ಮಾಜಿ ಮಿಸ್ ಇಂಡಿಯಾ ಸ್ಪರ್ಧಿ ರಿಂಕಿ ಚಕ್ಮಾ ಕ್ಯಾನ್ಸರ್ ನಿಂದ ಸಾವು

Miss India : ತ್ರಿಪುರ ಮೂಲದ ಮಾಜಿ ಮಿಸ್ ಇಂಡಿಯಾ ಸ್ಪರ್ಧೆ ರಿಂಕಿ ಚಕ್ಮಾ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ.

Written by - Zee Kannada News Desk | Last Updated : Mar 1, 2024, 08:06 PM IST
  • ಎರಡು ವರ್ಷಗಳ ಹಿಂದೆ ಕ್ಯಾನ್ಸರ್ ಗೆ ತುತ್ತಾಗಿದ್ದ ಮಾಜಿ ಮಿಸ್ ಇಂಡಿಯಾ ರಿಂಕಿ ಚಕ್ಮಾ ನಿಧನರಾಗಿದ್ದಾರೆ
  • ಶ್ವಾಸಕೋಶದಲ್ಲಿ ಮೊದಲು ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಅದಾದ ನಂತರ ಮೆದುಳಿನ ಮೇಲೆ ಪರಿಣಾಮ ಬೀರಿತು.
  • ಕಿಮೋ ತೆರಪಿ ಇಂದ ಮಾತ್ರ ನಾನು ಬದುಕಲು ಸಾಧ್ಯ ಅದು ಶೇಕಡ 30ರಷ್ಟು ಮಾತ್ರ ಬದುಕುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ
ಮಾಜಿ ಮಿಸ್ ಇಂಡಿಯಾ ಸ್ಪರ್ಧಿ ರಿಂಕಿ ಚಕ್ಮಾ ಕ್ಯಾನ್ಸರ್ ನಿಂದ ಸಾವು  title=

Former Miss India contestant Rinki Chakma : ಎರಡು ವರ್ಷಗಳ ಹಿಂದೆ ಕ್ಯಾನ್ಸರ್ ಗೆ ತುತ್ತಾಗಿದ್ದ ಮಾಜಿ ಮಿಸ್ ಇಂಡಿಯಾ ರಿಂಕಿ ಚಕ್ಮಾ ನಿಧನರಾಗಿದ್ದಾರೆ ಎಂದು ಮಿಸ್ ಇಂಡಿಯಾ ಸಂಸ್ಥೆ ಪೋಸ್ಟ್ ಹಂಚಿಕೊಂಡಿದ್ದು ಸಂತಾಪ ಸೂಚಿಸಿದೆ.

ಕಳೆದ ತಿಂಗಳು ರಿಂಕಿ ಇನ್ಸ್ಟಾಗ್ರಾಮ್ ನಲ್ಲಿ ಕ್ಯಾನ್ಸರ್ ಇರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು ನಾನು ಈ ವಿಚಾರವನ್ನು ಯಾರಲ್ಲಿಯೂ ಹಂಚಿಕೊಂಡಿರಲಿಲ್ಲ ಆದರೆ ಈಗ ಹೇಳುವ ಸಮಯ ಬಂದಿದೆ ಎಂದು ಹೇಳಿಕೊಂಡಿದ್ದರು. 

ಇದನ್ನು ಓದಿ : BMRCL : ತುಮಕೂರಿಗೆ ಕಾಲಿಡಲಿರುವ ನಮ್ಮ ಮೆಟ್ರೋ : ಹೊಸ ಅಪಡೇಟ್ ನೀಡಿದ ಬಿಎಂಆರ್ ಸಿಎಲ್

ಶ್ವಾಸಕೋಶದಲ್ಲಿ ಮೊದಲು ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಅದಾದ ನಂತರ ಮೆದುಳಿನ ಮೇಲೆ ಪರಿಣಾಮ ಬೀರಿತು.  ಈಗಾಗಲೇ ಕ್ಯಾನ್ಸರ್ ನನ್ನ ಅರ್ಥ ದೇಹವನ್ನ ಆವರಿಸಿದೆ ಮತ್ತು ತಲೆಗೆ ಶಸ್ತ್ರಚಿಕಿತ್ಸೆ ಆಗಬೇಕಿದೆ. 

ಕಿಮೋ ತೆರಪಿ ಇಂದ ಮಾತ್ರ ನಾನು ಬದುಕಲು ಸಾಧ್ಯ ಅದು ಶೇಕಡ 30ರಷ್ಟು ಮಾತ್ರ ಬದುಕುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮೊದಲ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ರಿಂಕಿಯವರು ಆರೋಗ್ಯ ಸಮಸ್ಯೆಯ ಕುರಿತು ಮಾಹಿತಿಯನ್ನು ಬಹಿರಂಗಪಡಿಸಿದ್ದರು. 

ಇದನ್ನು ಓದಿ : Daily GK Quiz: X- ಕಿರಣಗಳನ್ನು ಕಂಡುಹಿಡಿದವರು ಯಾರು..?

ರಿಂಕಿ ಚಕ್ಮಾ ಅವರು 2017ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ "ಬ್ಯೂಟಿ ವಿಥ್ ಎ ಪರ್ಪಸ್" ಎಂಬ ಪ್ರಶಸ್ತಿಯನ್ನು ಗಳಿಸಿದ್ದರು. ಮಿಸ್ ಇಂಡಿಯಾ ಸಂಸ್ಥೆ ತನ್ನ ಪೋಸ್ಟ್ ನಲ್ಲಿ ಈ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ಸೂಚಿಸುತ್ತೇವೆ ಮತ್ತು ರಿಂಕಿ ಅವರ ಆತ್ಮಕ್ಕೆ ಶಾಂತಿ ಸಿಗಲಿ,  ನಿಮ್ಮ ಉದ್ದೇಶ ಮತ್ತು ಸೌಂದರ್ಯದ ಪರಂಪರೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಬರೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News