Good News: ಡಿಸೆಂಬರ್ 15ರಿಂದ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸೇವೆ ಪುನರಾರಂಭ

International Flights To Resume:14 ದೇಶಗಳನ್ನು ಹೊರತುಪಡಿಸಿ ಡಿಸೆಂಬರ್ 15 ರಿಂದ ನಿಯಮಿತ ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಪುನಃ ಆರಂಭಿಸಲು ಭಾರತ ಸರ್ಕಾರ ಅನುಮತಿ ನೀಡಿದೆ.

Written by - Nitin Tabib | Last Updated : Nov 26, 2021, 07:13 PM IST
  • ಮತ್ತೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾಗಲಿದೆ.
  • ಡಿಸೆಂಬರ್ 15 ರಿಂದ ಅಂತರರಾಷ್ಟ್ರೀಯ ವಿಮಾನಯಾನ ಆರಂಭಿಸಲು ಕೇಂದ್ರ ಸರ್ಕಾರದ ಅನುಮತಿ.
  • ಕೊರೊನಾ ಭೀತಿಯಿಂದಾಗಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.
Good News: ಡಿಸೆಂಬರ್ 15ರಿಂದ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸೇವೆ ಪುನರಾರಂಭ title=
International Flights Resume (Representational Image)

International Flights Resume - ಹೊಸ ವರ್ಷ ಮತ್ತು ಕ್ರಿಸ್‌ಮಸ್ ಸಂದರ್ಭದಲ್ಲಿ ವಿದೇಶಕ್ಕೆ ಭೇಟಿ ನೀಡಲು ಬಯಸುವ ವಿಮಾನ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. 14 ದೇಶಗಳನ್ನು ಹೊರತುಪಡಿಸಿ ಇತರ ದೇಶಗಳಿಗೆ ಅಂತರರಾಷ್ಟ್ರೀಯ ಪ್ಯಾಸಿಂಜರ್ ವಿಮಾನಯಾನ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಡಿಸೆಂಬರ್ 15 ರಿಂದ ಅಂತರರಾಷ್ಟ್ರೀಯ ವಿಮಾನಗಳು ಪ್ರಾರಂಭ
ಡಿಸೆಂಬರ್ 15 ರಿಂದ, ಯುಕೆ, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ಫಿನ್ಲ್ಯಾಂಡ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಚೀನಾ, ಮಾರಿಷಸ್, ಸಿಂಗಾಪುರ್ ಬಾಂಗ್ಲಾದೇಶ, ಬೋಟ್ಸ್ವಾನಾ ಮತ್ತು ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್ ಸೇರಿದಂತೆ 14 ದೇಶಗಳನ್ನು ಹೊರತುಪಡಿಸಿ ಉಳಿದ ದೇಶಗಳಿಗೆ ನಿಯಮಿತ ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಪ್ರಾರಂಭವಾಗಲಿವೆ.  ಕೊರೊನಾ ವೈರಸ್‌ನ (Corona) ಹೊಸ ರೂಪಾಂತರವನ್ನು  ಗಮನದಲ್ಲಿಟ್ಟುಕೊಂಡು ಸರ್ಕಾರ (MoCA) ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ. ಈ 14 ದೇಶಗಳಲ್ಲಿ ಹಲವು ದೇಶಗಳೊಂದಿಗೆ ಏರ್ ಬಬಲ್ ಒಪ್ಪಂದದ ಅಡಿಯಲ್ಲಿ ವಿಮಾನ ಸೇವೆ ನಡೆಸಲಾಗುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ. 

