Work From Home ಮಾಡುವವರಿಗೊಂದು ಸಂತಸದ ಸುದ್ದಿ! ಸರ್ಕಾರ ಶೀಘ್ರದಲ್ಲಿಯೇ ಜಾರಿಗೆ ತರಲಿದೆ ಈ ಕಾನೂನು

Law For WFH: ಮನೆಯಿಂದ ಕೆಲಸ ಮಾಡುವ ಬಗ್ಗೆ (WFH) ಭಾರತದಲ್ಲಿ ಇನ್ನೂ ಯಾವುದೇ ಕಾನೂನು ಇಲ್ಲ. ಹೊಸ ಕಾನೂನನ್ನು ರೂಪಿಸಲು ಸರ್ಕಾರ (Modi Government) ಚಿಂತನೆ ನಡೆಸಿದೆ. ಈ ಕಾನೂನು (Law) ಒಂದೊಮ್ಮೆ ಜಾರಿಗೆ ಬಂದ ನಂತರ ಕಂಪನಿಗೆ ಮನೆಯಿಂದಲೇ ಕೆಲಸ ಮಾಡುವ ಸಮಯವನ್ನು ನಿಗದಿಪಡಿಸುವ ಅನಿವಾರ್ಯತೆ ಎದುರಾಗಲಿದೆ.

Written by - Nitin Tabib | Last Updated : Dec 7, 2021, 12:55 PM IST
  • WFH ಸಮಯದಲ್ಲಿ ಇನ್ಮುಂದೆ ಯಾವುದೇ ಶೋಷಣೆ ನಡೆಯುವುದಿಲ್ಲ.
  • ಹೊಸ ಕಾನೂನಿನಿಂದ ಉದ್ಯೋಗಿಗಳಿಗೆ ಮುಕ್ತಿ ಸಿಗಲಿದೆ
  • WFH ನಲ್ಲಿ ಕೆಲಸದ ಸಮಯವನ್ನು ನಿಗದಿಪಡಿಸಲಾಗುತ್ತದೆ
Work From Home ಮಾಡುವವರಿಗೊಂದು ಸಂತಸದ ಸುದ್ದಿ! ಸರ್ಕಾರ ಶೀಘ್ರದಲ್ಲಿಯೇ ಜಾರಿಗೆ ತರಲಿದೆ ಈ ಕಾನೂನು title=
Work From Home (Representational Image)

ನವದೆಹಲಿ: Law For Work From Home - ನೀವೂ ಕೂಡ ಮನೆಯಿಂದಲೇ ನಿಮ್ಮ ಕಚೇರಿ ಕೆಲಸ ಮಾಡುತ್ತಿದ್ದು, ಕಚೇರಿಯ ಕೆಲಸಗಾರರು ನಿಮ್ಮನ್ನು ಮೊದಲಿಗಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿಸುತ್ತಿದ್ದಾರೆ ಅಥವಾ ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ  ಅಂತ ನಿಮಗೆ ಅನಿಸುತ್ತಿದ್ದರೆ, ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ. ಭಾರತ ಸರ್ಕಾರವು ಶೀಘ್ರದಲ್ಲೇ ಮನೆಯಿಂದ ಕೆಲಸ ಮಾಡುವವರಿಗಾಗಿ ಕಾನೂನನ್ನು ರಚಿಸುವ ಸಾಧ್ಯತೆ ಇದೆ. ಇದರಲ್ಲಿ ಕಂಪನಿಯು ತನ್ನ ಉದ್ಯೋಗಿ ಮನೆಯಿಂದ ಕೆಲಸ ಮಾಡುವಾಗ (WFH) ಅವರ ಬಗ್ಗೆ ಯಾವ ಜವಾಬ್ದಾರಿಗಳನ್ನು ಹೊಂದಿದೆ ಎಂಬುದನ್ನು ವ್ಯಾಖ್ಯಾನಿಸಲಾಗುವುದು ಎನ್ನಲಾಗಿದೆ.

ಮನೆಯಿಂದಲೇ ಕೆಲಸ ಮಾಡಲು ಚೌಕಟ್ಟನ್ನು ನಿರ್ಧರಿಸಲಾಗುತ್ತದೆ
ದಿ ಎಕನಾಮಿಕ್ಸ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕೋವಿಡ್ -19 (Covid 19) ಹಿನ್ನೆಲೆ  ಏಕಾಏಕಿ ಅನೇಕ ಕಂಪನಿಗಳು ಇನ್ನೂ ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸುತ್ತಿವೆ. ಇದಕ್ಕೆ ಯಾವುದೇ ಸ್ಥಿರ ಚೌಕಟ್ಟು ಇಲ್ಲ. ಸಾಮಾನ್ಯವಾಗಿ ಅನೇಕ ಉದ್ಯೋಗಿಗಳು ತಮ್ಮ ಕಛೇರಿಗಿಂತ ತಮ್ಮಿಂದ ಹೆಚ್ಚಿನ ಕೆಲಸವನ್ನು ಪಡೆಯಲಾಗುತ್ತಿದೆ ಎಂದು ಆರೋಪಿಸುತ್ತಾರೆ, ಆದರೆ, ಇದನ್ನು ವಿರೋಧಿಸಲು ಅಥವಾ ಈ ಶೋಷಣೆಯಿಂದ ಪಾರಾಗಲು ಭಾರತದಲ್ಲಿ ಇದುವರೆಗೆ ಯಾವುದೇ ಕಾನೂನು ಇಲ್ಲ.

