ಫಿಯರ್ಲೆಸ್ ನಾಡಿಯಾ 110ನೇ ಜನ್ಮದಿನಾಚರಣೆಗೆ ಗೂಗಲ್ ಡೂಡಲ್ ಗೌರವ

ಆಸ್ಟ್ರೇಲಿಯ ಮೂಲದ ನಟಿ ಮತ್ತು ಸಾಹಸ ಮಹಿಳೆಯಾಗಿದ್ದ ಫಿಯರ್ಲೆಸ್ ನಾಡಿಯಾ ಎಂದೇ ಹೆಸರಾಗಿದ್ದ ಮೇರಿ ಆನ್ ಇವಾನ್ಸ್ ಅವರ 110ನೇ ಜನ್ಮದಿನಾಚರಣೆಯಂದು ಗೂಗಲ್ ಡೂಡಲ್ ನಲ್ಲಿ ಗೌರವ ಸಲ್ಲಿಸಿದೆ. 

Last Updated : Jan 8, 2018, 11:24 AM IST
ಫಿಯರ್ಲೆಸ್ ನಾಡಿಯಾ 110ನೇ ಜನ್ಮದಿನಾಚರಣೆಗೆ ಗೂಗಲ್ ಡೂಡಲ್ ಗೌರವ title=

ನವದೆಹಲಿ: ಆಸ್ಟ್ರೇಲಿಯ ಮೂಲದ ನಟಿ ಮತ್ತು ಸಾಹಸ ಮಹಿಳೆಯಾಗಿದ್ದ ಫಿಯರ್ಲೆಸ್ ನಾಡಿಯಾ ಎಂದೇ ಹೆಸರಾಗಿದ್ದ ಮೇರಿ ಆನ್ ಇವಾನ್ಸ್ ಅವರ 110ನೇ ಜನ್ಮದಿನಾಚರಣೆಯಂದು ಗೂಗಲ್ ಡೂಡಲ್ ನಲ್ಲಿ ಗೌರವ ಸಲ್ಲಿಸಿದೆ. 

ಹೆಂಗಸರು ಚಿತ್ರದಲ್ಲಿ ನಟಿಸುವುದೇ ಅಪರಾಧವಾಗಿದ್ದ ಕಾಲದಲ್ಲಿ ಇಡೀ ಚಿತ್ರರಂಗವನ್ನು, ಚಿತ್ರರಸಿಕರನ್ನು ಬೆರಗಿನಿಂದ ನೋಡುವಂತೆ ಮಾಡಿದ್ದು ಫಿಯರ್‌ಲೆಸ್ ನಾಡಿಯಾ. ವಾಡಿಯಾ ಮೂವಿಟೌನ್‌ನ ಜೆಬಿಎಚ್ ವಾಡಿಯಾ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಂಡ ನಟಿ ಈಕೆ. 

ತಮ್ಮ ಐದನೇ ವಯಸ್ಸಿನಲ್ಲಿ ಭಾರತಕ್ಕೆ ಬಂದ ಆಕೆ, ಉತ್ತರ-ಪಶ್ಚಿಮ ಫ್ರಾಂಟಿಯರ್ ಪ್ರಾಂತ್ಯದಲ್ಲಿದ್ದ ಸಮಯದಲ್ಲಿ ಕುದುರೆ ಸವಾರಿ, ಬೇಟೆಯಾಡುವುದು, ಮೀನುಗಾರಿಕೆ ಮತ್ತು ಶೂಟಿಂಗ್ ಮುಂತಾದ ಹಲವು ಕೌಶಲಗಳನ್ನು ಕಲಿತರು.

ನಂತರ ತಮ್ಮ ಸ್ಟಂಟ್‌ಗಳ ಮೂಲಕ ಪುರುಷರನ್ನೇ ನಾಚಿಸಿದ್ದರು ನಾಡಿಯಾ. 1933ರ ಲಾಲ್ ಇ ಯಮಾನ್ ಚಿತ್ರರಂಗದಲ್ಲಿ ಕಾಣಿಸಿಕೊಂಡಾಗ ಅವರಿಗೆ ಬರೀ 25 ವರ್ಷ. 1935ರಲ್ಲಿ 'ಹಂಟರ್‌ವಾಲಿ' ಚಿತ್ರ ಬಿಡುಗಡೆಯಾಯಿತು. ಬಿಗಿಯಾದ, ದೇಹದ ಮೈಮಾಟವನ್ನು ತೋರುವ ಉಡುಪು, ದೊಡ್ಡ ಬೂಟು, ಹಂಟರ್ ಹಿಡಿದ ಅವತಾರದಲ್ಲಿ ಕಾಣಿಸಿಕೊಂಡ ನಾಡಿಯಾ ಚಿತ್ರರಂಗದ ಮರೆಯಲಾಗದ ಚಿತ್ರವಾಗಿ ಉಳಿದರು.

ಹಂಟರ್ವಾಲಿಯೊಂದಿಗೆ ಅವರು ಯಶಸ್ಸನ್ನು ಕಂಡ ನಂತರ, ತನ್ನ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಸಂಪೂರ್ಣ ಸಾಮರ್ಥ್ಯಕ್ಕೆ ತೋರಿಸಿಕೊಟ್ಟಳು, ನಾಡಿಯಾ ತನ್ನ ಎಲ್ಲಾ ಸಾಹಸಗಳನ್ನು ಸರಾಗವಾಗಿ ನಿರ್ವಹಿಸುತ್ತಿರುವುದರಿಂದ, ಹಲವಾರು ಬಾರಿ ತನ್ನ ಜೀವನವನ್ನು ಅನೇಕ ಸಮಯದಲ್ಲೂ ಅಪಾಯಕ್ಕೆ ತಂದುಕೊಂಡರು.

ಹೀಗೆ ಯಾವುದೇ ಭಯವಿಲ್ಲದೆ ಸ್ಟಂಟ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಭಯವಿಲ್ಲದ ನಾಡಿಯಾ ಅವರನ್ನು ಭಾರತದ ಸ್ಟಂಟ್ ರಾಣಿ ಎಂದೇ ಕರೆಯಲಾಗುತ್ತದೆ.

Trending News