ನವದೆಹಲಿ: ಗುರುವಾರ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ BJP, ರಾಹುಲ್ ಗಾಂಧಿ ಅವರಿಂದ ವಿನಯಪೂರ್ವಕ ಹಾಗೂ ಒಳ್ಳೆ ಹೇಳಿಕೆಗಳನ್ನು ಅಪೇಕ್ಷಿಸುವುದು ತಪ್ಪು ಎಂದು ಹೇಳಿದೆ. ರಾಹುಲ್ ಗಾಂಧಿ ಅವರು ಇಂದು ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ BJP ವಕ್ತಾರ ಸಂಬಿತ್ ಪಾತ್ರಾ, "ಹೇಳಿಕೆಗಳನ್ನು ನೀಡಲು ರಾಹುಲ್ ಬಳಸುವ ಭಾಷೆ ಖಂಡನೆಗೆ ಅರ್ಹವಾಗಿದೆ" ಎಂದಿದ್ದಾರೆ. ಇಂದು ಟ್ವೀಟ್ ವೊಂದನ್ನು ಮಾಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ 'RSSನ ಓರ್ವ ಪ್ರಧಾನ ಮಂತ್ರಿ ಭಾರತ ಮಾತೆಗೆ ಸುಳ್ಳು ಹೇಳುತ್ತಾನೆ" ಎಂದಿದ್ದರು.
'ರಫೇಲ್ ಒಪ್ಪಂದದ ಕುರಿತು ಸುಳ್ಳು ಹಬ್ಬಿಸಿದ್ದ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆಯಾಚಿಸಿದ್ದರು. ಇಂದು RSSನ ಪ್ರಧಾನ ಮಂತ್ರಿ ಭಾರತ ಮಾತೆಗೆ ಸುಳ್ಳು ಹೇಳುತ್ತಾನೆ ಎಂಬ ಹೇಳಿಕೆಗಳನ್ನು ನೀಡಿ ಪ್ರಧಾನಿಗಳ ಬಗ್ಗೆ ಜನರಲ್ಲಿ ಭ್ರಮೆ ಹುಟ್ಟುಹಾಕುತ್ತಿದ್ದಾರೆ" ಎಂದು ಪಾತ್ರಾ ವಾಗ್ದಾಳಿ ನಡೆಸಿದ್ದಾರೆ .
"ಇಂತಹ ಯಾವುದೇ ಡಿಟೆನ್ಶನ್ ಕ್ಯಾಂಪ್ ಇಲ್ಲ ಅದರಲ್ಲಿ NRC ಜಾರಿಗೊಂಡ ಬಳಿಕ ಹಿಂದುಸ್ತಾನದ ಮುಸ್ಲಿಮರನ್ನು ಇಡಲಾಗುವುದು ಎಂದು ಪ್ರಧಾನಿಗಳು ಹೇಳಿಕೆ ನೀಡಿದ್ದರು. ಇದರಲ್ಲಿ ಪ್ರಧಾನಿ ಹೇಳಿರುವ ಸುಳ್ಳು ಏನು?" ಎಂದು BJP ವಕ್ತಾರ ರಾಹುಲ್ ಅವರನ್ನು ಪ್ರಶ್ನಿಸಿದ್ದಾರೆ.
