Free Smartphones And Tablets: ಒಂದು ಲಕ್ಷ ಯುವಕರಿಗೆ ಉಚಿತ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್ ವಿತರಣೆ

CM Yogi Adityanath Will Give Free Mobiles  And Tablets: ಯುಪಿಯಲ್ಲಿ (Uttar Pradesh) ಒಂದು ಲಕ್ಷ ಯುವಕರಿಗೆ ಸರ್ಕಾರ ಉಚಿತ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ನೀಡಲಿದೆ. ಈ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಮೂಲಕ, ಅವರು ಅಧ್ಯಯನಕ್ಕಾಗಿ ವಿಷಯವನ್ನು ಪಡೆಯಲಿದ್ದಾರೆ. ಇದರ ಜೊತೆಗೆ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಸಹ ಸಿಗಲಿದೆ.

Written by - Nitin Tabib | Last Updated : Dec 25, 2021, 01:00 PM IST
  • 1 ಲಕ್ಷ ಯುವಕಯುವತಿಯರಿಗೆ ಉಚಿತ ಸ್ಮಾರ್ಟ್ಫೋನ್ ಹಾಗೂ ಟ್ಯಾಬ್ಲೆಟ್ ವಿತರಣೆ.
  • ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿತಿಯಿಂದ ವಿಶಿಷ್ಟ ಯೋಜನೆ.
  • ಅಟಲ್ ಬಿಹಾರಿ ವಾಜಪೇಯಿ ಜಯಂತಿಯ ಅಂಗವಾಗಿ ಈ ವಿತರಣೆ ಹಮ್ಮಿಕೊಳ್ಳಲಾಗಿದೆ.
Free Smartphones And Tablets: ಒಂದು ಲಕ್ಷ ಯುವಕರಿಗೆ ಉಚಿತ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್ ವಿತರಣೆ title=
CM Yogi Adityanath Will Give Free Mobiles And Tablets (File Photo)

CM Yogi Adityanath Will Give Free Mobiles  And Tablets:ಉತ್ತರ ಪ್ರದೇಶದಲ್ಲಿ, ಶನಿವಾರ (ಡಿಸೆಂಬರ್ 25, 2021), ಸರ್ಕಾರವು ಒಂದು ಲಕ್ಷ ಯುವಕರಿಗೆ ಉಚಿತ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ವಿತರಿಸಲಿದೆ. ಭಾರತರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು (Atal Bihari Vajpayee Birth Anniversary) ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಲಖನೌನಲ್ಲಿ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಯುವಕರಿಗೆ ಈ ಉಡುಗೊರೆ ನೀಡಲಿದ್ದಾರೆ. ಈ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಮೂಲಕ, ಯುವಕರು ತಮ್ಮ ಅಧ್ಯಯನಕ್ಕಾಗಿ ವಿಷಯವನ್ನು ಪಡೆಯಲಿದ್ದಾರೆ ಮತ್ತು ಇದರ ಜೊತೆಗೆ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಹ ನೀಡಲಾಗುವುದು. ಲಖನೌದ  ಅಟಲ್ ಬಿಹಾರಿ ವಾಜಪೇಯಿ ಏಕಾನಾ ಸ್ಟೇಡಿಯಂನಲ್ಲಿ ಅಟಲ್ ಜಯಂತಿಯ ಸಂದರ್ಭದಲ್ಲಿ ಈ ಸ್ಮಾರ್ಟ್‌ಫೋನ್‌ಗಳು (Free Smartphones) ಮತ್ತು ಟ್ಯಾಬ್ಲೆಟ್‌ಗಳನ್ನು (Free Tablets) ವಿತರಿಸಲಾಗುತ್ತಿದೆ.