ಇದನ್ನೂ ಓದಿ-ಯಾವತ್ತೂ ನೀವು ತಪ್ಪಿನ ವಿರುದ್ಧ ನಿಲ್ಲಲು ಹಿಂಜರಿಯಬೇಡಿ - ಸಿಜೆಐ ರಮಣ

ಮಾರ್ಚ್ 2020 ರಿಂದ ನಿಷೇಧವಿತ್ತು
ಮಾರ್ಚ್ 2020 ರಲ್ಲಿ ಕರೋನಾ ಸಾಂಕ್ರಾಮಿಕ ರೋಗ ಅಪ್ಪಳಿಸಿದ ನಂತರ ಭಾರತವು ತನ್ನ ಅಂತರರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಆದರೆ, ನಂತರ ವಂದೇ ಭಾರತ್ ವಿಮಾನಗಳು ಮತ್ತು ಬಬಲ್ ಒಪ್ಪಂದದ ಮೂಲಕ ವಿಮಾನ ಸೇವೆಯನ್ನು ಆರಂಭಿಸಲಾಗಿತ್ತು. ಅಂತರಾಷ್ಟ್ರೀಯ ವಿಮಾನ ಸೇವೆಯ ಸೇವೆಯನ್ನು ಕ್ರಮಬದ್ಧಗೊಳಿಸದಿರುವ 14 ದೇಶಗಳಲ್ಲಿ, ಬಬಲ್ ಒಪ್ಪಂದದ ಅಡಿಯಲ್ಲಿ ಅಂತರಾಷ್ಟ್ರೀಯ ವಿಮಾನಗಳ ಸೇವೆಯು ಮುಂದುವರೆಯಲಿದೆ. ಸರ್ಕಾರದ ಈ ನಿರ್ಧಾರವು ಬಿಕ್ಕಟ್ಟಿನಲ್ಲಿರುವ ವಿಮಾನಯಾನ (Airlines) ಉದ್ಯಮಕ್ಕೆ ಪ್ರಯೋಜನವನ್ನು ನೀಡಲಿದೆ ಮತ್ತು ಇದು ವಿಮಾನ ಪ್ರಯಾಣ ದರವನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ. 

ಇದನ್ನೂ ಓದಿ-Dengue ನಿಂದ ಸಿಗಲಿದೆ ಶಾಶ್ವತ ಮುಕ್ತಿ! ಸೊಳ್ಳೆಗಳೇ ನಿಮ್ಮನ್ನು ಡೆಂಗ್ಯೂನಿಂದ ರಕ್ಷಿಸಲಿವೆ

ಲಸಿಕೆ ವ್ಯಾಪ್ತಿ ಹೆಚ್ಚಾಗುತ್ತಿದೆ
ಡಿಸೆಂಬರ್ ವೇಳೆಗೆ ವ್ಯಾಕ್ಸಿನೇಷನ್ ವ್ಯಾಪ್ತಿಯೂ ಹೆಚ್ಚಾಗುತ್ತಿದೆ. ದೇಶದ ಶೇ. 40ರಷ್ಟು ನಾಗರಿಕರಿಗೆ ಕರೋನಾ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗಿದೆ. ಗೃಹ ಮತ್ತು ಆರೋಗ್ಯ ಸಚಿವಾಲಯಗಳೊಂದಿಗೆ ಚರ್ಚಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಅಂತರರಾಷ್ಟ್ರೀಯ ವಿಮಾನಗಳಂತೆ, ದೇಶೀಯ ವಿಮಾನಗಳ ಹಾರಾಟದ ಮೇಲೂ ಕೂಡ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಎರಡು ತಿಂಗಳ ವಿರಾಮದ ನಂತರ, ದೇಶೀಯ ವಿಮಾನಯಾನ ಸೇವೆಯನ್ನು ಮೇ 2020 ರಲ್ಲಿ ಸೀಮಿತ ಸಾಮರ್ಥ್ಯದೊಂದಿಗೆ  ಪ್ರಾರಂಭಿಸಲಾಯಿತು. ಆದರೆ ಈ ವರ್ಷದ ಅಕ್ಟೋಬರ್‌ನಿಂದ ದೇಶೀಯ ವಿಮಾನಗಳಿಗೆ (Domestic Flights) ಪೂರ್ಣ ಸಾಮರ್ಥ್ಯದಲ್ಲಿ ಹಾರಾಟಕ್ಕೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ-CBSE Term 1 Practical Exam: ಪ್ರಾಯೋಗಿಕ ಪರೀಕ್ಷೆಗಳಿಗೆ ಲೋಕಲ್ ಶಿಕ್ಷಕರೇ ಎಕ್ಸಾಮಿನರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News