ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿ ಮಾಡಲು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಅನುಮೋದನೆ ದೊರೆತ ಬೆನ್ನಲ್ಲೇ ಈ ಸಂಬಂಧ ರಾಜ್ಯಪಾಲ ಎನ್.ಎನ್. ವೊಹ್ರಾ ಬುಧವಾರ ಶ್ರೀನಗರದಲ್ಲಿ ಭದ್ರತಾ ಇಲಾಖೆ ಅಧಿಕಾರಿಗಳೊಂದಿಗೆ ಪ್ರಮುಖ ಸಭೆ ನಡೆಸಲಿದ್ದಾರೆ.
ಭದ್ರತಾ, ಆಡಳಿತ ಕ್ಷೇತ್ರಗಳ ಅಧಿಕಾರಿಗಳೊಂದಿಗೆ ರಾಜ್ ಭವನದಲ್ಲಿ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಹಾಜರಾಗುವ ಹಿರಿಯ ಅಧಿಕಾರಿಗಳ ಪಟ್ಟಿ -
- ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್, ಉತ್ತರ ಸೇನಾ ಕಮಾಂಡರ್
- ಬಿಬಿ ವ್ಯಾಸ್, ಮುಖ್ಯ ಕಾರ್ಯದರ್ಶಿ
- ಲೆಫ್ಟಿನೆಂಟ್ ಜನರಲ್ ಎ.ಕೆ. ಭಟ್, GoC 15 ಕಾರ್ಪ್ಸ್
- ಎಸ್ಪಿ ವೇದ್, ಡಿಜಿಪಿ
- ಉಮಾಂಗ್ ನರುಲಾ, ರಾಜ್ಯಪಾಲರ ಕಾರ್ಯದರ್ಶಿ
- ರಾಜ್ ಕುಮಾರ್ ಗೋಯೆಲ್, ಗೃಹ ಇಲಾಖೆ
- ಮುನಿರ್ ಅಹ್ಮದ್ ಖಾನ್, ಎಡಿಜಿಪಿ, ಹೋಮ್ ಗಾರ್ಡ್ಸ್ ಮತ್ತು ಸೆಕ್ಯುರಿಟಿ
- ಎಜಿ ಮಿರ್, ಎಡಿಜಿಪಿ ಸಿಐಡಿ
- ರಾಹುಲ್ ರಾಸ್ಗೋತ್ರ, ಜೆಡಿ ಐಬಿ
- ಜುಲಿಫಿಕರ್ ಹಸನ್, ಐಜಿಪಿ ಕಾರ್ಯಾಚರಣೆ, ಸಿಆರ್ಪಿಎಫ್
- ರವಿದೀಪ್ ಸಿಂಗ್ ಸಾಹಿ, ಐಜಿ ಸಿಆರ್ಪಿಎಫ್
- ಶ್ಯಾಮ್ ಪ್ರಕಾಶ್ ಪಾನಿ, ಐಜಿಪಿ ಕಾಶ್ಮೀರ
- ನಿತಿನ್ ಜೀತ್ ಸಿಂಗ್, ಹೆಚ್ಚುವರಿ ಆಯುಕ್ತ, ವಿಶೇಷ ಬ್ಯೂರೊ, ಶ್ರೀನಗರ
ಜಮ್ಮು ಮತ್ತು ಕಾಶ್ಮೀರದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ(ಪಿಡಿಪಿ) ಜೊತೆಗಿನ ಮೈತ್ರಿದಿಂದ ಭಾರತೀಯ ಜನತಾ ಪಕ್ಷ(ಬಿಜೆಪಿ) ಹೊರಬಂದ ನಂತರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಗೆ ಬಂದಿದೆ.