ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬ್ರಾಹ್ಮಣ ಎಂದು ಸಾಬೀತುಪಡಿಸಲು ಡಿಎನ್ಎ ಸಾಕ್ಷಿ ಕೇಳಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಮಧ್ಯಪ್ರದೇಶದ ಕಾಂಗ್ರೆಸ್ ಸಚಿವ ಗೋವಿಂದ್ ಸಿಂಗ್ ಮಂಗಳವಾರ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಎಎನ್ಐ ವರದಿ ಮಾಡಿದ್ದು, "ಅನಂತ್ ಕುಮಾರ್ ಹೆಗಡೆ ಅವರು ತಮ್ಮ ತಂದೆ-ತಾಯಿಯ ಡಿಎನ್ಎ ನೀಡಿ ತಾವು ಹಿಂದೂಧರ್ಮಕ್ಕೆ ಸೇರಿದವರು ಎಂಬುದನ್ನು ಸಾಬೀತುಪಡಿಸಲಿ. ಕೀಳು ಮಟ್ಟದ ಪದ ಬಳಕೆ ಮಾಡುವ ಮೂಲಕ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಇಂಥವರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದು ಗೋವಿಂದ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ
MP Minister Govind Singh on Ananth Hegde's comment on Rahul Gandhi 'Give DNA proof you're a Hindu':Hegde ji ki Maa aur Pitaji ka DNA liya jaaye, jaanch ki jaye ki unki jaat kya hai. Iss tarah ke shabd bol kar kisi ke samman ko thes pahunchana, aise logon ki baat nahi karna chahta pic.twitter.com/x3ow2RMF5C
— ANI (@ANI) March 12, 2019
ಬಾಲಾಕೋಟ್ ಏರ್ಸ್ಟ್ರೈಕ್ ಬಗ್ಗೆ ಸಾಕ್ಷ್ಯ ಕೇಳುತ್ತಿರುವ ಕಾಂಗ್ರೆಸ್ಗೆ ಪ್ರತಿ ಏಟು ನೀಡಿದ್ದ ಹೆಗಡೆ, ಒಬ್ಬ ಮುಸ್ಲಿಂ ಹುಡುಗ ಗಾಂಧಿ ಎಂಬ ಅಡ್ಡ ಹೆಸರಿನಿಂದ ಬ್ರಾಹ್ಮಣ ಹೇಗಾದ. ಅವರೊಬ್ಬ ಪರದೇಸಿ. ತಾನು ಬ್ರಾಹ್ಮಣ ಎಂದು ಸಾಬೀತು ಪಡಿಸಲು ಅವರು ಡಿಎನ್ಎ ಪರೀಕ್ಷೆ ನಡೆಸಲು ರಾಹುಲ್ ಗಾಂಧಿ ಸಿದ್ಧರಿದ್ದಾರಾ ಎಂದು ಪ್ರಶ್ನಿಸಿದ್ದರು. ಆ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.