Horrible Video: ಬೆನ್ನಟ್ಟಿ ಬಂದು ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ, ಬೆಚ್ಚಿಬೀಳಿಸುತ್ತೆ ವಿಡಿಯೋ

Horrible Video: ನಾಯಿಗಳ ಗುಂಪೊಂದು ನಾಲ್ಕು ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.

Edited by - Zee Kannada News Desk | Last Updated : Jan 2, 2022, 12:51 PM IST
  • ನಾಲ್ಕು ವರ್ಷದ ಬಾಲಕಿಯ ಮೇಲೆ ನಾಯಿಗಳ ದಾಳಿ
  • ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
  • ಭೋಪಾಲ್‌ನ ಬಾಗ್ ಸೆವಾನಿಯಾ ಪ್ರದೇಶದಲ್ಲಿ ಘಟನೆ
Horrible Video: ಬೆನ್ನಟ್ಟಿ ಬಂದು ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ, ಬೆಚ್ಚಿಬೀಳಿಸುತ್ತೆ ವಿಡಿಯೋ   title=
ನಾಯಿಗಳ ದಾಳಿ

ಭೋಪಾಲ್‌: ನಾಯಿಗಳ ಗುಂಪೊಂದು ನಾಲ್ಕು ವರ್ಷದ ಬಾಲಕಿಯ ಮೇಲೆ ದಾಳಿ (Dogs attack on girl) ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಸಿಸಿಟಿವಿಯಲ್ಲಿ (Dog attack in Bhopal) ಸೆರೆಹಿಡಿದ ಭಯಾನಕ ವಿಡಿಯೋದಲ್ಲಿ ನಾಯಿಗಳ ಗುಂಪೊಂದು ನಾಲ್ಕು ವರ್ಷದ ಬಾಲಕಿಯನ್ನು ಬೆನ್ನಟ್ಟಿ ಬಂದು, ನೆಲಕ್ಕೆ ಎಳೆದು ದಾಳಿ ಮಾಡಿವೆ.

ಇದನ್ನು ಕಂಡ ದಾರಿಹೋಕರೊಬ್ಬರು ನಾಯಿಗಳನ್ನು ಓಡಿಸಿದ್ದಾರೆ. ಬಳಿಕ ಬೀದಿ ನಾಯಿಗಳು ಬಾಲಕಿಯನ್ನು ಬಿಟ್ಟು ಹೋಗಿವೆ. ತೀವ್ರ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

ಭೋಪಾಲ್‌ನ ಬಾಗ್ ಸೆವಾನಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೂಲಿ ಕಾರ್ಮಿಕರೊಬ್ಬರ ಮಗಳಾದ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಆಕೆಯ ಮೇಲೆ ಶ್ವಾನಗಳ ದಾಳಿ ನಡೆದಿದೆ. ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಾಯಿಗಳು ಆಕೆಯನ್ನು ಸುತ್ತುವರಿದು ಕಚ್ಚಿವೆ. 

ಇದನ್ನೂ ಓದಿ: Shocking Video:ಆಮ್ಲೆಟ್ ಮಾಡಲು ಮೊಟ್ಟೆ ಒಡೆದ ವ್ಯಾಪಾರಿ.. ಹೊರಬಂತು ಮರಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News