ನವದೆಹಲಿ: ದೇಶಾದ್ಯಂತ ಸುಮಾರು 2 ಸಾವಿರ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ವೈಫೈ ಸೌಲಭ್ಯ ಈಗ ಲಭ್ಯವಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ರಾಜಸ್ಥಾನದ ಅಜ್ಮೀರ್ ವಿಭಾಗದ ರಾಣಾ ಪ್ರತಾಪ್ ನಗರ ರೈಲ್ವೆ ನಿಲ್ದಾಣವು ಉಚಿತ ಇಂಟರ್ನೆಟ್ ಸೌಲಭ್ಯವನ್ನು ಹೊಂದಿರುವ ದೇಶದ 2000 ನೇ ನಿಲ್ದಾಣವಾಗಿದೆ ಎಂದು ರೈಲ್ ಟೆಲ್ ನ ಸಿಎಂಡಿ ಪುನೀತ್ ಚಾವ್ಲಾ ತಿಳಿಸಿದ್ದಾರೆ.
"ನಮ್ಮ ತಂಡವು ಗಡಿಯಾರ ರೀತಿ ಕೆಲಸ ಮಾಡುತ್ತಿದೆ. ನಿನ್ನೆ ನಾವು 74 ನಿಲ್ದಾಣಗಳನ್ನು ಲೈವ್ ಮಾಡಿದ್ದೇವೆ ಮತ್ತು ಇನ್ನೂ ಕೆಲವು ನಿಲ್ದಾಣಗಳನ್ನು ಉಚಿತ ವೈಫೈನೊಂದಿಗೆ ಲೈವ್ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದೇವೆ, ಇದು ನಮಗೆ ನಂಬಲಾಗದ ಸಾಧನೆಯಾಗಿದೆ" ಎಂದು ಅವರು ಹೇಳಿದರು.
ರೈಲ್ವೆ ಪ್ರಮುಖವಾಗಿ ಡಿಜಿಟಲ್ ಒಳಗೊಳ್ಳುವಿಕೆಯ ವೇದಿಕೆಯನ್ನಾಗಿ ಪರಿವರ್ತಿಸುವ ದೃಷ್ಟಿಯಿಂದ ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆಗಳನ್ನು ಒದಗಿಸಲು ಪ್ರಾರಂಭಿಸಿತು. ಮೊದಲ ಹಂತದಲ್ಲಿ ದೇಶದಾದ್ಯಂತ 1,600 ನಿಲ್ದಾಣಗಳಲ್ಲಿ ವೈಫೈ ಯನ್ನು ಲೈವ್ ಮಾಡಲಾಯಿತು. ಈಗ, ರೈಲ್ವೆ ಟಾಟಾ ಟ್ರಸ್ಟ್‌ನಲ್ಲಿ ನಿಲುಗಡೆಗಳನ್ನು ಹೊರತುಪಡಿಸಿ ಉಳಿದ ನಿಲ್ದಾಣಗಳಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಿದೆ.
ಮುಖ್ಯವಾಗಿ ಗ್ರಾಮೀಣ ಮತ್ತು ಕಡಿಮೆ ಜನಸಂಖ್ಯಾ ಸಾಂದ್ರತೆಯ ಪ್ರದೇಶಗಳನ್ನು ಪೂರೈಸುವ ಈ ಸಣ್ಣ ನಿಲ್ದಾಣಗಳಿಗೆ ಉಚಿತ ವೈಫೈ ಒದಗಿಸುವ ಪ್ರಮುಖ ಉದ್ದೇಶ ಜನರಿಗೆ ಅತ್ಯಾಧುನಿಕ ಅಂತರ್ಜಾಲ ಸೌಲಭ್ಯವನ್ನು ಒದಗಿಸುವುದು ಎಂದು ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.