ಕೊರೊನಾ ಸಂಕಷ್ಟದ ನಡುವೆ 40 ಸಾವಿರ Freshersಗಳಿಗೆ ಉದ್ಯೋಗಾವಕಾಶ ನೀಡಲಿದೆ TCS

ಭಾರತದ ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸೆಸ್ ಇಡೀ ದೇಶಾದ್ಯಂತದ ಕ್ಯಾಂಪಸ್ ಗಳಲ್ಲಿರುವ ಸುಮಾರು 40 ಸಾವಿರ ಹೊಸಬರಿಗೆ ಉದ್ಯೋಗ ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ ಅಮೇರಿಕಾದಲ್ಲಿಯೂ ಕೂಡ ಈ ಬಾರಿ ಕ್ಯಾಂಪಸ್ ಪ್ಲೇಸ್ಮೆಂಟ್ ಗಳನ್ನು ದ್ವಿಗುಣಗೊಳಿಸುವುದಾಗಿ TCS ಹೇಳಿದೆ.  

Last Updated : Jul 13, 2020, 04:21 PM IST
ಕೊರೊನಾ ಸಂಕಷ್ಟದ ನಡುವೆ 40 ಸಾವಿರ Freshersಗಳಿಗೆ ಉದ್ಯೋಗಾವಕಾಶ ನೀಡಲಿದೆ TCS title=

ನವದೆಹಲಿ: ಕೊರೊನಾ ಬಿಕ್ಕಟ್ಟಿನ ನಡುವೆ ದೇಶಾದ್ಯಂತ ಅನೇಕ ಕಂಪನಿಗಳು ತಮ್ಮ ತಮ್ಮ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತಗೊಳಿಸುತ್ತಿವೆ. ಅಷ್ಟೇ ಅಲ್ಲ ಕೆಲ ಕಂಪನಿಗಳು ತನ್ನ ಉದ್ಯೋಗಿಗಳ ವೇತನವನ್ನು ಕೂಡ ಕಡಿತಗೊಳಿಸುತ್ತಿವೆ.  ಏತನ್ಮಧ್ಯೆ ದೇಶದ ದಿಗ್ಗಜ ಐಟಿ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸೆಸ್ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಹೌದು, ದೇಶಾದ್ಯಂತ ಇರುವ ಕ್ಯಾಂಪಸ್ ಗಳ ಸುಮಾರು 40 ಸಾವಿರ ಹೊಸಬರಿಗೆ ಉದ್ಯೋಗ ನೀಡುವ ನಿರ್ಣಯವನ್ನು TCS ಕೈಗೊಂಡಿದೆ.

ಕಳೆದ ವರ್ಷವೂ ಕೂಡ ಕಂಪನಿ ಇಷ್ಟೇ ಸಂಖ್ಯೆಯಲ್ಲಿ ಹೊಸಬರಿಗೆ ಉದ್ಯೋಗಾವಕಾಶ ಕಲ್ಪಿಸಿತ್ತು. ಆದರೆ, ಕೊರೊನಾ ಸಂಕಷ್ಟದ ನಡುವೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಂಪನಿಗಳು ಒಂದೆಡೆ ಉದ್ಯೋಗ ಕಡಿತ, ವೇತನ ಕಡಿತದಂತಹ ನಿರ್ಣಯಗಳನ್ನು ಕೈಗೊಳ್ಳುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ,  ಕಂಪನಿ ಈ ಬಾರಿಯೂ ಕೂಡ ನೌಕರಿ ನೀಡುವ ನಿರ್ಣಯ ಕೈಗೊಂಡಿರುವುದು ಇಲ್ಲಿ ಗಮನಾರ್ಹವಾಗಿದೆ.