ಡಿಜಿ ಶಕ್ತಿ ಪೋರ್ಟಲ್, ಡಿಜಿ ಶಕ್ತಿ ಸ್ಟಡಿ ಆಪ್ ಕೂಡ ಬಿಡುಗಡೆ ಮಾಡಲಾಗುವುದು
ಈ ಸಂದರ್ಭದಲ್ಲಿ ಸಿಎಂ ಯೋಗಿ , ಡಿಜಿ ಶಕ್ತಿ ಪೋರ್ಟಲ್ (DG Shakti Portal) ಮತ್ತು ಡಿಜಿ ಶಕ್ತಿ ಸ್ಟಡಿ ಆ್ಯಪ್ (DG Shakti Study App) ಅನ್ನು ಕೂಡ ಬಿಡುಗಡೆ ಮಾಡಲಿದ್ದಾರೆ.  ಡಿಜಿ ಶಕ್ತಿ ಅಧ್ಯಯನ ಅಪ್ಲಿಕೇಶನ್ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಇನ್ಸ್ಟಾಲ್ ಇರಲಿದೆ. ಇದರ ಮೂಲಕ, ಸಂಬಂಧಪಟ್ಟ ವಿಶ್ವವಿದ್ಯಾಲಯ ಅಥವಾ ವಿಭಾಗವು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ವಿಷಯವನ್ನು ನೀಡಲಿದೆ. ಇದರೊಂದಿಗೆ ಉದ್ಯೋಗಕ್ಕೆ ಸಂಬಂಧಿಸಿದ ಯೋಜನೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಸರ್ಕಾರದಿಂದ ನೀಡಲಾಗುವುದು. ಇದಕ್ಕಾಗಿ ಖ್ಯಾತ ಐಟಿ ಕಂಪನಿ ಇನ್ಫೋಸಿಸ್ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದರೊಂದಿಗೆ ಇನ್ಫೋಸಿಸ್ ನ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ 3900 ಕಾರ್ಯಕ್ರಮಗಳು ಯುವಕರಿಗೆ ಉಚಿತವಾಗಿ ಲಭ್ಯವಿರಲಿವೆ.

ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಮೂಲಕ ಯುವಕರಿಗೆ ಅಧ್ಯಯನ, ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಉದ್ಯೋಗಕ್ಕಾಗಿ ಅತ್ಯುತ್ತಮ ವಿಷಯವನ್ನು ಒದಗಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದ್ದು, ಇದರಿಂದ ಯುವಕರು ಸ್ವತಂತ್ರರಾಗಬಹುದು ಎಂದಿದೆ.

ಇದನ್ನೂ ಓದಿ-ಡಿ.1ರೊಳಗೆ ಈ ಮಹತ್ವದ ಕೆಲಸ ಪೂರ್ಣಗೊಳಿಸಿ: ಸರ್ಕಾರದಿಂದ 7 ಲಕ್ಷ ರೂ. ಸಿಗಲಿದೆ

ಜಿಲ್ಲೆಗಳಲ್ಲೂ ಕಾರ್ಯಕ್ರಮಗಳು ನಡೆಯಲಿವೆ
ಶನಿವಾರ ಲಖನೌದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ಯುವಕ-ಯುವತಿಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ಮತ್ತು ಟ್ಯಾಬ್ಲೆಟ್ ಗಳನ್ನು ನೀಡಲಾಗುವುದು. ಇದಾದ ನಂತರ ಜಿಲ್ಲೆಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಇವುಗಳನ್ನು ವಿತರಿಸಲಾಗುವುದು.

ಇದನ್ನೂ ಓದಿ-Omicron Updates: ಹೆಚ್ಚಾಗುತ್ತಿರುವ ಓಮಿಕ್ರಾನ್ ಹರಡುವಿಕೆ ತಡೆಗಟ್ಟಲು ಸಾಧ್ಯವಿಲ್ಲ, ಕೈ ಮೇಲಕ್ಕೆತ್ತಿದ ತಜ್ಞರ ಸಮಿತಿ ವೈದ್ಯರು

ಡಿಸೆಂಬರ್ 25 ರ ನಂತರ ಮತ್ತೆ ನೋಂದಣಿ ಮಾಡಲಾಗುತ್ತದೆ
ನೋಂದಾಯಿಸಿಕೊಳ್ಳದ ಯುವಕರು ಡಿಸೆಂಬರ್ 25 ರ ನಂತರ ಡಿಜಿ ಶಕ್ತಿ ಪೋರ್ಟಲ್‌ನಲ್ಲಿ ಮರು ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ-ITR ದಾಖಲಿಸಿ Royal Enfield Bullet ಗೆಲ್ಲಿ, ಅವಕಾಶ ಡಿಸೆಂಬರ್ 31ರವರೆಗೆ ಮಾತ್ರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News