ಬೆಂಗಳೂರಿನ Google ಉದ್ಯೋಗಿಗೆ ಕರೋನಾ ಸೋಂಕು, ಕಂಪನಿ ಮಾಡಿದ್ದೇನು?

ಶುಕ್ರವಾರ, ಗೂಗಲ್(Google) ತನ್ನ ಬೆಂಗಳೂರು ಕಚೇರಿಯ ಉದ್ಯೋಗಿಗೆ ಕರೋನಾ ವೈರಸ್ ಕಂಡು ಬಂದಿರುವುದನ್ನು ದೃಢಪಡಿಸಿದೆ.

Last Updated : Mar 13, 2020, 10:41 AM IST
ಬೆಂಗಳೂರಿನ Google ಉದ್ಯೋಗಿಗೆ ಕರೋನಾ ಸೋಂಕು, ಕಂಪನಿ ಮಾಡಿದ್ದೇನು? title=

ನವದೆಹಲಿ: ಬೆಂಗಳೂರಿನ ಗೂಗಲ್(Google) ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯಲ್ಲಿ ಕೋವಿಡ್ -19(Covid-19) ಕೊರೊನಾವೈರಸ್‌ನ(Coronavirus)  ದೃಢಪಟ್ಟಿದೆ. ಅದರ ನಂತರ ಗೂಗಲ್, ಮುನ್ನೆಚ್ಚರಿಕೆ ವಹಿಸಿ, ಮನೆಯಿಂದ ಕೆಲಸ ಮಾಡುವಂತೆ ನೌಕರರಿಗೆ ಸೂಚಿಸಿದೆ. Google ನ ಈ ಸೂಚನೆಗಳು ನಾಳೆಯಿಂದ ಅನ್ವಯವಾಗುತ್ತವೆ.

ಕರೋನಾ ವೈರಸ್ ಸೋಂಕಿನ ಬಗ್ಗೆ ಭಾರತದಲ್ಲಿ ಈವರೆಗೆ 74 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ. ಅದೇ ಸಮಯದಲ್ಲಿ, ಈ ಅಪಾಯಕಾರಿ ವೈರಸ್‌ನಿಂದ 74 ವರ್ಷದ ವ್ಯಕ್ತಿಯೂ ನಿನ್ನೆ ಸಾವನ್ನಪ್ಪಿದ್ದಾನೆ. ಭಾರತದಲ್ಲಿ ಕರೋನಾ ವೈರಸ್‌ನಿಂದ ಸಂಭವಿಸಿದ ಮೊದಲ ಸಾವು ಇದಾಗಿದೆ. ಏತನ್ಮಧ್ಯೆ, ಗೂಗಲ್ ತನ್ನ ಬೆಂಗಳೂರು ಕಚೇರಿಯ ಉದ್ಯೋಗಿಯಲ್ಲಿ ಕರೋನಾ ವೈರಸ್ ಅನ್ನು ದೃಢಪಡಿಸಿದೆ. ಅದರ ನಂತರ ಗೂಗಲ್(Google) ತನ್ನ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಸಲಹೆ ನೀಡಿದೆ.

ಮುನ್ನೆಚ್ಚರಿಕೆಯಾಗಿ, ಸರ್ಕಾರಿ ಇಲಾಖೆಗಳು ಮತ್ತು ಅನೇಕ ಖಾಸಗಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಸೇವೆಗಳನ್ನು ಕೆಲವು ಸಮಯದವರೆಗೆ ನಿಷೇಧಿಸಲಾಗಿದೆ. ಜನರಿಗೆ ಸ್ಯಾನಿಟೈಜರ್ ಬಳಸುವಂತೆ ಸರ್ಕಾರ ಸಲಹೆ ನೀಡಿದೆ.

Trending News