ಅಮೇರಿಕಾದಲ್ಲಿಯೂ ಕೂಡ ಪ್ಲೇಸ್ಮೆಂಟ್ ದ್ವಿಗುಣಗೊಳಿಸಿದೆ ಕಂಪನಿ
ಇದೆ ವೇಳೆ ಅಮೇರಿಕಾದಲ್ಲಿಯೂ ಕೂಡ ಈ ಬಾರಿ ಕ್ಯಾಂಪಸ್ ಪ್ಲೇಸ್ಮೆಂಟ್ ಅನ್ನು ದ್ವಿಗುಣಗೊಳಿಸಲು ನಿರ್ಧರಿಸಿದ್ದು, ಕನಿಷ್ಠ ಅಂದರೆ ಸುಮಾರು 2000 ಜನರಿಗೆ ಉದ್ಯೋಗ ಕಲ್ಪಿಸುವುದಾಗಿ ಕಂಪನಿ ಹೇಳಿದೆ. ಇತ್ತೀಚೆಗಷ್ಟೇ ಈ ಕುರಿತು ಹೇಳಿಕೆ ನೀಡಿದ್ದ ಕಂಪನಿಯ ಸಿಇಓ ರಾಜೇಶ್ ಗೋಪಿನಾಥ್, "ಸಕಾರಾತ್ಮಕ ಬೇಡಿಕೆಯ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ನಿಧಾನಕ್ಕೆ ತನ್ನ ಲ್ಯಾಟರಲ್ ಹೈರಿಂಗ್ ಆರಂಭಿಸುತ್ತಿದೆ. ಕೊವಿಡ್ 19 ಹಿನ್ನೆಲೆ ಇದಕ್ಕೂ ಮೊದಲು ಈ ಪ್ರಕಿಯೆಗೆ ತಡೆನೀಡಲಾಗಿತ್ತು. ಆದರೆ, ಇದೀಗ ನಾವು ಈ ಮೊದಲೇ ನಿರ್ಧರಿಸಿದಂತೆ ನಮ್ಮ ಎಲ್ಲ ಯೋಜನೆಗಳನ್ನು ಪುನರಾರಂಭಿಸುತ್ತಿದ್ದೇವೆ" ಎಂದು ಹೇಳಿದ್ದರು.

ಲಾಭದಲ್ಲಿ ಕುಸಿತ
ಕಳೆದ ವಾರ ಬಿಡುಗಡೆಗೊಳಿಸಲಾಗಿರುವ ಅಂಕಿ ಅಂಶಗಳ ಪ್ರಕಾರ TCS ಲಾಭ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ ಶೇ.13 ಕುಸಿತ ಕಂಡು ಕೇವಲ 7,೦49 ಕೋಟಿ ರೂ.ಗೆ ಬಂದು ತಲುಪಿತ್ತು. ಕೊರೊನಾ ಕಾಲದಲ್ಲಿ ಉದ್ಭವಿಸಿರುವ ಸಂಕಷ್ಟದ ಹಿನ್ನೆಲೆಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಕ್ಯಾಂಪಸ್ ಹೈರಿಂಗ್ ನಲ್ಲಿಯೂ ಕೂಡ ಭಾರಿ ಇಳಿಕೆ
Firstnaukri.com ಇತ್ತೀಚೆಗಷ್ಟೇ ಬಿಡುಗಡೆಗೊಳಿಸಿರುವ ಸಮೀಕ್ಷೆಯೊಂದರ ಅಂಕಿ-ಅಂಶಗಳ ಪ್ರಕಾರ, ಕೊರೊನಾ ವೈರಸ್ ಕಾರಣ ಈ ವರ್ಷ ಕಾಲೇಜುಗಳಲ್ಲಿ ಅಥವಾ ಕ್ಯಾಂಪಸ್ ಹೈರಿಂಗ್ ಪ್ರಮಾಣದಲ್ಲಿ ಶೇ.82ರಷ್ಟು ಇಳಿಕೆಯಾಗಿದೆ ಎನ್ನಲಾಗಿದೆ. ಅಷ್ಟ ಅಲ್ಲ ಪ್ರಿಫೈನಲ್ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಇಂಟರ್ನ್ಶಿಪ್ ನಲ್ಲಿಯೂ ಕೂಡ ಷ.74ರಷ್ಟು ಇಳಿಕೆಯಾಗಿದೆ ಎನ್ನಲಾಗಿದೆ. 

Trending News