ಪೊಲೀಸರು ಕೇಸ್ ದಾಖಲಿಸಿದ ನಂತರ ರಾಬರ್ಟ್ ವಾದ್ರಾ ಹೇಳಿದ್ದೇನು ಗೊತ್ತಾ?

ಗುರುಗ್ರಾಮ ಪೊಲೀಸರು ಶನಿವಾರದಂದು ಭೂಹಗರಣಕ್ಕೆ ಸಂಬಂಧಿಸಿದಂತೆ  ಕೇಸ್ ದಾಖಲಿಸಿದ್ದಾರೆ.

Last Updated : Sep 2, 2018, 11:37 AM IST
ಪೊಲೀಸರು ಕೇಸ್ ದಾಖಲಿಸಿದ ನಂತರ ರಾಬರ್ಟ್ ವಾದ್ರಾ ಹೇಳಿದ್ದೇನು ಗೊತ್ತಾ? title=

ನವದೆಹಲಿ: ಗುರುಗ್ರಾಮ ಪೊಲೀಸರು ಶನಿವಾರದಂದು ಭೂಹಗರಣಕ್ಕೆ ಸಂಬಂಧಿಸಿದಂತೆ  ಕೇಸ್ ದಾಖಲಿಸಿದ್ದಾರೆ.

ಖೆರ್ಕಿ ದೌಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ಐಪಿಸಿ 420,467,468,471,120b 13 PC ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲಾಗಿದೆ. ರಾಬರ್ಟ್ ವಾದ್ರಾ ಅವರ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈ ಲಿ ಈ ಹಗರಣದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾನೆಸರ್ ಡಿಎಸ್ಪಿ ರಾಜೇಶ್ ಕುಮಾರ್ " ನಾವು ನುಹ್ ನಿವಾಸಿಯಾಗಿರುವ ಸುರಿಂದರ್ ಶರ್ಮಾ ಅವರಿಂದ  ಭೂಹಗರಣದ  ವಿಚಾರವಾಗಿ ದೂರುಗಳನ್ನು ಸ್ವೀಕರಿಸಿದ್ದೇವೆ" ಎಂದು ಪಿಟಿಐಗೆ ತಿಳಿಸಿದ್ದಾರೆ.

ಈ ಪ್ರಕರಣದ ಕುರಿತಾಗಿ  ಪ್ರತಿಕ್ರಿಯಿಸಿರುವ ರಾಬರ್ಟ್ ವಾದ್ರಾ " ಇದು ಚುನಾವಣಾ ಸಮಯ ತೈಲ ಬೆಲೆ ಏರಿಕೆಗಳು ಹೆಚ್ಚುತ್ತಿವೆ ,ಆದ್ದರಿಂದ ನನ್ನ ದಶಕದಷ್ಟು ಹಳೆಯದಾದ ವಿಷಯವನ್ನು ತರುವ ಮೂಲಕ ಜನರ ಸಮಸ್ಯೆಗಳನ್ನು ಮರೆ ಮಾಚಲಾಗುತ್ತಿದೆ ಅದರಲ್ಲಿ ಎನಿಸಿದೆ ಹೊಸದು? "ಎಂದು ಅವರು ಪ್ರತಿಕ್ರಿಯಿಸಿದ್ದಾರೆ. 

Trending News