ನವದೆಹಲಿ: Pradhan Mantri Awas Yojana: ಪ್ರಧಾನಮಂತ್ರಿ ವಸತಿ ಸೌಲಭ್ಯದ ಫಲಾನುಭವಿಗಳಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G) ಯೋಜನೆಯನ್ನು 2024 ರವರೆಗೆ ಮುಂದುವರಿಸುವ ಪ್ರಸ್ತಾವನೆಗೆ ಸರ್ಕಾರವು (Union Cabinet Decision) ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಅಡಿಯಲ್ಲಿ 2.95 ಕೋಟಿ ಪಕ್ಕಾ ಮನೆಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಪೈಕಿ ನವೆಂಬರ್ 2021 ರ ವೇಳೆಗೆ 1.65 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ. ಉಳಿದ ಕುಟುಂಬಗಳು ಸಹ ಈ ನಿರ್ಧಾರದಿಂದ ತಮ್ಮ ಪಕ್ಕಾ ಮನೆಗಳನ್ನು ನಿರ್ಮಿಸಿಕೊಳ್ಳಬಹುದು, ಹೀಗಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣವನ್ನು 2024 ರವರೆಗೆ ಮುಂದುವರಿಸಲು ಅನುಮೋದನೆ ನೀಡಲಾಗಿದೆ. ಇದರಿಂದ ಲಕ್ಷಾಂತರ ಗ್ರಾಮಸ್ಥರಿಗೆ ಅನುಕೂಲವಾಗಲಿದೆ.
ಇದುವರೆಗೆ 1.97 ಲಕ್ಷ ಕೋಟಿ ಖರ್ಚು ಮಾಡಲಾಗಿದೆ
ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಮಾರ್ಚ್ 2021 ರವರೆಗೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣಕ್ಕೆ 1.97 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಈ ಪೈಕಿ ಕೇಂದ್ರ ಸರ್ಕಾರ 1,44,162 ಕೋಟಿ ರೂ. ವೆಚ್ಚ ಭರಿಸಿದೆ. ಉಳಿದ ಪಕ್ಕಾ ಮನೆಗಳ ನಿರ್ಮಾಣಕ್ಕೆ ಸರ್ಕಾರ 2,17,257 ಕೋಟಿ ರೂ.ಗೆ ಅನುಮೋದನೆ ನೀಡಿದ್ದು, 2024ರ ವೇಳೆಗೆ ಉಳಿದ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ನೀಡುವ ಗುರಿಯನ್ನು ಹೊಂದಲಾಗಿದೆ.
ಇದನ್ನೂ ಓದಿ-ಪಂಚರಾಜ್ಯಗಳ ಚುನಾವಣೆ ಘೋಷಣೆ: ಯಾರಿಗೆ ಒಲಿಯಲಿದೆ ಪಂಚರಾಜ್ಯಗಳ ಗದ್ದುಗೆ?
ಸರ್ಕಾರ ನೀಡಿದ ಮಾಹಿತಿ
ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಒಟ್ಟು ವೆಚ್ಚ 1,43,782 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ 18,676 ಕೋಟಿ ರೂಪಾಯಿಗಳು ನಬಾರ್ಡ್‌ಗೆ ಸಾಲದ ಬಡ್ಡಿ ರೂಪದಲ್ಲಿ ಪಾವತಿಸಲಾಗಿದೆ. ಈ ಯೋಜನೆಯೊಂದಿಗೆ, ಗುಡ್ಡಗಾಡು ರಾಜ್ಯಗಳಿಗೆ ಶೇ.90ರಷ್ಟು ಮತ್ತು ಶೇ.10ರಷ್ಟು ಆಧಾರದ ಮೇಲೆ ಪಾವತಿ ಮಾಡಲಾಗುತ್ತದೆ. ಉಳಿದ ಶೇ.60 ಮತ್ತು ಶೇ.40 ರಷ್ಟು ಕೇಂದ್ರ ಮತ್ತು ರಾಜ್ಯಗಳು ಭರಿಸುತ್ತವೆ. ಇದೇ ವೇಳೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದಕ್ಕೆ ಶೇ.100 ರಷ್ಟು ಹಣ ವೆಚ್ಚ ಮಾಡಲಾಗುತ್ತದೆ.
ಇದನ್ನೂ ಓದಿ-ಪಂಚ ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ: ಏಳು ಹಂತದಲ್ಲಿ ಚುನಾವಣೆ
ಶೌಚಾಲಯ ನಿರ್ಮಾಣಕ್ಕೂ ಹಣವಿದೆ
ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ 12 ಸಾವಿರ ರೂ.ಗಳನ್ನು ನೀಡಲಾಗುತ್ತಿದ್ದು, ಇದು ಕಟ್ಟಡ ನಿರ್ಮಾಣದ ಹೊರತಾಗಿ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಈ ಯೋಜನೆಯೊಂದಿಗೆ ಪ್ರತಿ ಕುಟುಂಬಕ್ಕೂ ಪಕ್ಕಾ ಮನೆ, ನೀರು, ವಿದ್ಯುತ್, ಶೌಚಾಲಯ ಕಲ್ಪಿಸುವ ಸಂಕಲ್ಪ ಈಡೇರಿಸಲಾಗುತ್ತದೆ.
ಇದನ್ನೂ ಓದಿ-ನನ್ನ ಹೆಸರು ಕೋವಿಡ್ ಆದರೆ ವೈರಸ್ ಅಲ್ಲ: ನಗರದ ಉದ್ಯಮಿ ಟ್ವಿಟ್ಟರ್ ಟ್ರೆಂಡ್.....
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.