G-20 Summit US President : ಯುಎಸ್ ಅಧ್ಯಕ್ಷ ಜೋ ಬಿಡನ್ ಶುಕ್ರವಾರ ನವೆದೆಹಲಿಗೆ ಆಗಮಿಸಲಿದ್ದು, ಮೂರು ದಿನಗಳಲ್ಲಿ ಮಹತ್ವದ ಸಭೆ ಮತ್ತು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ವೈಟ್ ಹೌಸ್ ತಿಳಿಸಿದೆ.
ಶುಕ್ರವಾರ : ನವದೆಹಲಿಗೆ ಆಗಮಿಸುವ ಮೊದಲು ಜರ್ಮನಿಯ ರಾಮ್‌ಸ್ಟೀನ್‌ನಿಂದ ಪ್ರಯಾಣ ಆರಂಭವಾಗುತ್ತದೆ. ಅದೇ ದಿನ ಜೋ ಬಿಡನ್ ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಇದನ್ನು ಓದಿ - ನನ್ನ ಮಗ ʼಆ ಪದʼ ಬಳಕೆ ಮಾಡಿಲ್ಲ, ಗೊತ್ತಿಲ್ಲದೆ ಮಾತನಾಡಬೇಡಿ : ಪುತ್ರನನ್ನು ಬೆಂಬಲಿಸಿ ಪಿಎಂಗೆ ಸಿಎಂ ಸ್ಟಾಲಿನ್ ಪತ್ರ
ಶನಿವಾರ : ಅಧ್ಯಕ್ಷ ಜೋ ಬಿಡನ್ ಅಧಿಕೃತ ಆಗಮನ ಮತ್ತು ಪ್ರಧಾನಿ ಮೋದಿಯವರೊಂದಿಗೆ ಹಸ್ತಲಾಘವ ನಡೆಯಲಿದೆ. ಇದರ ನಂತರ ಜಿ-20 ನಾಯಕರ "ಒಂದು ಭೂಮಿ ಮತ್ತು ಒಂದು ಕುಟುಂಬ" ಎರಡು ನಿರ್ಣಾಯಕ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಜಾಗತಿಕ ಮೂಲಸೌಕರ್ಯ ಮತ್ತು ಹೂಡಿಕೆಗಾಗಿ ಪಾಲುದಾರಿಕೆ ಎಂಬ ವಿಷಯದ ಮೇಲೆ ಕೇಂದ್ರಿಕೃತವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನದ ಕೊನೆಯಲ್ಲಿ ಜಿ-20 ನಾಯಕರೊಂದಿಗೆ ಭೋಜನದ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಳ್ಳಲಿದೆ.
ಆದಿತ್ಯವಾರ : ಜಿ-20 ನಾಯಕರೊಂದಿಗೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ರಾಜ್ ಘಾಟ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ನಂತರ ನವದೆಹಲಿಯಿಂದ ವಿಯೆಟ್ನಾಂನ ಹಾನೋಯ್‌ಗೆ ಪ್ರಯಾಣ ಬೆಳೆಸಿ, ಹಾನೋಯಿಯಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ವಿಯೆಟ್ನಾಂನ ಪ್ರಧಾನ ಕಾರ್ಯದರ್ಶಿ nguyễn phú trọng ಅವರೊಂದಿಗೆ ಸಭೆ ನಡೆಯಲಿದೆ ಮತ್ತು ಇಬ್ಬರೂ ನಾಯಕರೊಂದಿಗೆ ಟೀಕೆ ನಡೆಸಲಿದ್ದಾರೆ. ವೈಟ್ ಹೌಸ್ ದೃಢೀಕರಿಸಿದಂತೆ ಪತ್ರಿಕಾಗೋಷ್ಠಿಯೊಂದಿಗೆ ಅವರ ಭೇಟಿ ಕೊನೆಗೊಳ್ಳಲಿದೆ.
ಜಿ-20 ಶೃಂಗಸಭೆಯಲ್ಲಿ ಅಧ್ಯಕ್ಷ ಬಿಡೆನ್ ಆರ್ಥಿಕ ಸಹಕಾರ ಮತ್ತು ಬಹುಪಕ್ಷೀಯ ಹೂಡಿಕೆ ಅವಕಾಶಗಳ ಮೇಲೆ ಕೇಂದ್ರಿಕರಿಸಿ ಚರ್ಚಿಸುವ ನಿರೀಕ್ಷೆಯಿದ್ದು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಸುಧಾರಣೆ ಮತ್ತು ಪುನರ್‌ರಚನೆ ಕುರಿತು ಅಮೇರಿಕ ಅಧ್ಯಕ್ಷ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಜೋ ಬಿಡನ್ ಅವರು ಆರ್ಥಿಕ ವಿಷಯಗಳು ಮತ್ತು ಬಹುಪಕ್ಷೀಯ ಸಹಕಾರ ಎಂಬ ವಿಷಯಗಳಿಗೆ ಪ್ರಾಥಮಿಕ ಒತ್ತು ನೀಡಲಿದ್ದಾರೆ. ಅಧ್ಯಕ್ಷ ಜೋ ಬಿಡೆನ್ ಅವರ ಈ ಭೇಟಿಯು G20 ಶೃಂಗಸಭೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.