ಕೇಂದ್ರ ಸರ್ಕಾರದ ಟೆನ್ಷನ್ ಹೆಚ್ಚಿಸಿದ H3N2; ಈ ಜನರು ಹೆಚ್ಚು ಅಪಾಯದಲ್ಲಿದ್ದಾರೆ!

H3N2 ವೈರಸ್ ಲಕ್ಷಣಗಳು: ಹೆಚ್ಚುತ್ತಿರುವ H3N2 ಪ್ರಕರಣಗಳು ಕೇಂದ್ರ ಸರ್ಕಾರದ ತಲೆನೋವನ್ನು ಹೆಚ್ಚಿಸಿವೆ. ಈ ಬಗ್ಗೆ ಆರೋಗ್ಯ ತಜ್ಞರು ನಿರಂತರವಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರವು ರಾಜ್ಯಗಳಿಗೆ ಮಹತ್ವದ ಸೂಚನೆ ನೀಡಿದೆ.

Written by - Puttaraj K Alur | Last Updated : Mar 12, 2023, 12:27 PM IST
  • H3N2 ವೈರಸ್ ಇದೀಗ ಕೇಂದ್ರ ಸರ್ಕಾರದ ಆತಂಕವನ್ನು ಹೆಚ್ಚಿಸಿದೆ
  • ದೇಶದಲ್ಲಿ ಇನ್ಫ್ಲುಯೆಂಜಾ ಮತ್ತು ತೀವ್ರ ಉಸಿರಾಟದ ಕಾಯಿಲೆಗಳ ಪ್ರವೃತ್ತಿ ಹೆಚ್ಚುತ್ತಿದೆ
  • ವಯಸ್ಸಾದವರು, ಮಕ್ಕಳು & ಅನೇಕ ಕಾಯಿಲೆಗಳಿಂದ ಬಳಲುತ್ತಿರುವ ಅಪಾಯದಲ್ಲಿದ್ದಾರೆ
ಕೇಂದ್ರ ಸರ್ಕಾರದ ಟೆನ್ಷನ್ ಹೆಚ್ಚಿಸಿದ H3N2; ಈ ಜನರು ಹೆಚ್ಚು ಅಪಾಯದಲ್ಲಿದ್ದಾರೆ! title=
H3N2 ವೈರಸ್ ಲಕ್ಷಣಗಳು

ನವದೆಹಲಿ: H3N2 ವೈರಸ್ ಇದೀಗ ಕೇಂದ್ರ ಸರ್ಕಾರದ ಆತಂಕವನ್ನು ಹೆಚ್ಚಿಸಿದೆ. ಏತನ್ಮಧ್ಯೆ, ನೀತಿ ಆಯೋಗವು H3N2 ಬಗ್ಗೆ ಸಭೆ ನಡೆಸಿದ್ದು, ಕೇಂದ್ರ ಸರ್ಕಾರದಿಂದ ಪತ್ರ ಬರೆಯುವ ಮೂಲಕ ರಾಜ್ಯಗಳಿಗೆ ಸೂಚನೆ  ನೀಡಲಾಗಿದೆ. H3N2ನಿಂದ ಯಾರಿಗೆ ಹೆಚ್ಚಿನ ಅಪಾಯವಿದೆ ಎಂದು ಯಾರಿಗೆ ತಿಳಿಸಲಾಗಿದೆ? H3N2ನಿಂದ ಯಾರು ಗಂಭೀರ ಸ್ಥಿತಿ ಹೊಂದಬಹುದು? H3N2 ರೋಗಲಕ್ಷಣ ತೋರಿಸಿದ ನಂತರ ಯಾರನ್ನು ಆಸ್ಪತ್ರೆಗೆ ಸೇರಿಸಬೇಕು? ಈ ಎಲ್ಲಾ ಪಶ್ನೆಗಳಿಗೆ ಉತ್ತರ ಕಂಡುಕೊಳ್ಳುವಂತೆ ಸಲಹೆ ನೀಡಲಾಗಿದೆ. ದೇಶದಾದ್ಯಂತ ಇನ್ಫ್ಲುಯೆಂಜಾ ತರಹದ ಕಾಯಿಲೆಗಳು ಮತ್ತು ತೀವ್ರ ಉಸಿರಾಟದ ಕಾಯಿಲೆಗಳ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.  

