ದಾರೆ.

ತುರ್ತುಸ್ಥಿತಿಯ ಕಡಿಮೆ ಭಯ:
ಇಂಗ್ಲೆಂಡ್‌ನ ಉದಾಹರಣೆಯನ್ನು ನೀಡಿದ ಡಾ.ಸೇಠ್, ಅಲ್ಲಿ ಲಸಿಕೆ  (Corona Vaccine) ಪಡೆಯದ ಜನರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಮಾತ್ರ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ರೂಪಾಂತರವು ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುವುದಿಲ್ಲ, ಇದು ಆಮ್ಲಜನಕದ ಅಗತ್ಯವನ್ನು ಹೆಚ್ಚಿಸಬಹುದು ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-  Omicron threat: ಮುಂದಿನ ದಿನಗಳಲ್ಲಿ ನಮ್ಮ ಲಸಿಕೆಗಳು ನಿಷ್ಪರಿಣಾಮಕಾರಿಯಾಗಬಹುದು: ವಿ.ಕೆ.ಪೌಲ್

ದಕ್ಷಿಣ ಆಫ್ರಿಕಾದಲ್ಲಿ ವೇಗವಾಗಿ ಹೆಚ್ಚುತ್ತಿರುವ ಪ್ರಕರಣಗಳು:
ದಕ್ಷಿಣ ಆಫ್ರಿಕಾದ (South Africa) ಉದಾಹರಣೆಯನ್ನು ನೀಡುತ್ತಾ, ಕರೋನದ ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗುವವರ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳ ಕಂಡುಬಂದಿದೆ. ಆದರೆ ಸೋಂಕಿಗೆ ಹೋಲಿಸಿದರೆ ಸಾವಿನ ಸಂಖ್ಯೆ ತೀರಾ ಕಡಿಮೆ ಎಂಬುದು ಸಮಾಧಾನದ ಸಂಗತಿ. ದಕ್ಷಿಣ ಆಫ್ರಿಕಾದ ಪರಿಸ್ಥಿತಿಯು ಪ್ರಪಂಚದಾದ್ಯಂತ ಒಂದೇ ಆಗಿರುತ್ತದೆ ಎಂದು ಅವರು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News