"ರಾಹುಲ್ ಗಾಂಧಿಗೆ ತಿಳಿಯಬೇಕಾದುದು ಏನೂ ಇಲ್ಲ. ಆದರೂ ಎಲ್ಲ ವಿಷಯಗಳ ಬಗ್ಗೆ ಅವರು ಹೇಳಿಕೆ ನೀಡುತ್ತಾರೆ. ಯಾವುದೇ ವಿಷಯದಲ್ಲಿ ರಾಹುಲ್ ಗಾಂಧಿ ಅವರಿಗೆ ಜ್ಞಾನ ಇಲ್ಲ. ಆದರೂ ಅವರಿಗೆ ಎಲ್ಲ ವಿಷಯಗಳ ಮೇಲೆ ಪ್ರತಿಕ್ರಿಯೆ ನೀಡಬೇಕು ಅನ್ನಿಸುತ್ತದೆ" ಎಂದು ಪಾತ್ರಾ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಡಿಟೆನ್ಶನ್ ಸೆಂಟರ್ ಗಳನ್ನು ತೆರೆಯಲಾಗಿತ್ತು
13 ಡಿಸೆಂಬರ್ 2011 ರಲ್ಲಿ ಅಂದಿನ ಕೇಂದ್ರ ಸರ್ಕಾರ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿ, ಅಸ್ಸಾಂ ನಲ್ಲಿ 3 ಡಿಟೆನ್ಶನ್ ಕ್ಯಾಂಪ್ ಗಳನ್ನು ತೆರೆಯಲಾಗಿದೆ ಎಂಬ ಮಾಹಿತಿ ನೀಡಿತ್ತು. 2011ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿತ್ತು.
"20 ಅಕ್ಟೋಬರ್ 2012ರಲ್ಲಿ ಅಂದಿನ ಅಸ್ಸಾಂನ ಕಾಂಗ್ರೆಸ್ ಸರ್ಕಾರ ಶ್ವೇತಪತ್ರ ಜಾರಿಗೊಳಿಸಿದ್ದು, ಅದರ, 38ನೇ ಪುಟದಲ್ಲಿ ಅಸ್ಸಾಂ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿದ್ದ ಕೇಂದ್ರ ಸರ್ಕಾರ ಡಿಟೆನ್ಶನ್ ಸೆಂಟರ್ ಗಳನ್ನು ತೆರೆಯುವಂತೆ ಸೂಚನೆ ನೀಡಿದೆ ಎಂದು ಬರೆಯಲಾಗಿದೆ ಎಂದು ಪಾತ್ರಾ ಮಾಹಿತಿ ನೀಡಿದ್ದಾರೆ.
"ಗುವಾಹಾಟಿ ಹೈಕೋರ್ಟ್ ನಲ್ಲಿ ನಡೆಸಲಾದ ಒಂದು ಪ್ರಕರಣದ ವಿಚಾರಣೆಯ ವೇಳೆ ಕೋರ್ಟ್ 2009ರಲ್ಲಿ ಅಂದಿನ ಗೃಹ ಸಚಿವಾಲಯ ಪತ್ರವೊಂದನ್ನು ಬಿಡುಗಡೆಗೊಳಿಸಿ ಡಿಟೆನ್ಶನ್ ಸೆಂಟರ್ ಗಳಿದ್ದು, ಅವುಗಳಲ್ಲಿ ಜನರನ್ನು ಇಡುವ ನಿಯಮವಿದೆ ಎಂಬುದನ್ನು ಒಪ್ಪಿಕೊಂಡಿತ್ತು. ಅಷ್ಟೇ ಅಲ್ಲ ಇದೆಲ್ಲ ಅಂದಿನ ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಮಾಡಲಾಗಿದೆ ಎಂಬುದನ್ನು ನ್ಯಾಯಪೀಠ ಸ್ಪಷ್ಟಪಡಿಸಿತ್ತು" ಎಂದು ಪಾತ್ರಾ ಹೇಳಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
ಗುರುವಾರ ಒಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ "RSS ಪ್ರಧಾನಿಯೊಬ್ಬ ಭಾರತ ಮಾತೆಗೆ ಸುಳ್ಳು ಹೇಳುತ್ತಾನೆ" ಎಂದಿದ್ದರು. ಈ ಟ್ವೀಟ್ ಜೊತೆಗೆ ವಿಡಿಯೋವೊಂದನ್ನೂ ಕೂಡ ಶೇರ್ ಮಾಡಿದ್ದ ರಾಹುಲ್, ವಿಡಿಯೋದಲ್ಲಿ ಡಿಟೆನ್ಶನ್ ಗೆ ಸಂಬಂಧಿಸಿದ ಸುದ್ದಿ ಶೇರ್ ಮಾಡಿದ್ದರು.