ಮೊಬೈಲ್ ಕದ್ದಿದ್ದವ ಮದುವೆ ಮನೆಯಲ್ಲೇ ಸಿಕ್ಕು ಬಿದ್ದ..!

ಮಹಿಳೆಯೊಬ್ಬರ ಮೊಬೈಲ್ ಕದ್ದಿದ್ದ ಆರೋಪಿ ಮಧುಮಗನನ್ನು ಪೊಲೀಸರು ಮದುವೆ ಮಂಟಪದಲ್ಲೇ ಬಂಧಿಸಿದ್ದಾರೆ.

Last Updated : Dec 3, 2018, 11:01 AM IST
 ಮೊಬೈಲ್ ಕದ್ದಿದ್ದವ ಮದುವೆ ಮನೆಯಲ್ಲೇ ಸಿಕ್ಕು ಬಿದ್ದ..! title=

ಮುಂಬೈ: ಮಹಿಳೆಯೊಬ್ಬರ ಮೊಬೈಲ್ ಕದ್ದಿದ ಮಧುಮಗನನ್ನು ಮದುವೆ ಮಂಟಪದಿಂದಲೇ ಪೊಲೀಸರು ಬಂಧಿಸಿದ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. 

 ತನ್ನ ಮದುವೆಯ ಹಿಂದಿನ ರಾತ್ರಿ ಆರೋಪಿ ಅಜಯ್ ಸುನೀಲ್ ಧೋತೆ, ತನ್ನ ಸ್ನೇಹಿತ ಅಲ್ತಾಫ್ ಮಿರ್ಜಾ ಜೊತೆ ಬೈಕಿನಲ್ಲಿ ಬಂದು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ಮೊಬೈಲ್ ಕಿತ್ತುಕೊಂಡು ನಾಪತ್ತೆಯಾಗಿದ್ದ. ಈ ಸಂಬಂಧ ಆ ಮಹಿಳೆ ತಿಲಕ್ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. 

ಮಹಿಳೆಯ ದೂರಿನ ಅನ್ವಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿ ಅಜಯ್ ಸುನಿಲ್ ಮತ್ತು ಅಲ್ತಾಫ್ ಮಿರ್ಜಾಗಾಗಿ ಸುಳಿವಿಗಾಗಿ ಬೆನ್ನತ್ತಿದ ಪೊಲೀಸರು ಶಿವಾಜಿನಗರದ ಆತನ ನಿವಾಸಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ಆಗ ಪೊಲೀಸರಿಗೆ ಆತ ಮದುವೆ ಮಂಟಪದಲ್ಲಿ ಮಧುಮಗನಾಗಿ ಕುಳಿತಿದ್ದು ಕಂಡುಬಂದಿದೆ. ಅದ್ಯಾವುದನ್ನೂ ಲೆಕ್ಕಯಾದೆ ಪೊಲೀಸರು ಆರೋಪಿ ಅಜಯ್ ಸುನೀಲ್ ಧೋತೆಯನ್ನು ಮದುವೆ ಮಂಟಪದಿಂದಲೇ ಬಂಧಿಸಿದ್ದಾರೆ. ಆತನ ಸ್ನೇಹಿತ ಕೂಡ ಪೋಲೀಸರ ಅತಿಥಿಯಾಗಿದ್ದಾನೆ.

ಸದ್ಯ ಆರೋಪಿಗಳ ವಿರುದ್ಧ ತಿಲಕ್ ನಗರ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

Trending News