ತಲೆನೋವು ಹೆಚ್ಚಿಸಿದ H3N2 ವೈರಸ್!

ಈ ಬಗ್ಗೆ ಮಾತನಾಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ‘ಎಲ್ಲಾ ಲ್ಯಾಬ್‌ಗಳಲ್ಲಿ ಮಾಡಲಾಗುತ್ತಿರುವ ಮಾದರಿಗಳ ವಿಶ್ಲೇಷಣೆಯಲ್ಲಿ ಇನ್ಫ್ಲುಯೆನ್ಸ A (H3N2) ಅಧಿಕವಾಗಿರುವುದು ವಿಶೇಷ ಕಾಳಜಿಯ ವಿಷಯವಾಗಿದೆ. ವಯಸ್ಸಾದವರು, ಚಿಕ್ಕ ಮಕ್ಕಳು ಮತ್ತು ಅನೇಕ ಕಾಯಿಲೆಗಳಿಂದ ಬಳಲುತ್ತಿರುವ ಜನರು ವಿಶೇಷವಾಗಿ ಅಪಾಯದಲ್ಲಿದ್ದಾರೆ. ಈ ಜನರು HIN1, H3N2, ಅಡೆನೊವೈರಸ್ ಇತ್ಯಾದಿಗಳಿಗೆ ಹೆಚ್ಚು ಸೂಕ್ಷ್ಮವಾಗಿರುತ್ತಾರೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Video Viral: “ಇದು ನಮ್ಮ ಭೂಮಿ, ನೀವು ಕನ್ನಡದಲ್ಲೇ ಮಾತನಾಡಬೇಕು”: ಭಾರೀ ಚರ್ಚೆಯಾಗ್ತಿದೆ ಆಟೋ ಚಾಲಕನ ವಿಡಿಯೋ

ಎಚ್ಚರಿಕೆ ಅಗತ್ಯ!

ಕಳೆದ ಕೆಲವು ತಿಂಗಳುಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದು ರಾಜ್ಯಗಳಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಕಂಡುಬರುವ ಪಾಸಿಟಿವ್ ಪ್ರಮಾಣವು ಕ್ರಮೇಣ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡು ಕೂಡಲೇ ಕ್ರಮಕೈಗೊಳ್ಳುವ ಅಗತ್ಯವಿದೆ.

ಮಾರ್ಗಸೂಚಿ ಅನುಸರಿಸಲು ಸಲಹೆ

ವ್ಯಾಕ್ಸಿನೇಷನ್ ವ್ಯಾಪ್ತಿ ದೊಡ್ಡ ಪ್ರಮಾಣದಲ್ಲಿದ್ದರೂ ಇನ್ನೂ ಜಾಗರೂಕರಾಗಿರಬೇಕು. 4T ಅಂದರೆ ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್ ತಂತ್ರದತ್ತ ಗಮನ ಹರಿಸಬೇಕು ಮತ್ತು ಕೋವಿಡ್ -19ರ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ.

ಇದನ್ನೂ ಓದಿ: ಈ ರಾಜನಿಗಿತ್ತು ತೃತೀಯಲಿಂಗಿ ಜೊತೆ ಸಂಬಂಧ: ಬಾಂಧವ್ಯ ಎಷ್ಟಿತ್ತೆಂದರೆ ಆ ಕೆಲಸ ಕೂಡ ಮಾಡುತ್ತಿದ್ದರಂತೆ!!

ಯಾರು ಹೆಚ್ಚಿನ ಅಪಾಯದಲ್ಲಿದ್ದಾರೆ?

ವಯೋವೃದ್ಧರು, ಸ್ಥೂಲಕಾಯದಿಂದ ಬಳಲುತ್ತಿರುವವರು ಮತ್ತು ಒಂದಕ್ಕಿಂತ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ಗರ್ಭಿಣಿಯರು H3N2 ಮತ್ತು ಅಡೆನೊವೈರಸ್ ಇತ್ಯಾದಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಸಮಸ್ಯೆ ಹೆಚ್ಚಾದರೆ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News