ಮೂಗಿಗೆ ಪೈಪ್‌ ಹಾಕಿಕೊಂಡೇ ಬಜೆಟ್‌ ಮಂಡಿಸಿದ ಗೋವಾ ಸಿಎಂ ಮನೋಹರ್ ಪರಿಕ್ಕರ್‌

ಅನಾರೋಗ್ಯ ಸ್ಥಿತಿಯಲ್ಲಿಯೇ ತಲೆಗೆ ಕ್ಯಾಪ್ ಧರಿಸಿ ಆಗಮಿಸಿದ ಪರಿಕ್ಕರ್ ಅವರು, ಮೆಲುದನಿಯಲ್ಲಿಯೇ ಬಜೆಟ್ ಮಂಡಿಸಿದರು.   

Last Updated : Jan 30, 2019, 07:06 PM IST
ಮೂಗಿಗೆ ಪೈಪ್‌ ಹಾಕಿಕೊಂಡೇ ಬಜೆಟ್‌ ಮಂಡಿಸಿದ ಗೋವಾ ಸಿಎಂ ಮನೋಹರ್ ಪರಿಕ್ಕರ್‌ title=

ಪಣಜಿ : ಹಲವು ತಿಂಗಳುಗಳಿಂದ ಅನಾರೋಗ್ಯಕ್ಕೊಳಗಾಗಿರುವ ಗೋವಾ ಸಿಎಂ ಮನೋಹರ್​ ಪರಿಕ್ಕರ್ ಇಂದು ಮೂಗಿಗೆ ಪೈಪ್​ ಹಾಕಿಕೊಂಡೇ ಬಜೆಟ್​​ ಮಂಡನೆ ಮಾಡಿದ್ದಾರೆ. ಈ ಮೂಲಕ ಅನಾರೋಗ್ಯಕ್ಕೊಳಗಾದರೂ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಅನಾರೋಗ್ಯ ಸ್ಥಿತಿಯಲ್ಲಿಯೇ ತಲೆಗೆ ಕ್ಯಾಪ್ ಧರಿಸಿ ಆಗಮಿಸಿದ ಪರಿಕ್ಕರ್ ಅವರು, ಮೆಲುದನಿಯಲ್ಲಿಯೇ ಬಜೆಟ್ ಮಂಡಿಸಿದರು. 

ಈ ಹಿಂದೆಯೂ ಸಹ ಬ್ರಿಡ್ಜ್​​ ನಿರ್ಮಾಣ ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಮೂಗಿಗೆ ಪೈಪ್​ ಹಾಕಿಕೊಂಡೇ ಪರಿಕ್ಕರ್​ ಆಗಮಿಸಿದ್ದರು. ಇದನ್ನು ಕಾಂಗ್ರೆಸ್​​ ಸೇರಿದಂತೆ ವಿರೋಧ ಪಕ್ಷಗಳು ಖಂಡಿಸಿದ್ದವು. 

Trending News