ಗಗನಕ್ಕೇರಿದ ಚಿನ್ನದ ಬೆಲೆ

ಚಿನ್ನ ಮಲ್ಟಿ-ಕಮೋಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್) ನಲ್ಲಿ 50707 ರೂಗಳನ್ನು ಮುಟ್ಟುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ, ಪ್ರತಿ 10 ಗ್ರಾಂ ಬೆಳ್ಳಿಯ ಬೆಲೆಗಳು ಏರಿಕೆಯಾಗಿದ್ದು, ದಿನದ ಗರಿಷ್ಠ ಕೆ.ಜಿ.ಗೆ 62400 ರೂ.ಆಗಿದೆ.

Last Updated : Jul 23, 2020, 05:08 PM IST
ಗಗನಕ್ಕೇರಿದ ಚಿನ್ನದ ಬೆಲೆ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಮಲ್ಟಿ-ಕಮೋಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್) ನಲ್ಲಿ ಚಿನ್ನ 50707 ರೂಗಳನ್ನು ಮುಟ್ಟುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ, ಪ್ರತಿ 10 ಗ್ರಾಂ ಬೆಳ್ಳಿಯ ಬೆಲೆಗಳು ಏರಿಕೆಯಾಗಿದ್ದು, ದಿನದ ಗರಿಷ್ಠ ಕೆ.ಜಿ.ಗೆ 62400 ರೂ.ಆಗಿದೆ.

ಮಲ್ಟಿ-ಕಮೋಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್) ನಲ್ಲಿ ಮಧ್ಯಾಹ್ನ 3.11 ಕ್ಕೆ, ಆಗಸ್ಟ್ ಚಿನ್ನದ ಒಪ್ಪಂದಗಳು 0.97 ರಷ್ಟು ಹೆಚ್ಚಳವಾಗಿ 10 ಗ್ರಾಂಗೆ 50,565 ರೂ. ಆಗಿವೆ. ಬೆಳ್ಳಿಯ ಸೆಪ್ಟೆಂಬರ್ ಭವಿಷ್ಯವು 1.14 ರಷ್ಟು ಹೆಚ್ಚಳವಾಗಿ ಪ್ರತಿ ಕೆ.ಜಿ.ಗೆ 61,809 ರೂ.ತಲುಪಿದೆ.ಚಿನ್ನದ ದರವು ಚೀನಾ ಮತ್ತು ಅಮೇರಿಕಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನಲೆಯಲ್ಲಿ ಹೆಚ್ಚಳಗೊಂಡಿದೆ.

ಸ್ಪಾಟ್ ಚಿನ್ನವು ಔನ್ಸ್‌ಗೆ  0.1% ಏರಿಕೆಯಾಗಿ $1,874.21 ಕ್ಕೆ ತಲುಪಿದೆ, ಸೆಪ್ಟೆಂಬರ್ 2011 ರಿಂದೀಚೆಗೆ ಬೆಲೆಗಳು ಗರಿಷ್ಠ ಮಟ್ಟವನ್ನು ತಲುಪಿದ ನಂತರ $1,876.16 ಕ್ಕೆ ತಲುಪಿದ ನಂತರ ಯು.ಎಸ್. ಚಿನ್ನದ ಭವಿಷ್ಯವು 0.6% ಏರಿಕೆಯಾಗಿ $1,875.50 ಕ್ಕೆ ತಲುಪಿದೆ.

ಮುಂದಿನ 18 ತಿಂಗಳುಗಳಲ್ಲಿ ಚಿನ್ನವು  ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಬಹುದೆಂದು ರಾಯಿಟರ್ಸ್ ಸಮೀಕ್ಷೆಯೊಂದು ತೋರಿಸಿದೆ, ಏಕೆಂದರೆ ಬಿಕ್ಕಟ್ಟು ಹೂಡಿಕೆದಾರರನ್ನು ವ್ಯಾಪಕ ಮಾರುಕಟ್ಟೆಗಳಲ್ಲಿ ಸಂಭವನೀಯ ಪ್ರಕ್ಷುಬ್ಧತೆಯ ವಿರುದ್ಧ ಹೆಡ್ಜ್ ಆಗಿ ಸಂಗ್ರಹಿಸಲು ಉತ್ತೇಜಿಸುತ್ತದೆ.

Trending News