ಕಾನೂನಿನಲ್ಲಿರುವ ನಿಯಮಗಳೇನು?
ನೂತನ ಕಾನೂನಿನಲ್ಲಿ ವರ್ಕ್ ಫ್ರಮ್ ಹೋಮ್ ವೇಳೆ ನಿಗದಿಯಾಗುವ ಸಾಧ್ಯತೆ ಇದೆ. ಇದಲ್ಲದೇ ಮನೆಯಿಂದ ಕೆಲಸ ಮಾಡುವಾಗ ವಿದ್ಯುತ್ ಮತ್ತು ಇಂಟರ್‌ನೆಟ್‌ನಂತಹ ವೆಚ್ಚಗಳಿಗೆ ಕಂಪನಿಯು ಎಷ್ಟು ಹಣವನ್ನು ಪಾವತಿಸಬೇಕು ಎಂಬುದನ್ನೂ ಕಾನೂನಿನಲ್ಲಿ ನಿರ್ಧರಿಸಲಾಗುತ್ತದೆ. ಮನೆಯಿಂದ ಕೆಲಸ ಮಾಡಲು ನಿಯಮಗಳನ್ನು ನಿರ್ಧರಿಸಲಾಗುವುದು, ಇದಕ್ಕಾಗಿ ಸರ್ಕಾರ ಶೀಘ್ರದಲ್ಲೇ ಕ್ರಮ ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ-PMSBY: ಸರ್ಕಾರದ ಈ ಸೂಪರ್‌ಹಿಟ್ ಯೋಜನೆಯಲ್ಲಿ 1 ರೂ. ಹೂಡಿಕೆ ಮಾಡಿ, 2 ಲಕ್ಷ ರೂ.ಗಳ ಲಾಭ ಗಳಿಸಿ

ಮನೆಯಿಂದ ಕೆಲಸ ಮಾಡಲು ಸಮಗ್ರ ರಚನೆಯನ್ನು ನಿರ್ಮಿಸಬೇಕು
ಕೇಂದ್ರ ಸರ್ಕಾರವು ಈಗ ಎಲ್ಲಾ ಕ್ಷೇತ್ರಗಳಿಗೆ ಸಮಗ್ರ ಔಪಚಾರಿಕ ರಚನೆಯನ್ನು ರಚಿಸಲು ಬಯಸುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ. ಪೋರ್ಚುಗಲ್‌ನಲ್ಲಿ ಇತ್ತೀಚೆಗೆ ಜಾರಿಗೆ ಬಂದ ಕಾನೂನು ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಹೆಚ್ಚಿನ ರಕ್ಷಣೆ ನೀಡಿದೆ. ಪೋರ್ಚುಗಲ್‌ನಲ್ಲಿ ಕಾರ್ಮಿಕ ನಿಯಮಗಳ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ. ನೌಕರರ ಶೋಷಣೆ ತಡೆಯಲು ಈ ಕಾನೂನು ಸಹಕಾರಿಯಾಗಿದೆ.

ಇದನ್ನೂ ಓದಿ-ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪ್ರಕಾರ ಇವರೇ ಟೀಂ ಇಂಡಿಯಾದ ಅತ್ಯುತ್ತಮ ಕ್ಯಾಪ್ಟನ್

ಗಮನಾರ್ಹವಾಗಿ, ಈ ವರ್ಷದ ಜನವರಿಯಲ್ಲಿ, ಕೇಂದ್ರ ಸರ್ಕಾರವು ಸ್ಥಾಯಿ ಆದೇಶದ ಮೂಲಕ ಸೇವಾ ವಲಯಕ್ಕೆ ಮನೆಯಿಂದ ಕೆಲಸವನ್ನು ಔಪಚಾರಿಕಗೊಳಿಸಿತು, ಕಂಪನಿ ಮತ್ತು ಉದ್ಯೋಗಿಗಳು ಕೆಲಸದ ಸಮಯ ಮತ್ತು ಇತರ ಷರತ್ತುಗಳ ಬಗ್ಗೆ ಪರಸ್ಪರ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಆದರೂ ಕೂಡ ಐಟಿ ಮತ್ತು ಐಟಿಇಎಸ್ ಅನ್ನು ಹೆಚ್ಚಾಗಿ ಒಳಗೊಂಡಿರುವ ಸೇವಾ ವಲಯವು ಈಗಾಗಲೇ ವಿಶೇಷ ಸಂದರ್ಭಗಳಲ್ಲಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಿರುವುದರಿಂದ ಸರ್ಕಾರದ ಈ ಕ್ರಮವು ಕೇವಲ ಸಾಂಕೇತಿಕ ಎಂಬಂತೆ ನೋಡಲಾಗಿದೆ.

ಇದನ್ನೂ ಓದಿ-ಕರ್ನಾಟಕ ಕಾನೂನು ವಿವಿ ವಿರುದ್ಧ ಪಟ್ಟು ಸಡಿಲಿಸದ ವಿದ್ಯಾರ್ಥಿಗಳು, ಅಹೋರಾತ್ರಿ ಧರಣಿ ಸತ್ಯಾಗ್ರಹ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News